ವಾಷಿಂಗ್ಟನ್: ಮಲೇರಿಯಾ ರೋಗಕ್ಕೆ ಬಳಸುವ ಔಷಧವನ್ನು ಸೇವಿಸಿದರೆ ಕೊರೊನಾ ವೈರಸ್‌ನಿಂದ ರಕ್ಷಣೆ ಪಡೆಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಕೊರೊನಾಗೆ ಮಲೇರಿಯಾ ಔಷಧ ಬಳಸಿದರೆ ಅಡ್ಡಪರಿಣಾಮಗಳು ಸಂಭವಿಸುವ ಸಾಧ್ಯತೆ ಇದಿಯೇ ಎಂಬುದನ್ನು ತಿಳಿಯುವಂತೆ ಅಲ್ಲಿನ ಆಸ್ಪತ್ರೆಗಳು ಮತ್ತು ಸಂಶೋಧನಾ ಕೇಂದ್ರಗಳಿಗೆ ಸೂಚಿಸಿದ್ದಾರೆ.
ಹಲವು ವಾರಗಳಿಂದ ಹೈಡ್ರಾಕ್ಸಿಕ್ಲೋರೊಕ್ವಿನ್ ಮತ್ತು ಜಿಂಕ್ ಔಷಧವನ್ನು ನಿತ್ಯ ಪೂರೈಕೆ ಮಾಡಲಾಗುತ್ತಿತ್ತು. ಇದೀಗ ಈ ಪ್ರಮಾಣವನ್ನು ಅರ್ಧಕ್ಕೆ ಸೀಮಿತಗೂಳಿಸಲಾಗಿದೆ. ಕೋವಿಡ್-19 ರೋಗ ಗುಣ ಪಡಿಸಲು ಪ್ರೊಫಿಲಾಕ್ಸಿಸ್‌ನಿಂದ ಸಾಧ್ಯವಿದೆಯೇ ಎಂಬುದನ್ನು ತಿಳಿಸಿ ಹಾಗೂ ಮುನ್ನೆಚ್ಚರಿಕೆ ಸಲಹೆಗಳನ್ನು ನೀಡುವಂತೆ ಉನ್ನತ ಮಟ್ಟದ ವೈದ್ಯರು, ವೃತ್ತಿಪರರನ್ನು ಒತ್ತಾಯಿಸಿದ್ದಾರೆ.
ತಮ್ಮ ವೈದ್ಯರು ಈ ಸಲಹೆಯನ್ನು ನನಗೆ ನೀಡಿಲ್ಲ, ನಾನೇ ವೈಟ್‌ಹೌಸ್‌ನ ಫಿಸಿಷಿಯನ್‌ಗೆ ಮನವಿ ಮಾಡಿಕೊಂಡಿದ್ದೇನೆ ಅಂತ ಹೇಳಿದ್ದಾರೆ. ಇದೊಂದು ಒಳ್ಳೆಯ ಔಷಧವಾಗಿದ್ದು, ನಾನು ಸಹ ಹಲವು ವಾರಗಳಿಂದ ಹೈಡ್ರೋಕ್ಲೋರೊಕ್ವಿನ್ ಸೇವಿಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕಿತರಿಗೆ ಈ ಔಷಧ ನೀಡುವುದರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ಟ್ರಂಪ್ ನೇತೃತ್ವದಲ್ಲಿ ನಿರಂತರ ಚರ್ಚೆಗಳು ನಡೆದಿವೆ ಎಂದು ವೈಟ್‌ಹೌಸ್‌ನ ಡಾ.ಸಿಯಾನ್ ಕಾನ್ಲೆ ತಿಳಿಸಿದ್ದಾರೆ.