ವಾಷಿಂಗ್ಟನ್ (ಯು.ಎಸ್): ಅಮೆರಿಕಾದ ಮಾಧ್ಯಗಳಿಗಿಂತ ಭಾರತದಲ್ಲಿ ನನ್ನನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಓವಲ್ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
"ನಾನು ಮೋದಿಯವರನ್ನು ಇಷ್ಟಪಡುತ್ತೇನೆ. ಅವರು ಒಬ್ಬ ಮಹಾನ್ ಸಂಭಾವಿತ ವ್ಯಕ್ತಿ" ಎಂದು ಅವರು ಹೇಳಿದರು.
ಚೀನಾ ಹಾಗೂ ಭಾರತದ ನಡುವಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸುವುದಾಗಿಯೂ ಟ್ರಂಪ್ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷರ ನಡುವೆ ಕೊನೆಯ ಸಂವಾದ ಏಪ್ರಿಲ್ 20ರಂದು ನಡೆದಿತ್ತು. ಹೈಡ್ರಾಕ್ಸಿಕ್ಲೋರೋಕ್ವಿನ್ ಕುರಿತು ಅವರು ಮಾತನಾಡಿದ್ದರು ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಈ ನಡುವೆ ಟ್ರಂಪ್ ಮಧ್ಯಸ್ಥಿಕೆ ಆಫರ್ ಅನ್ನು ಚೀನಾ ತಳ್ಳಿಹಾಕಿದೆ. ನಮಗೆ ಮೂರನೇಯವರ ಅವಶ್ಯಕತೆ ಇಲ್ಲ ಎಂದು ಹೇಳಿದೆ.