ಕಪ್ಪು ವರ್ಣೀಯ ನಾಗರಿಕ ಜಾರ್ಜ್ ಫ್ಲಾಯ್ಡ್ ಅವರು ಅಮೆರಿಕ ಪೊಲೀಸರ ಕಸ್ಟಡಿಯಲ್ಲಿರುವಾಗ ಸಾವನ್ನಪ್ಪಿದ್ದ ನಂತರ ಅಮೆರಿಕ ಮಾತ್ರವಲ್ಲದೆ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಜನಾಂಗೀಯ ದೌರ್ಜನ್ಯ ಖಂಡಿಸಿ #Black live matter ಹೆಸರಿನಲ್ಲಿ ಉಗ್ರ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆ ಅಮೆರಿಕ, ಇಂಗ್ಲೆಂಡ್ ಹಾಗೂ ಬೆಲ್ಜಿಯಂ ದೇಶಗಳಲ್ಲಿ ಸ್ಥಾಪಿಸಲಾಗಿದ್ದ ಗುಲಾಮರ ವ್ಯಾಪಾರ ಹಾಗೂ ಅದಕ್ಕೆ ಸಂಬಂಧಿಸಿದ ಒಳಸಂಚಿನ ಭಾಗವಾಗಿದ್ದವರ ಪ್ರತಿಮೆ ಹಾಗೂ ಸ್ಮಾರಕಗಳನ್ನು ಪ್ರತಿಭಟನಾಕಾರರು ನಾಶಪಡಿಸುತ್ತಿದ್ದಾರೆ. ಜಾರ್ಜ್ ಫ್ಲಾಯ್ಡ್ ಅವರ ಸಾವಿನ ನಂತರ ಆರಂಭವಾದ ಪ್ರತಿಭಟನೆಗಳ ನಂತರದ ಅವಧಿಯಲ್ಲಿ ಅಮೆರಿಕ, ಇಂಗ್ಲೆಂಡ್ ಹಾಗೂ ಬೆಲ್ಜಿಯಂ ದೇಶಗಳಲ್ಲಿ ತೆರವುಗೊಳಿಸಲಾದ ಪ್ರತಿಮೆ ಹಾಗೂ ಸ್ಮಾರಕಗಳ ವಿವರ ಇಲ್ಲಿದೆ.
ಅಮೆರಿಕದಲ್ಲಿ ತೆರವು, ವಿರೂಪಗೊಳಿಸಲಾದ ಪ್ರತಿಮೆ ಹಾಗೂ ಸ್ಮಾರಕಗಳ ಪಟ್ಟಿ
ರಾಜ್ಯ: ಟೆನಿಸ್ಸಿ, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಎಡ್ವರ್ಡ್ ಕಾರ್ಮ್ಯಾಕ್, ವಿವರ: ಎಡ್ವರ್ಡ್ ಕಾರ್ಮ್ಯಾಕ್ ಓರ್ವ ರಾಜಕಾರಣಿಯಾಗಿದ್ದರು ಹಾಗೂ ಗುಂಪು ಹತ್ಯೆಗಳನ್ನು ಸಮರ್ಥಿಸಿ ಇವರು ವರದಿಗಳನ್ನು ಬರೆದಿದ್ದರು ಎಂಬ ಆರೋಪವಿದೆ. ಮೇ 31 ರಂದು ನ್ಯಾಶವಿಲ್ಲೆಯಲ್ಲಿರುವ ಇವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿತ್ತು. ಇವರ ಹೊಸ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ: ಅಲಾಬಾಮಾ, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಒಕ್ಕೂಟ ನೌಕಾಪಡೆಯ ಮುಖ್ಯಸ್ಥ ಕ್ಯಾಪ್ಟನ್ ಚಾರ್ಲ್ಸ್ ಲಿನ್, ವಿವರ: ಮೇ 31 ರಂದು ಬರ್ಮಿಂಗ್ಹ್ಯಾಂ ನ ಲಿನ್ ಪಾರ್ಕ್ನಲ್ಲಿರುವ ಚಾರ್ಲ್ಸ್ ಲಿನ್ ಅವರ 8 ಅಡಿ ಎತ್ತರದ ಕಂಚಿನ ಮೂರ್ತಿಯನ್ನು ಹಾಳುಗಡವಲಾಯಿತು.
ರಾಜ್ಯ: ವರ್ಜೀನಿಯಾ, ವಿವರ: ಜೂನ್ 2 ರಂದು ಅಲೆಕ್ಸಾಂಡ್ರಿಯಾ ನಗರದ ಸ್ಥಳೀಯಾಡಳಿತವು 131 ವರ್ಷ ಪುರಾತನವಾಗಿದ್ದ ಒಕ್ಕೂಟದ ಸೈನಿಕನೋರ್ವನ ಪ್ರತಿಮೆಯನ್ನು ತೆರವುಗೊಳಿಸಿತು.
ರಾಜ್ಯ: ಪೆನ್ಸಿಲ್ವೇನಿಯಾ, ಕಾನ್ಫೆಡರೇಟ್ ಜನರಲ್ ವಿಲಿಯಮ್ಸ್ ಕಾರ್ಟರ್ ವಿಕ್ಯಾಮ್, ವಿವರ: ಜೂನ್ 6 ರಂದು ರಿಚ್ಮಂಡ್ ನಗರದ ಮನ್ರೋ ಪಾರ್ಕ್ನಲ್ಲಿದ್ದ ಕಾನ್ಫೆಡರೇಟ್ ಜನರಲ್ ವಿಲಿಯಮ್ಸ್ ಕಾರ್ಟರ್ ವಿಕ್ಯಾಮ್ ಅವರ ಪ್ರತಿಮೆಯನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದರು.
ರಾಜ್ಯ: ಕೆಂಟುಕಿ, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಕಾನ್ಫೆಡರೇಟ್ ಸೈನಿಕ ಜಾನ್ ಬಿ. ಕ್ಯಾಸಲ್ಮ್ಯಾನ್ ಅವರ ಪ್ರತಿಮೆ, ವಿವರ: ಜೂನ್ 8 ರಂದು ಲೂಯಿಸವಿಲ್ಲೆಯ ಚೆರೋಕಿ ವೃತ್ತದಲ್ಲಿರುವ ಕಾನ್ಫೆಡರೇಟ್ ಸೈನಿಕ ಜಾನ್ ಬಿ. ಕ್ಯಾಸಲ್ಮ್ಯಾನ್ ಅವರ ಪ್ರತಿಮೆಯನ್ನು ತೆರವುಗೊಳಿಸಲಾಯಿತು.
ರಾಜ್ಯ: ಫ್ಲೊರಿಡಾ, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಜಾಕ್ಸನ್ವಿಲ್ಲೆ ಲೈಟ್ ಇನ್ಫ್ಯಾಂಟ್ರಿ ಗೌರವಾರ್ಪಣೆಗೆ ಸ್ಥಾಪಿಸಲಾಗಿದ್ದ ಸ್ಮಾರಕ, ವಿವರ: ಜೂನ್ 9 ರಂದು ಫ್ಲೊರಿಡಾ ಸ್ಥಳೀಯಾಡಳಿತವು ಜಾಕ್ಸನ್ವಿಲ್ಲೆ ಲೈಟ್ ಇನ್ಫ್ಯಾಂಟ್ರಿ ಗೌರವಾರ್ಪಣೆಯ ಸ್ಮಾರಕವನ್ನು ತೆರವುಗೊಳಿಸಿತು.
ರಾಜ್ಯ: ಇಂಡಿಯಾನಾ ಪೊಲೀಸ್, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಕಾನ್ಫೆಡರೇಟ್ ಸೈನಿಕರ ಗೌರವಾರ್ಪಣೆಗೆ ಸ್ಥಾಪಿಸಲಾಗಿದ್ದ 35 ಅಡಿ ಎತ್ತರದ ಸ್ಮಾರಕ, ವಿವರ: ಇಂಡಿಯಾನಾ ಪೊಲೀಸ್ನ ಗಾರಫೀಲ್ಡ್ ಪಾರ್ಕ್ನಲ್ಲಿ ಸ್ಥಾಪಿಸಲಾಗಿದ್ದ ಕಾನ್ಫೆಡರೇಟ್ ಸೈನಿಕರ ಗೌರವಾರ್ಪಣೆಗೆ ಸ್ಥಾಪಿಸಲಾಗಿದ್ದ 35 ಅಡಿ ಎತ್ತರದ ಸ್ಮಾರಕವನ್ನು ಜೂನ್ 8 ರಂದು ತೆರವುಗೊಳಿಸಲಾಯಿತು.
ರಾಜ್ಯ: ಬೋಸ್ಟನ್, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಬೋಸ್ಟನ್ನ ನಾರ್ಥ್ ಎಂಡ್ನಲ್ಲಿದ್ದ ಕ್ರಿಸ್ಟೋಫರ್ ಕೊಲಂಬಸ್ ಪ್ರತಿಮೆ, ವಿವರ: ಬೋಸ್ಟನ್ನ ನಾರ್ತ್ ಎಂಡ್ನಲ್ಲಿದ್ದ ಕ್ರಿಸ್ಟೋಫರ್ ಕೊಲಂಬಸ್ ಅವರ 6 ಅಡಿ ಎತ್ತರದ ಪ್ರತಿಮೆಯ ಶಿರವನ್ನು ಪ್ರತಿಭಟನಾಕಾರರು ಜೂನ್ 10 ರಂದು ಒಡೆದುಹಾಕಿದರು.
ರಾಜ್ಯ: ಸೇಂಟ್ ಪಾಲ್, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಕ್ರಿಸ್ಟೋಫರ್ ಕೊಲಂಬಸ್ ಪ್ರತಿಮೆ, ವಿವರ: ಜೂನ್ 10 ರಂದು ಮಿನ್ನೆಸೋಟಾ ಕ್ಯಾಪಿಟೊಲ್ ಬಿಲ್ಡಿಂಗ್ ಹೊರಗಿನ ಕ್ರಿಸ್ಟೋಫರ್ ಕೊಲಂಬಸ್ ಅವರ ಪ್ರತಿಮೆಯನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದರು.
ರಾಜ್ಯ: ವರ್ಜೀನಿಯಾ, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಕಾನ್ಫೆಡರಸಿ ಪ್ರೆಸಿಡೆಂಟ್ ಜೆಫರ್ಸನ್ ಡೇವಿಸ್, ವಿವರ: ಜೂನ್ 10 ರಂದು ಕಾನ್ಫೆಡರಸಿ ಪ್ರೆಸಿಡೆಂಟ್ ಜೆಫರ್ಸನ್ ಡೇವಿಸ್ ಅವರ ಪ್ರತಿಮೆಯನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದರು. ಪ್ರತಿಮೆಗೆ ಹಗ್ಗ ಕಟ್ಟಿ ಅದನ್ನು ಕಾರಿನಿಂದ ಎಳೆದು ಒಡೆದು ಹಾಕಲಾಯಿತು ಎನ್ನಲಾಗಿದೆ.
ಬ್ರಿಟನ್ನಲ್ಲಿ ತೆರವು, ವಿರೂಪಗೊಳಿಸಲಾದ ಪ್ರತಿಮೆ ಹಾಗೂ ಸ್ಮಾರಕಗಳ ಪಟ್ಟಿ
ರಾಜ್ಯ: ಬ್ರಿಸ್ಟಲ್, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಎಡ್ವರ್ಡ್ ಕೊಸ್ಟೊನಾಂಡ್, ವಿವರ: ಬ್ರಿಸ್ಟಲ್ನಲ್ಲಿ ಸ್ಥಾಪಿಸಲಾಗಿದ್ದ, 17 ನೇ ಶತಮಾನದ ಗುಲಾಮರ ವ್ಯಾಪಾರಿ ಎಡ್ವರ್ಡ್ ಕೊಸ್ಟೊನಾಂಡ್ ಅವರ ಪ್ರತಿಮೆಯನ್ನು ಪ್ರತಿಭಟನಾಕಾರರು ಜೂನ್ 7 ರಂದು ಒಡೆದು ಹಾಕಿದರು.
ರಾಜ್ಯ: ಪೂರ್ವ ಲಂಡನ್ನ ಡಾಕ್ಲ್ಯಾಂಡ್ಸ್ ಪ್ರದೇಶ, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಸ್ಕಾಟಿಶ್ ವ್ಯಾಪಾರಿ ಮತ್ತು ಗುಲಾಮರ ಒಡೆಯ ರಾಬರ್ಟ್ ಮಿಲಿಗನ್, ವಿವರ: ಜೂನ್ 9 ರಂದು ಸ್ಕಾಟಿಶ್ ವ್ಯಾಪಾರಿ ಮತ್ತು ಗುಲಾಮರ ಒಡೆಯ ರಾಬರ್ಟ್ ಮಿಲಿಗನ್ ಅವರ ಪ್ರತಿಮೆಯನ್ನು ಪೂರ್ವ ಲಂಡನ್ನಲ್ಲಿ ತೆರವುಗೊಳಿಸಲಾಯಿತು.