ETV Bharat / international

ಚುನಾವಣೆ ರದ್ದುಗೊಳಿಸುವ ಉದ್ದೇಶಕ್ಕೆ 255 ಮಿ.ಡಾಲರ್ ಸಂಗ್ರಹಿಸಿದ ಟ್ರಂಪ್!

author img

By

Published : Feb 1, 2021, 10:34 AM IST

ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನು ರದ್ದುಗೊಳಿಸುವ ಉದ್ದೇಶದಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಟು ವಾರಗಳಲ್ಲಿ 255 ಮಿಲಿಯನ್ ಡಾಲರ್ ಸಂಗ್ರಹಿಸಿದ್ದರಂತೆ.

trump
trump

ವಾಷಿಂಗ್ಟನ್ (ಯುಎಸ್): ಚುನಾವಣೆಯನ್ನು ರದ್ದುಗೊಳಿಸುವ ಹಾಗೂ ಚುನಾವಣಾ ಫಲಿತಾಂಶಗಳನ್ನು ದುರ್ಬಲಗೊಳಿಸುವ ಉದ್ದೇಶದಿಂದ ನವೆಂಬರ್ 3ರ ಚುನಾವಣೆಯ ನಂತರ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷವು 255.4 ಮಿಲಿಯನ್ ಡಾಲರ್​ಗಳನ್ನು ಸಂಗ್ರಹಿಸಿದ್ದರು ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ನವೆಂಬರ್ 7ರಂದು ಜೋ ಬೈಡೆನ್ ಗೆದ್ದಿದ್ದಾರೆ ಎಂದು ಘೋಷಣೆಯಾದ ನಂತರದ ದಿನಗಳಲ್ಲಿ ಟ್ರಂಪ್ ಅವರ ನಿಧಿಸಂಗ್ರಹ ಕಾರ್ಯ ನಡೆದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ನವೆಂಬರ್ 24ರಿಂದ ವರ್ಷದ ಅಂತ್ಯದವರೆಗೆ ಎರಡು ದಶಲಕ್ಷಕ್ಕೂ ಹೆಚ್ಚಿನ ಹಣ ಟ್ರಂಪ್ ಹಾಗೂ ರಿಪಬ್ಲಿಕನ್ ರಾಷ್ಟ್ರೀಯ ಸಮಿತಿಯ (ಆರ್‌ಎನ್‌ಸಿ) ಖಾತೆಗಳಿಗೆ ಹರಿದು ಬಂದಿದೆ ಎಂದು ವರದಿಯಾಗಿದೆ.

ಆನ್‌ಲೈನ್ ದೇಣಿಗೆಗಳ ಕುರಿತು ತಿಳಿಸುವ ಡಿಜಿಟಲ್ ಪ್ಲಾಟ್‌ಫಾರ್ಮ್ ವಿನ್‌ರೆಡ್ ಫೆಡರಲ್ ಚುನಾವಣಾ ಆಯೋಗದ ದಾಖಲಾತಿಯಲ್ಲಿ ವಾರಾಂತ್ಯದಲ್ಲಿ ದೇಣಿಗೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.