ವಾಷಿಂಗ್ಟನ್: ಈ ಹಿಂದೆ ಮತ ಎಣಿಕೆಯ ಬಗ್ಗೆ ಸಾಕಷ್ಟು ಆರೋಪ ಮಾಡಿದ್ದ ನಿರ್ಗಮಿತ ಯುಎಸ್ ಅಧ್ಯಕ್ಷ ಟ್ರಂಪ್, ಚುನಾಯಿತ ಅಧ್ಯಕ್ಷ ಜೋ ಬೈಡನ್‌ಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದರು. ಆದರೆ, ಇದೀಗ ಟ್ರಂಪ್ ಶ್ವೇತ ಭವನ ತೊರೆಯುವ ಬಗ್ಗೆ ಮಾತನಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಜೋ ಬೈಡನ್ ವಿಜಯ ದಾಖಲಿಸಿದ್ದಾರೆ ಎಂದು ಚುನಾವಣಾ ಆಯೋಗ ಔಪಚಾರಿಕವಾಗಿ ಹೇಳಿದರೆ, ತಾವು ಶ್ವೇತ ಭವನ ತೊರೆಯುವುದಾಗಿ ನಿರ್ಗಮಿತ ಯುಎಸ್ ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ.
ಶ್ವೇತ ಭವನ ತೊರೆಯುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ನಾನು ಖಂಡಿತವಾಗಿಯೂ ಶ್ವೇತ ಭವನ ತೊರೆಯುತ್ತೇನೆ. ಚುನಾವಣಾ ಆಯೋಗ ಔಪಚಾರಿಕವಾಗಿ ಜೋ ಬೈಡನ್ ಗೆಲುವು ದಾಖಲಿಸಿದ್ದಾರೆ ಎಂದು ತಿಳಿಸಲಿ. ಆ ಬಳಿಕ ನಾನು ಖಂಡಿತವಾಗಿಯೂ ಶ್ವೇತ ಭವನ ತೊರೆಯುತ್ತೇನೆ ಎಂದರು.