ನ್ಯೂಯಾರ್ಕ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುವ ಜನರಿಗೆ ದೇಶದ 'ನೈಜ ಇತಿಹಾಸ' ಕಲಿಸಲು 5 ಬಿಲಿಯನ್ ನಿಧಿ ರಚಿಸಲು ಒರಾಕಲ್ ಮತ್ತು ವಾಲ್ಮಾರ್ಟ್ ಜೊತೆಗಿನ ಟಿಕ್‌ಟಾಕ್ ಒಪ್ಪಂದ ಬಳಸಲು ಪ್ರಯತ್ನಿಸಿದ್ದಾರೆ.
ಈ ಮೂಲಕ ಚೀನಾ ಮೂಲದ ಕಂಪನಿ ಬೈಟ್‌ಡ್ಯಾನ್ಸ್ ಒಡೆತನದ ಟಿಕ್‌ಟಾಕ್, ಅಮೆರಿಕಾದಲ್ಲಿ ಮುಂದುವರಿಯಲು ತಾತ್ಕಾಲಿಕ ಒಪ್ಪಿಗೆ ಪಡೆದಿದ್ದು, ನಿಷೇಧ ತಪ್ಪಿಸಿದೆ. ಯುಎಸ್ ವಾಣಿಜ್ಯ ಇಲಾಖೆ ಅಮೆರಿಕಾದಲ್ಲಿ ಟಿಕ್‌ಟಾಕ್ ನಿಷೇಧವನ್ನು ಒಂದು ವಾರ ವಿಳಂಬಗೊಳಿಸಿದೆ.
ಅಮೆರಿಕಾದಲ್ಲಿ ಟಿಕ್‌ಟಾಕ್ ತಿಂಗಳಿಗೆ 100 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಉತ್ತರ ಕೆರೊಲಿನಾದಲ್ಲಿ ಚುನಾವಣಾ ರ್ಯಾಲಿಗಾಗಿ ಶ್ವೇತಭವನದಿಂದ ಹೊರಟ ಟ್ರಂಪ್, ಈ ಒಪ್ಪಂದದಿಂದ ಶಿಕ್ಷಣ ನಿಧಿಯ ಕುರಿತು ಮಾತನಾಡಿದರು ಎಂದು ಯುಎಸ್ಎ ಟುಡೇ ವರದಿ ಮಾಡಿದೆ.