ETV Bharat / international

ವಿಸ್ತರಣೆಯಾಗುವತ್ತ ಜಿ-7 ರಾಷ್ಟ್ರಗಳ ಸಂಖ್ಯೆ: ಭಾರತಕ್ಕಿದೆಯಾ ಅವಕಾಶ?

ಜಿ-7 ಸಂಘಟನೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ ಹೆಚ್ಚಿಸುವುದಾಗಿ ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ. ಈ ಗುಂಪಿಗೆ ಭಾರತವೂ ಕೂಡಾ ಸೇರ್ಪಡೆಯಾಗುವ ಸಾಧ್ಯತೆಯಿದೆ.

Donald Trump
ಡೊನಾಲ್ಡ್​ ಟ್ರಂಪ್
author img

By

Published : May 31, 2020, 10:09 AM IST

ವಾಷಿಂಗ್ಟನ್ ​​(ಅಮೆರಿಕ): ಜಿ-7 ರಾಷ್ಟ್ರಗಳ ಸಭೆಯನ್ನು ಮುಂದೂಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ. ಜೊತೆಗೆ ಜಿ-7 ರಾಷ್ಟ್ರಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಸುಳಿವು ನೀಡಿದ್ದಾರೆ.

ಸದ್ಯ ಈ ಗುಂಪಿನಲ್ಲಿ ಕೆನಡಾ, ಫ್ರಾನ್ಸ್​, ಜರ್ಮನಿ, ಇಟಲಿ, ಜಪಾನ್​, ಇಂಗ್ಲೆಂಡ್​​ ಹಾಗು ಅಮೆರಿಕ ರಾಷ್ಟ್ರಗಳಿವೆ. ಈಗ ಟ್ರಂಪ್​, ಜಿ-7 ಸದಸ್ಯ ರಾಷ್ಟ್ರಗಳ ಸಂಖ್ಯೆ ಹೆಚ್ಚಿಸುವ ಘೋಷಣೆ ಮಾಡಿರುವುದರಿಂದ ರಷ್ಯಾ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಹಾಗು ಭಾರತವೂ ಕೂಡಾ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಜಿ-7 ವಿಶ್ವದ ಬಹುದೊಡ್ಡ ಆರ್ಥಿಕತೆಯುಳ್ಳ ರಾಷ್ಟ್ರಗಳ ಸಮೂಹವಾಗಿದ್ದು, ಈ ಬಾರಿ ನಡೆಯಬೇಕಿದ್ದ ಸಭೆ ಕೊರೊನಾ ಕಾರಣದಿಂದಾಗಿ ಮುಂದೂಡಿಕೆಯಾಗಿದೆ. ಮುಂದಿನ ದಿನಾಂಕ ಶೀಘ್ರದಲ್ಲೇ ಹೊರಬೀಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.