ETV Bharat / international

ಜರ್ಮನಿಯಲ್ಲಿ ನಿಯೋಜಿಸಲಾಗಿರುವ ಯುಎಸ್​​ ಸೈನ್ಯ ಕಡಿತಗೊಳಿಸುವುದಾಗಿ ಟ್ರಂಪ್​ ಘೋಷಣೆ!

author img

By

Published : Jun 16, 2020, 9:43 PM IST

ಜರ್ಮನಿಯಲ್ಲಿ ನಿಯೋಜಿಸಲಾಗಿರುವ ಯುಎಸ್​​ ಸೈನ್ಯದಲ್ಲಿ 35000 ಸೈನಿಕರು ಪ್ರಸ್ತುತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ಸೆಪ್ಟೆಂಬರ್​ ತಿಂಗಳ ವೇಳೆಗೆ 25000 ಸಾವಿರಕ್ಕೆ ಇಳಿಸಲಾಗುವುದು ಎಂದು ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಘೋಷಣೆ ಮಾಡಿದ್ದಾರೆ.

Trump
ಟ್ರಂಪ್

ವಾಷಿಂಗ್ಟನ್ (ಅಮೆರಿಕ) : ಜರ್ಮನಿಯಲ್ಲಿ ನಿಯೋಜಿಸಲಾಗಿರುವ ಅಮೆರಿಕದ ರಕ್ಷಣಾ ಪಡೆಯಿಂದಾಗಿ ಖರ್ಚು ವೆಚ್ಚಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಅಲ್ಲಿನ ಯುಎಸ್ ಸೈನಿಕರ ಸಂಖ್ಯೆಯನ್ನು 25,000ಕ್ಕೆ ಇಳಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಜರ್ಮನಿಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 35,000 ಸೈನಿಕರಿಗಾಗಿ ಮಾಡುತ್ತಿರುವ ವೆಚ್ಚ ತೀವ್ರವಾಗುತ್ತಿದೆ. ಆದ್ದರಿಂದ ಯುಎಸ್ ಸೈನಿಕರ ಸಂಖ್ಯೆಯನ್ನು 25,000ಕ್ಕೆ ಇಳಿಸಲಾಗುವುದು ಎಂದು ತಿಳಿಸಿದ್ದಾರೆ. ಈಗಾಗಲೇ ತಿಳಿದಿರುವಂತೆ ಜರ್ಮನಿಯ ನ್ಯಾಟೋಗೆ(ಉತ್ತರ​ ಅಟ್ಲಾಂಟಿಕ್​ ಕರಾರು ಸಂಸ್ಥೆ) ಪಾವತಿಸುವುತ್ತಿರುವುದೇ ನಮ್ಮ ಅಪರಾಧವಾಗಿದೆ ಎಂದು ಟ್ರಂಪ್ ಇದೇ ವೇಳೆ ಹೇಳಿದ್ದಾರೆ.

ಜರ್ಮನಿಯ ಮಾಜಿ ಯುಎಸ್ ರಾಯಭಾರಿ ರಿಚರ್ಡ್ ಗ್ರೆನೆಲ್ ಕಳೆದ ವಾರ ಜರ್ಮನ್ ಮಾಧ್ಯಮ ಸಂಸ್ಥೆಯಾದ ಬಿಲ್ಡ್ ಲೈವ್‌ನಲ್ಲಿ ಅಮೆರಿಕದ ತೆರಿಗೆ ಪಾವತಿದಾರರು ಇತರ ದೇಶಗಳಿಗಿಂತಲೂ ಹೆಚ್ಚಿನ ತೆರಿಗೆಯನ್ನು ತಮ್ಮ ಸೈನ್ಯದ ಒಳಿತಿಗಾಗಿ ನೀಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ರಿಚರ್ಡ್ ಗ್ರೆನೆಲ್ ಹೇಳಿಕೆಯಿಂದಾಗಿ ಅಮೆರಿಕ ಮೇಲೆ ಕೊಂಚ ಪರಿಣಾಮ ಬೀರಿದೆ. ಸೆಪ್ಟೆಂಬರ್ ವೇಳೆಗೆ ಜರ್ಮನಿಯಲ್ಲಿರುವ ಯುಎಸ್ ಮಿಲಿಟರಿ ಪಡೆಯನ್ನು ಕಡಿತಗೊಳಿಸುವಂತೆ ಯುಎಸ್​​ ಪಡೆಯ ಕೇಂದ್ರ ಕಚೇರಿ ಪೆಂಟಗನ್‌ಗೆ ಟ್ರಂಪ್​​ ನಿರ್ದೇಶನ ನೀಡಿದ್ದಾರೆ ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವಾರವಷ್ಟೇ ರಿಪಬ್ಲಿಕನ್ ಪಕ್ಷದ ಸುಮಾರು 22 ಸದಸ್ಯರು ಅಧ್ಯಕ್ಷ ಟ್ರಂಪ್​ಗೆ, ಯುರೋಪಿನಲ್ಲಿ ಗಮನಾರ್ಹವಾದ ಬಲವರ್ಧನೆಯು ಯುಎಸ್ ರಾಷ್ಟ್ರೀಯ ಭದ್ರತೆಯ ವೆಚ್ಚದಲ್ಲಿ ರಷ್ಯಾದ ಹಿತಾಸಕ್ತಿಗಳನ್ನು ಪೂರೈಸುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಜರ್ಮನಿಯಲ್ಲಿನ ಯುಎಸ್​​ ಮಿಲಿಟರಿ ಪಡೆಯ ಕಡಿತದಿಂದಾಗಿ ವಾಷಿಂಗ್ಟನ್ ಮತ್ತು ಬರ್ಲಿನ್ ನಡುವಿನ ಸಂಬಂಧವನ್ನು ಮತ್ತಷ್ಟು ತಗ್ಗಿಸಬಹುದು.

ಆದರೆ, ಇರಾನ್ ಪರಮಾಣು ಸಮಸ್ಯೆಗಳು, ನಾರ್ಡ್ ಸ್ಟ್ರೀಮ್-2 ಗ್ಯಾಸ್ ಪೈಪ್‌ಲೈನ್ ಯೋಜನೆ ಮತ್ತು ರಕ್ಷಣಾ ಹೊರೆ ಹಂಚಿಕೆ ಮುಂತಾದವುಗಳಲ್ಲಿ ಈ ಎರಡು ಮಿತ್ರ ರಾಷ್ಟ್ರಗಳು ಈಗಾಗಲೇ ಪರಸ್ಪರ ಭಿನ್ನಾಭಿಪ್ರಾಯವನ್ನು ಹೊಂದಿವೆ. ಜರ್ಮನಿಯಲ್ಲಿರುವ ನಮ್ಮ ಸೇನಾನಿಗಳನ್ನು ಕಡಿತಗೊಳಿಸಿದ್ರೂ ಸಹ ಇನ್ನೂ 25 ಸಾವಿರ ಸೈನಿಕರು ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಾರೆ. ಇದೇನು ಕಡಿಮೆ ಸಂಖ್ಯೆಯಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.