ನ್ಯೂಯಾರ್ಕ್: ಕಳೆದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, 20 ದಿನಗಳ ಬಳಿಕ ನಿನ್ನೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ನಿಜಕ್ಕೂ ಸಂತೋಷದ ವಿಚಾರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಅವರೊಂದಿಗೆ ತಾವು ದೂರವಾಣಿ ಮೂಲಕ ಮಾತನಾಡುವುದಾಗಿ ನಿನ್ನೆ ಹೇಳಿಕೊಂಡಿದ್ದ ಡೊನಾಲ್ಡ್ ಟ್ರಂಪ್ ಇದೀಗ ಟ್ವೀಟ್ ಮಾಡಿದ್ದು, ಸಾರ್ವಜನಿಕರ ಮುಂದೆ ಕಾಣಿಸಿಕೊಂಡಿದ್ದು ಸಂತೋಷದ ವಿಚಾರ ಎಂದಿದ್ದಾರೆ.
-
I, for one, am glad to see he is back, and well! https://t.co/mIWVeRMnOJ
— Donald J. Trump (@realDonaldTrump) May 2, 2020 " class="align-text-top noRightClick twitterSection" data="
">I, for one, am glad to see he is back, and well! https://t.co/mIWVeRMnOJ
— Donald J. Trump (@realDonaldTrump) May 2, 2020I, for one, am glad to see he is back, and well! https://t.co/mIWVeRMnOJ
— Donald J. Trump (@realDonaldTrump) May 2, 2020
ಇನ್ನು ಕಳೆದ ಏಪ್ರಿಲ್ 15ರಂದು ಉತ್ತರ ಕೊರಿಯಾ ಸ್ಥಾಪಕ ಕಿಮ್ ಇಲ್ ಸುಂಗ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದಿರುವ ಕಾರಣ ಕಿಮ್ ಆರೋಗ್ಯದ ಬಗ್ಗೆ ಅನೇಕ ಊಹಾಪೋಹಗಳು ಕೇಳಿ ಬಂದಿದ್ದವು. ಜತೆಗೆ ಅವರು ಜೀವಂತ ಶವವಾಗಿದ್ದಾರೆ ಎಂದು ಅನೇಕ ಮಾದ್ಯಮಗಳು ವರದಿ ಮಾಡಿದ್ದವು.