ETV Bharat / international

ಮಹಾಭಿಯೋಗ ಸಂಕಷ್ಟದಲ್ಲಿ ಟ್ರಂಪ್ ​​: ವಕೀಲರ ಮೊರೆ ಹೋದ ಮಾಜಿ ಅಧ್ಯಕ್ಷ - ಬುಚ್​ ಬೋವರ್ಸ್​

ಶ್ವೇತ ಭವನದ ಮೇಲಿನ ದಾಳಿಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಮಹಾಭಿಯೋಗಕ್ಕೆ ಒಳಗಾಗಿದ್ದ, ಅಮೆರಿಕದ ಇತಿಹಾಸದಲ್ಲಿಯೇ ಎರಡೆರಡು ಬಾರಿ ಮಹಾಭಿಯೋಗಕ್ಕೆ ಒಳಗಾದ ಅಧ್ಯಕ್ಷ ಎಂಬ ಅಪಕೀರ್ತಿಗೆ ಒಳಗಾಗಿದ್ದಾರೆ. ಮುಖ್ಯವಾಗಿ ಈ ಆರೋಪ ಸಾಬೀತಾದ್ರೆ ಅವರು ಯಾವುದೇ ಸಾರ್ವಜನಿಕ ಹುದ್ದೆ ಅಲಂಕರಿಸುವಂತಿಲ್ಲ..

-trump
ಡೊನಾಲ್ಡ್​ ಟ್ರಂಪ್
author img

By

Published : Jan 23, 2021, 4:04 PM IST

ಕೊಲಂಬಿಯಾ : 2ನೇ ಬಾರಿ ಮಹಾಭಿಯೋಗಕ್ಕೆ ಒಳಗಾಗಿರುವ ಡೊನಾಲ್ಡ್​ ಟ್ರಂಪ್ ವಾಗ್ದಂಡನೆಯಿಂದ ತಪ್ಪಿಸಿಕೊಳ್ಳಲು ಮಾರ್ಗಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ಸದ್ಯ ವಕೀಲರ ಮೊರೆ ಹೋಗಿದ್ದು, ವಾಗ್ದಂಡನೆಯಿಂದ ಪಾರಾಗಲು ತೆರೆಮರೆಯ ಸಿದ್ಧತೆ ನಡೆಸಿದ್ದಾರೆ.

ಇನ್ನು ಇಂತಹ ಪ್ರಕರಣಗಳ ವಾದ ಮಾಡಲು ನುರಿತ ವಕೀಲ ಬುಚ್​ ಬೋವರ್ಸ್​ ನೇಮಿಸಲಾಗುತ್ತದೆ. ಆದರೆ, ಇಂತಹ ಪ್ರಕರಣ ಅವರಿಗೂ ಹೊಸತಾಗಿದ್ದು, ಇಂತಹ ಪ್ರಕರಣ ಎದುರಿಸಿರುವ ಅನುಭವದ ಕೊರತೆ ಹೊಂದಿರುವುದು ಸವಾಲಾಗಿ ಪರಿಣಮಿಸಿದೆ.

ಶ್ವೇತ ಭವನದ ಮೇಲಿನ ದಾಳಿಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಮಹಾಭಿಯೋಗಕ್ಕೆ ಒಳಗಾಗಿದ್ದ, ಅಮೆರಿಕದ ಇತಿಹಾಸದಲ್ಲಿಯೇ ಎರಡೆರಡು ಬಾರಿ ಮಹಾಭಿಯೋಗಕ್ಕೆ ಒಳಗಾದ ಅಧ್ಯಕ್ಷ ಎಂಬ ಅಪಕೀರ್ತಿಗೆ ಒಳಗಾಗಿದ್ದಾರೆ. ಮುಖ್ಯವಾಗಿ ಈ ಆರೋಪ ಸಾಬೀತಾದ್ರೆ ಅವರು ಯಾವುದೇ ಸಾರ್ವಜನಿಕ ಹುದ್ದೆ ಅಲಂಕರಿಸುವಂತಿಲ್ಲ. 2024ರ ಚುನಾವಣೆಯಲ್ಲೂ ಭಾಗವಹಿಸದಿರುವ ದಂಡನೆ ನೀಡುವ ಸಾಧ್ಯತೆ ಇರಲಿದೆ.

ಮೊದಲ ಬಾರಿಗೆ ಟ್ರಂಪ್ ಯುಎಸ್​​ ಕಾಂಗ್ರೆಸ್​​ನ ಅನಾಮಧೇಯ ಮೂಲಗಳ ಪ್ರಕಾರ, ಉಕ್ರೇನಿಯನ್​​ ಅಧ್ಯಕ್ಷರ ಬಳಿ ಟ್ರಂಪ್​ನ ರಾಜಕೀಯ ಪ್ರತಿಸ್ಪರ್ಧಿಯಾಗಿರುವ ಜೋ ಬೈಡನ್​​ ಹಾಗೂ ಅವರ ಮಗ ಹಂಟರ್​​ ಬಗ್ಗೆ ತನಿಖೆ ನಡೆಸಲು ಸಹಾಯ ಕೋರಿದ್ದರು.

ಉಕ್ರೇನ್​​ನ ಇಂಧನ ಕಂಪನಿಯೊಂದರಲ್ಲಿ ಹಂಟರ್​​ಗೆ ಸಂಬಂಧಿಸಿದಂತೆ ಬಡ್ಡಿ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಉಕ್ರೇನ್​​ಗೆ ನೀಡಲಾಗಿದ್ದ ಯುಎಸ್​​ ಮಿಲಿಟರಿ ಪಡೆಗೆ ಮೀಸಲಾಗಿದ್ದ 400 ಮಿಲಿಯನ್​ ಅಮೆರಿಕನ್​ ಡಾಲರ್​​(28 ಸಾವಿರ ಕೋಟಿ) ಅನುದಾನ ತಡೆಹಿಡಿಯಲಾಗಿತ್ತು. ಇದು ಅಮೆರಿಕದ ಕಾನೂನಿನ ಪ್ರಕಾರ ಅಪರಾಧವಾಗಿದೆ. ಈ ಕಾರಣದಿಂದಾಗಿ ಮೊದಲ ಬಾರಿಗೆ ಮಹಾಭಿಯೋಗಕ್ಕೆ ಒಳಗಾಗಿದ್ದರು.

ಇದೀಗ ಟ್ರಂಪ್ ಪರವಾಗಿ ಬೋವರ್ಸ್​ ವಾದಿಸಲಿದ್ದು, ಇವರು ಅನೇಕ ರಾಜಕೀಯ ನಾಯಕರು, ಸೆನೆಟ್​ ಅಧಿಕಾರಿಗಳ ಪರವಾಗಿ ವಾದ ಮಂಡಿಸಿರುವ ಅನುಭವ ಹೊಂದಿದ್ದಾರೆ. ಆದರೆ, ಮಹಾಭಿಯೋಗದ ಪ್ರಕರಣ ಇದೇ ಮೊದಲು ಎಂದು ಟ್ರಂಪ್​ ಅವರ ಕಾನೂನು ಪ್ರಕ್ರಿಯೆಯಲ್ಲಿ ಭಾಗಿಯಾಗದ ವಕೀಲ ಸೆಕುಲೋ ಹೇಳಿದ್ದಾರೆ.

ಇದನ್ನೂ ಓದಿ: ಜೋ ಬೈಡನ್ ಪದಗ್ರಹಣ​ದಲ್ಲಿ ಭಾಗಿಯಾಗಿದ್ದ 200 ಭದ್ರತಾ ಸಿಬ್ಬಂದಿಗೆ​ ಕೊರೊನಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.