ETV Bharat / international

ಕೊರೊನಾ ಬಗ್ಗೆ ಮೊದಲೇ ನೀಡಿದ್ದ 12 ಎಚ್ಚರಿಕೆ ನಿರ್ಲಕ್ಷಿಸಿದ ಟ್ರಂಪ್​​: ಸಿಐಎ ಆರೋಪ - ಸಿಐಎ

ವಿಶ್ವವ್ಯಾಪಿ ಭಯ ಹುಟ್ಟಿಸಿರುವ ಕೊರೊನಾ ವೈರಸ್​ ಬಗ್ಗೆ ಈ ಹಿಂದೆಯೇ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ಗೆ ಮುಂಜಾಗೃತ ಕ್ರಮವಾಗಿ 12 ಎಚ್ಚರಿಕೆಗಳನ್ನು ನೀಡಿತ್ತು. ಆದರೆ, ಟ್ರಂಪ್​ ಈ ಎಚ್ಚರಿಕೆಗಳ ಬಗ್ಗೆ ನಿಗಾ ವಹಿಸದ ಕಾರಣ ಕೊರೊನಾ ಮಹಾಮಾರಿ ಅಮೆರಿಕದಲ್ಲಿ ಈ ಮಟ್ಟಿಗೆ ಹಬ್ಬಲು ಕಾರಣವಾಗಿದೆ ಎಂದು ಸಿಐಎ ಹೇಳಿಕೆ ನೀಡಿದೆ.

Trump
ಟ್ರಂಪ್
author img

By

Published : Apr 29, 2020, 11:26 PM IST

ವಾಷಿಂಗ್ಟನ್(ಅಮೆರಿಕ): ವಿಶ್ವವ್ಯಾಪಿ ಹರಡಿರುವ ಕೊರೊನಾ ವೈರಸ್​​ ಬಗ್ಗೆ ಅಮೆರಿಕಕ್ಕೂ ಸಹ ಅಪಾಯವಿದೆ ಎಂದು ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಈ ಹಿಂದೆಯೇ ಕನಿಷ್ಠ 12 ಎಚ್ಚರಿಕೆಗಳನ್ನು ನೀಡಿತ್ತು. ಆದರೆ, ಟ್ರಂಪ್ ನಿರ್ಲಕ್ಷ್ಯದಿಂದಾಗಿ ಈ ರೋಗವು ಯುಎಸ್ ದೇಶವನ್ನು ಆವರಿಸಿಕೊಳ್ಳುವಂತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾಲಿ ಮತ್ತು ಮಾಜಿ ಅಮೆರಿಕದ ಗುಪ್ತಚರ ಅಧಿಕಾರಿಗಳು ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿಯೇ ಅಧ್ಯಕ್ಷರ ಡೈಲಿ ಬ್ರೀಫ್‌ನ ವಿಷಯಗಳಲ್ಲಿ ಈ ಬಗ್ಗೆ ಎಚ್ಚರಿಕೆಗಳನ್ನು ನೀಡಿದ್ದರು. ಆದರೆ, ಟ್ರಂಪ್ ಪದೇ ಪದೆ ಇಲಾಖೆಯ ಸೂಚನೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ವರದಿಯಾಗಿದೆ.

ಚೀನಾದಿಂದ ಪ್ರಪಂಚದಾದ್ಯಂತ ಹರಡಿರುವ ಈ ವೈರಸ್​ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆ ಈ ಮೊದಲೇ ಪತ್ತೆಹಚ್ಚಿತ್ತು ಹಾಗೂ ಚೀನಾವು ಸಾಂಕ್ರಾಮಿಕ ರೋಗದ ಹರಡುವಿಕೆಯ ಬಗ್ಗೆ ಮಾಹಿತಿ ನಿಗ್ರಹಿಸುತ್ತಿದೆ. ಇದರಿಂದಾಗಿ ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಈ ಹಿಂದೆಯೇ ವರದಿ ಮಾಡಿದ್ದರು. ಆದರೆ, ಟ್ರಂಪ್ ಈ ಗುಪ್ತಚರ ಇಲಾಖೆ ನೀಡಿದ ವರದಿಗಳ ಬಗ್ಗೆ ಗಮನ ಹರಿಸಲೇ ಇಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ.

ಚೀನಾದಲ್ಲಿ ಕೊರೊನಾ ವೈರಸ್ ​ತೀವ್ರಗೊಂಡಿದ್ದನ್ನು ತಿಳಿದ ಯುನೈಟೆಡ್ ಸ್ಟೇಟ್ಸ್, ಚೀನಾ ನಡುವಿನ ಪ್ರಯಾಣವನ್ನು ನಿರ್ಬಂಧಿಸಿತ್ತು, ಆದರೆ, ಜನವರಿ ಅಂತ್ಯದಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲು ಆಡಳಿತ ಮಂಡಳಿ ನೀಡಿದ ಸೂಚನೆಗಳನ್ನು ಪಾಲಿಸಿಲ್ಲ ಎನ್ನಲಾಗಿದೆ.

ಕೇಂದ್ರ ಗುಪ್ತಚರ ಸಂಸ್ಥೆ ಅಧಿಕಾರಿಯೊಬ್ಬರು ಜನವರಿ ಅಂತ್ಯದ ವೇಳೆಗೆ ಕೊರೊನಾ ವೈರಸ್ ಬಗ್ಗೆ ವರದಿಯನ್ನು ನೀಡಿ ಟ್ರಂಪ್​ ಗಮನಕ್ಕೆ ತಂದಿದ್ದರು ಎಂದು ಇಲಾಖೆ ಇದೇ ವೇಳೆ ತಿಳಿಸಿದೆ.

ಆದರೆ, ಟ್ರಂಪ್ ಫೆಬ್ರವರಿ ತಿಂಗಳಿನಲ್ಲಿಯೂ ಸಹ ಈ ಬಗ್ಗೆ ಯೋಚಿಸಿರಲಿಲ್ಲ ಹಾಗೂ ಅವರ ಆಡಳಿತವು ರಕ್ಷಣಾತ್ಮಕ ಸಾಧನಗಳ ಸರಬರಾಜುಗಳನ್ನು ಭದ್ರಪಡಿಸುವಲ್ಲಿ, ಪರಿಣಾಮಕಾರಿಯಾದ ರೋಗ ನಿರ್ಣಯ ಪರೀಕ್ಷೆಯನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತು ಜನಸಂಖ್ಯೆಯ ಹೆಚ್ಚಿನ ಭಾಗವನ್ನು ಪ್ರತ್ಯೇಕಿಸಲು ಯೋಜನೆಗಳನ್ನು ಸಿದ್ಧಪಡಿಸುವಲ್ಲಿ ವಿಫಲವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಕೊರೊನಾ ವೈರಸ್​​ ಅಮೆರಿಕದಲ್ಲಿ ಹಬ್ಬಿದ ಹಿನ್ನೆಲೆ, ಫೆಬ್ರವರಿ 26 ರಂದು ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​, ಒಂದೆರಡು ದಿನಗಳಲ್ಲಿ ನಾವು ಶೂನ್ಯಕ್ಕೆ ಹತ್ತಿರವಾಗಲಿದ್ಧೇವೆ, ಒಂದು ಪವಾಡದಂತೆ ಈ ವೈರಸ್​ ಕಣ್ಮರೆಯಾಗಲಿದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆ ಸಫಲವಾಗಿಲ್ಲ.

ಪ್ರಸ್ತುತ ದಿನಗಳಲ್ಲಿ ಈ ವೈರಸ್ ಯುನೈಟೆಡ್ ಸ್ಟೇಟ್ಸ್‌ನ ಸಮುದಾಯಗಳಲ್ಲಿ ವೇಗವಾಗಿ ಹಬ್ಬುತ್ತಿದ್ದು, ನ್ಯೂಯಾರ್ಕ್ ನಗರ ಮತ್ತು ಇತರ ಜನಸಂಖ್ಯಾ ಕೇಂದ್ರಗಳಲ್ಲಿ ವ್ಯಾಪಕವಾಗಿ ಹರಡಿದೆ. ಅಮೆರಿಕದ ಪತ್ರಿಕೆಯೊಂದು, ರಾಜ್ಯ ಗವರ್ನರ್‌ಗಳು ವ್ಯಾಪಕವಾಗಿ ಲಾಕ್‌ಡೌನ್‌ಗಳನ್ನು ಹೇರಲು ಪ್ರಾರಂಭಿಸುವವರೆಗೆ, ಸಾಮಾಜಿಕ ದೂರವಿಡುವಿಕೆ ಮತ್ತು ದೇಶದ ಆರ್ಥಿಕತೆಯ ಬೃಹತ್ ಕ್ಷೇತ್ರಗಳನ್ನು ಮುಚ್ಚುವವರೆಗೆ ಈ ವೈರಸ್​​ನನ್ನು ತಡೆಯಲು ಸಾಧ್ಯವಿಲ್ಲ ಎಂದು ಈ ಹಿಂದೆಯೇ ವರದಿ ಮಾಡಿತ್ತು.

ಮಾರ್ಚ್ 10ನೇ ತಾರೀಖಿನವರೆಗೂ ಸಹ ಅಧ್ಯಕ್ಷ ಟ್ರಂಪ್,ಯಾರೂ ಭಯ ಪಡುವ ಅಗತ್ಯವಿಲ್ಲ ಕೊರೊನಾ ವೈರಸ್​​ ಇಲ್ಲಿಂದ ಹೋಗಲಿದೆ ಎಂದು ಹೇಳಿದ್ದರು. ಆದರೆ, ಮರುದಿನವೇ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್​​ ಖಾಯಿಲೆಯನ್ನು ಜಾಗತಿಕ ಸಾಂಕ್ರಾಮಿಕ ರೋಗ ಎಂದು ಘೋಷಿಸಿತು.

ವಿಶ್ವ ಸಂಸ್ಥೆಯ ಈ ಘೋಷಣೆ ಬಳಿಕ ಗುಪ್ತಚರ ಇಲಾಖೆ ಅಧಿಕಾರಿಗಳು ತಮ್ಮ ವರದಿಗಳ ಬಗ್ಗೆ ಮತ್ತೆ ಎಚ್ಚರಿಸಿದ ನಂತರ ಪಿಡಿಬಿ ಮತ್ತು ಇತರ ಗುಪ್ತಚರ ವರದಿಗಳಲ್ಲಿನ ಎಚ್ಚರಿಕೆಗಳ ಬಗ್ಗೆ ತಕ್ಷಣದ ಗಮನ ಹರಿಸಲು ಸರ್ಕಾರ ಪ್ರಾರಂಭಿಸಿತು.

ಅಮೆರಿಕದ ಅಧ್ಯಕ್ಷ ಟ್ರಂಪ್​, ಜನವರಿಯಲ್ಲಿ ಸೆನೆಟ್ ದೋಷಾರೋಪಣೆ ವಿಚಾರಣೆಯಲ್ಲಿ ನಿರತರಾಗಿದ್ದರು ಮತ್ತು ಇತರ ಭದ್ರತಾ ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸಿದ್ದರು. ಜನವರಿ 3 ರಂದು ನಡೆದ ಯುಎಸ್ ವೈಮಾನಿಕ ದಾಳಿಗೆ ಇರಾನ್ ನೀಡಿದ ಪ್ರತಿಕ್ರಿಯೆಯನ್ನು ಪತ್ತೆಹಚ್ಚುವುದು ಸೇರಿದಂತೆ, ಇರಾನಿನ ಉನ್ನತ ಕಮಾಂಡರ್ ಕಾಸೆಮ್ ಸೊಲೈಮಾನಿಯನ್ನು ಬಾಗ್ದಾದ್‌ನಲ್ಲಿ ಕೊಂದಿದ್ದು ಒಳಗೊಂಡಂತೆ ಇನ್ನಿತರ ವಿಷಯಗಳ ಬಗ್ಗೆ ಹೆಚ್ಚು ಒತ್ತು ನೀಡಿದ್ದರಿಂದ ಈ ಕೊರೊನಾ ವೈರಸ್​​ ಬಗ್ಗೆ ಟ್ರಂಪ್​ ತಲೆಕೆಡಿಸಿಕೊಳ್ಳಲೇ ಇಲ್ಲ ಎಂದು ಇಲಾಖೆ ಹೇಳಿದೆ.

ವೈಜ್ಞಾನಿಕ ಪುರಾವೆಗಳನ್ನು ಉಲ್ಲೇಖಿಸಿದ ಯುಎಸ್ ಗುಪ್ತಚರ ಅಧಿಕಾರಿಗಳು, ಈ ವೈರಸ್ ಅನ್ನು ಉದ್ದೇಶಪೂರ್ವಕವಾಗಿ ನಿರ್ಮಿಸಿದ್ದಾರೆ ಎಂಬ ಕಲ್ಪನೆಯನ್ನು ಒಪ್ಪುತ್ತಿಲ್ಲ. ಆದರೆ ವುಹಾನ್‌ನಲ್ಲಿರುವ ವೈರಾಲಜಿ ಲ್ಯಾಬ್‌ನಿಂದ ಹೇಗಾದರೂ ಈ ವೈರಸ್​ ತಪ್ಪಿಸಿಕೊಂಡಿದೆಯೆ ಎಂದು ಅವರು ಪರಿಶೀಲಿಸುತ್ತಲೇ ಇದ್ದಾರೆ. ಈ ವೈರಸ್​​ ಸ್ವಾಭಾವಿಕವಾಗಿ ಸಂಭವಿಸಿದೆಯೇ ಅಥವಾ ಮಾನವ ನಿರ್ಮಿತ ವೈರಸ್​ ಆಗಿದೆಯೇ ಎಂಬುದರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.