ETV Bharat / international

ಅಮೆರಿಕ ಇತಿಹಾಸದಲ್ಲೇ ಅತ್ಯಂತ ಅಸಮರ್ಥನೀಯ ನಾಯಕ ಟ್ರಂಪ್ : ಬೈಡನ್ - ಅಮೆರಿಕ ಅಧ್ಯಕ್ಷ ಜೋ ಬೈಡನ್

ಸಾಂಪ್ರದಾಯಿಕವಾಗಿ, ಮಾಜಿ ಅಧ್ಯಕ್ಷರಿಗೆ ಅವರ ಉತ್ತರಾಧಿಕಾರಿಗಳು ಮಾಡುವ ಗುಪ್ತಚರ ವಿವರಗಳನ್ನು ಸ್ವೀಕರಿಸಲು ಅವಕಾಶ ನೀಡಲಾಗಿದೆ. ಈ ಹಂತದಲ್ಲಿ ಟ್ರಂಪ್ ಯಾವುದೇ ಮನವಿಗಳನ್ನು ಸಲ್ಲಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೈಡನ್
ಬೈಡನ್
author img

By

Published : Feb 6, 2021, 12:49 PM IST

ವಾಷಿಂಗ್ಟನ್: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ವರ್ಗೀಕೃತ ಗುಪ್ತಚರ ಮಾಹಿತಿ ಪಡೆಯುವ ಉದ್ದೇಶ ಹೊಂದಿಲ್ಲ ಎಂದು ನನಗನಿಸುತ್ತದೆ ಅಂತಾ ಹಾಲಿ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಸಾಂಪ್ರದಾಯಿಕವಾಗಿ, ಮಾಜಿ ಅಧ್ಯಕ್ಷರಿಗೆ ಅವರ ಉತ್ತರಾಧಿಕಾರಿಗಳು ಮಾಡುವ ಗುಪ್ತಚರ ವಿವರಗಳನ್ನು ಸ್ವೀಕರಿಸಲು ಅವಕಾಶ ನೀಡಲಾಗಿದೆ. ಈ ಹಂತದಲ್ಲಿ ಟ್ರಂಪ್ ಯಾವುದೇ ಮನವಿಗಳನ್ನು ಸಲ್ಲಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಪ್ತಚರ ಇಲಾಖೆಯು ಮಾಜಿ ಅಧ್ಯಕ್ಷ ಟ್ರಂಪ್ ಅವರ ಮನವಿಯನ್ನು ಬೆಂಬಲಿಸುತ್ತದೆ. ಆದರೆ ಈವರೆಗೆ ಯಾವುದೇ ಮನವಿ ಸಲ್ಲಿಸಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ.

ಕ್ಯಾಪಿಟಲ್ ದಂಗೆ ಉಲ್ಲೇಖಿಸಿ ಮಾತನಾಡಿದ ಬೈಡನ್, ಅಮೆರಿಕ ಇತಿಹಾಸದಲ್ಲೇ ಅತ್ಯಂತ ಅಸಮರ್ಥನೀಯ ನಾಯಕ ಟ್ರಂಪ್. ಕಳೆದ ಒಂದು ವರ್ಷದಿಂದ ಅವರು ಯುಎಸ್​ನಲ್ಲಿ ಆಡಳಿತ ನಡೆಸಲು ಯೋಗ್ಯವಾಗಿರಲಿಲ್ಲ ಎಂದು ದೂರಿದ್ದಾರೆ.

ಟ್ರಂಪ್ ಅವರ ಎರಡನೇ ದೋಷಾರೋಪಣೆ ವಿಚಾರಣೆ ಮುಂದಿನ ವಾರದಲ್ಲಿ ಪ್ರಾರಂಭವಾಗಲಿದೆ. ಯುಎಸ್ ಕ್ಯಾಪಿಟಲ್​ನಲ್ಲಿ ಜನವರಿ 6 ರಂದು ನಡೆದ ಗಲಭೆಯಲ್ಲಿ ಅವರ ಪಾತ್ರವಿತ್ತು ಎಂದು ಆರೋಪಿಸಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.