ವಾಷಿಂಗ್ಟನ್: ಅಧಿಕಾರ ದುರುಪಯೋಗದ ಆರೋಪಕ್ಕೆ ಗುರಿಯಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಿಚಾರಣೆ ಮುಂದಿನ ಮಂಗಳವಾರದಿಂದ ವಿಚಾರಣೆ ನಡೆಯಲಿದೆ.
ಈ ಹಿನ್ನೆಲೆ ಟ್ರಂಪ್ ವಿಚಾರಣೆ ನಡೆಸಲು ಅಮೆರಿಕಾದ ಚೀಫ್ ಜಸ್ಟಿಸ್ ಆಗಿರುವ ಜಾನ್ ರಾಬರ್ಟ್ ಅಮೆರಿಕಾ ಸಂಸತ್ನಲ್ಲಿ ಪ್ರಮಾಣ ಸ್ವೀಕರಿಸಿದ್ದಾರೆ. ಈ ರೀತಿ ವಿಚಾರಣೆ ಎದುರಿಸುತ್ತಿರುವ ಅಮೆರಿಕಾದ ಮೂರನೇ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಗುರಿಯಾಗಿದ್ದಾರೆ.
ಜಾನ್ ರಾಬರ್ಟ್ ಅಧ್ಯಕ್ಷತೆಯಲ್ಲಿ ವಿಚಾರಣೆ ನಡೆಯಲಿದ್ದು, 100 ಸದಸ್ಯರಿರುವ ಸೆನೆಟ್(ಸಂಸತ್)ನಲ್ಲಿ 99 ಜನರ ಉಪಸ್ಥಿತಿಯಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆಪಶ್ಚಿಮ ರಾಜ್ಯ ಒಕ್ಲಹಹೊಮ್ ಸೆನೆಟರ್(ಸಂಸದ) ಜೇಮ್ಸ್ ಇನ್ಹೊಪೆ ಅವರು ಈ ಸಂದರ್ಭದಲ್ಲಿ ಗೈರಾಗಿದ್ದರು.
ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಪ್ರಮಾಣವಚನ ಭೋದಿಸಿದ್ದು, ಎಲ್ಲಾ ಸೆನೆಟರ್‌ಗಳು ಎದ್ದು ನಿಂತು ತಮ್ಮ ಬಲಗೈ ಎತ್ತಿ ಎಂದು ಜಸ್ಟಿಸ್ ರಾಬರ್ಟ್ ಸಂಸತ್ನಲ್ಲಿ ಹೇಳಿದಾಗ ಎಲ್ಲರೂ ಎದ್ದು ನಿಂತರು. ಬಳಿಕ ಸಂವಿಧಾನ ಹಾಗೂ ಕಾನೂನಿನ ಪ್ರಕಾರ ಟ್ರಂಪ್ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಲು ಎಲ್ಲರೂ ಸಿದ್ದರಿದ್ದೀರೆ ಎಂದು ಕೇಳಿದಾಗ ಎಲ್ಲರೂ ಒಕ್ಕೊರಲಿನಿಂದ ಸಿದ್ದವಿದ್ದೇವೆ (I do) ಎಂದು ಹೇಳಿ ಪ್ರಮಾಣ ಸ್ವೀಕರಿಸಿದ್ದಾಗಿ ತಿಳಿದು ಬಂದಿದೆ. ನಂತರ ಎಲ್ಲರೂ ಅಧಿಕಾರ ದುರುಪಯೋಗ ಆರೋಪದ ತನಿಖೆಯ ಪುಸ್ತಕದಲ್ಲಿ ಸಹಿ ಮಾಡಿದ್ದಾರೆ.
"ಸೆನೆಟ್ ಅನುಮತಿಯೊಂದಿಗೆ, ನಾನು ಈಗ ದೋಷಾರೋಪಣೆಯ ಲೇಖನಗಳನ್ನು ಓದುತ್ತೇನೆ" ಎಂದು ಸೆನೆಟ್ ಮಹಡಿಯಲ್ಲಿ ಹೌಸ್ ಇಂಟೆಲಿಜೆನ್ಸ್ ಸಮಿತಿಯ ಅಧ್ಯಕ್ಷ ಲೀಡ್ ಮ್ಯಾನೇಜರ್ ಆಡಮ್ ಸ್ಚಿಫ್ ಹೇಳಿದರು. ಬಳಿಕ "ಹೌಸ್ ರೆಸಲ್ಯೂಶನ್ 755 ಹೆಚ್ಚಿನ ಅಪರಾಧಗಳು ಮತ್ತು ದುಷ್ಕೃತ್ಯಗಳಿಗಾಗಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಜಾನ್ ಟ್ರಂಪ್ ಅವರನ್ನು ದೋಷಾರೋಪಿ ಮಾಡಲಾಗಿದೆ" ಎಂದು ಒಂಬತ್ತು ಪುಟಗಳ ದೋಷಾರೋಪಣೆ ದಾಖಲೆಯನ್ನುಸೆನೆಟ್ನಲ್ಲಿ ಸ್ಚಿಪ್ ಓದಿದರು.
ಯುಎಸ್ ಸಂವಿಧಾನದ ಪ್ರಕಾರ, ಇಂತಹ ಸಂದರ್ಬದಲ್ಲಿ ಮುಖ್ಯ ನ್ಯಾಯಮೂರ್ತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಸೆನೆಟರ್‌ಗಳು ಅಂತಿಮ ತೀರ್ಪು ನೀಡುತ್ತಾರೆ.