ETV Bharat / international

ಸ್ಮಾರಕಗಳು- ಪ್ರತಿಮೆಗಳ ರಕ್ಷಣೆಗೆ ಕಠಿಣ ಕಾನೂನು ಜಾರಿಗೊಳಿಸಿದ ಟ್ರಂಪ್​ - ಡೊನಾಲ್ಡ್ ಟ್ರಂಪ್ ಟ್ವೀಟ್

ಪ್ರತಿಭಟನಾಕಾರರು ಶ್ವೇತಭವನದ ಬಳಿ ಮಾಜಿ ಅಧ್ಯಕ್ಷ ಆಂಡ್ರ್ಯೂ ಜಾಕ್ಸನ್ ಅವರ ಪ್ರತಿಮೆಯನ್ನು ಧ್ವಂಸ ಮಾಡಲು ಪ್ರಯತ್ನಿಸಿದ ಬಳಿಕ, ದೇಶದ ಸ್ಮಾರಕಗಳು ಮತ್ತು ಪ್ರತಿಮೆಗಳನ್ನು ವಿಧ್ವಂಸಕ ಕೃತ್ಯಗಳಿಂದ ರಕ್ಷಿಸುವ ಉದ್ದೇಶದಿಂದ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

trump
trump
author img

By

Published : Jun 27, 2020, 10:48 AM IST

ವಾಷಿಂಗ್ಟನ್(ಅಮೆರಿಕ): ದೇಶದ ಸ್ಮಾರಕಗಳು ಮತ್ತು ಪ್ರತಿಮೆಗಳನ್ನು ವಿಧ್ವಂಸಕ ಕೃತ್ಯಗಳಿಂದ ರಕ್ಷಿಸುವ ಉದ್ದೇಶದಿಂದ ಅತ್ಯಂತ ಬಲವಾದ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

"ಅಮೆರಿಕದ ಸ್ಮಾರಕಗಳು ಮತ್ತು ಪ್ರತಿಮೆಗಳನ್ನು ರಕ್ಷಿಸುವ ಮತ್ತು ಇತ್ತೀಚಿನ ಕ್ರಿಮಿನಲ್ ಹಿಂಸಾಚಾರವನ್ನು ಎದುರಿಸುವ ಅತ್ಯಂತ ಬಲವಾದ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕುವ ಭಾಗ್ಯವನ್ನು ನಾನು ಹೊಂದಿದ್ದೇನೆ. ದೇಶದ ವಿರುದ್ಧದ ಈ ಕಾನೂನುಬಾಹಿರ ಕೃತ್ಯಗಳಿಗೆ ದೀರ್ಘ ಜೈಲು ಶಿಕ್ಷೆ ಪಕ್ಕಾ’’ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

  • I just had the privilege of signing a very strong Executive Order protecting American Monuments, Memorials, and Statues - and combatting recent Criminal Violence. Long prison terms for these lawless acts against our Great Country!

    — Donald J. Trump (@realDonaldTrump) June 26, 2020 " class="align-text-top noRightClick twitterSection" data=" ">

ಕಾರ್ಯನಿರ್ವಾಹಕ ಆದೇಶದ ಕುರಿತು ಶ್ವೇತಭವನವು ಇನ್ನೂ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಜಾರ್ಜ್ ಫ್ಲಾಯ್ಡ್ ಸಾವಿನ ನಂತರ ಪೊಲೀಸ್ ದೌರ್ಜನ್ಯದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿದ್ದು, ಹಲವಾರು ಸ್ಮಾರಕಗಳು ಮತ್ತು ಪ್ರತಿಮೆಗಳನ್ನು ಪ್ರತಿಭಟನಾಕಾರರು ಧ್ವಂಸಗೊಳಿಸುತ್ತಿದ್ದಾರೆ.

ಪ್ರತಿಭಟನಾಕಾರರು ಶ್ವೇತಭವನದ ಬಳಿ ಮಾಜಿ ಅಧ್ಯಕ್ಷ ಆಂಡ್ರ್ಯೂ ಜಾಕ್ಸನ್ ಅವರ ಪ್ರತಿಮೆಯನ್ನು ಧ್ವಂಸ ಮಾಡಲು ಪ್ರಯತ್ನಿಸಿದ ಬಳಿಕ ಈ ಆದೇಶವನ್ನು ಸಿದ್ಧಪಡಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.