ವಾಷಿಂಗ್ಟನ್: ಟಿಕ್ ಟಾಕ್‌ನ ಮಾಲೀಕರು ತಮ್ಮ ಜನಪ್ರಿಯ ಆ್ಯಪ್ ಖರೀದಿಸಲು ಮೈಕ್ರೋಸಾಫ್ಟ್ ಬದಲು ಒರಾಕಲ್ ಕಾರ್ಪೊರೇಷನ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಒಪ್ಪಂದದ ಬಗ್ಗೆ ತಿಳಿದಿರುವ ಮೂಲವೊಂದು ತಿಳಿಸಿದೆ.
ಟಿಕ್ ಟಾಕ್ ಖರೀದಿಸುವ ತನ್ನ ಬಿಡ್ ತಿರಸ್ಕರಿಸಲಾಗಿದೆ ಎಂದು ಮೈಕ್ರೋಸಾಫ್ಟ್ ಭಾನುವಾರ ಪ್ರಕಟಿಸಿದೆ. ಬೈಟ್ ಡ್ಯಾನ್ಸ್, ಟಿಕ್ ಟಾಕ್‌ನ ಅಮೆರಿಕಾ ಕಾರ್ಯಾಚರಣೆಯನ್ನು ಮೈಕ್ರೋಸಾಫ್ಟ್‌ಗೆ ಮಾರಾಟ ಮಾಡುವುದಿಲ್ಲ ಎಂದು ನಮಗೆ ತಿಳಿಸಿದ್ದಾರೆ ಅಂತ ಮೈಕ್ರೋಸಾಫ್ಟ್ ಭಾನುವಾರ ತಿಳಿಸಿದೆ.
ಟ್ರಂಪ್ ಆಡಳಿತವು ಸೆಪ್ಟೆಂಬರ್ ಮಧ್ಯದ ವೇಳೆಗೆ ಟಿಕ್ ಟಾಕ್ ನಿಷೇಧಿಸುವುದಾಗಿ ಬೆದರಿಕೆ ಹಾಕಿದೆ. ಚೀನಾದ ಮಾಲೀಕತ್ವದಿಂದಾಗಿ ರಾಷ್ಟ್ರೀಯ-ಸುರಕ್ಷತೆಯ ಅಪಾಯಗಳನ್ನು ಹೇಳಿಕೊಂಡು ತನ್ನ ಯುಎಸ್ ವ್ಯವಹಾರವನ್ನು ಮಾರಾಟ ಮಾಡಲು ಬೈಟ್‌ಡ್ಯಾನ್ಸ್‌ಗೆ ಆದೇಶಿಸಿತ್ತು. ಬಳಕೆದಾರರ ಡೇಟಾವನ್ನು ಚೀನಾದ ಅಧಿಕಾರಿಗಳಿಗೆ ತಲುಪಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ.
ಈ ಒಪ್ಪಂದದಲ್ಲಿ ಮೈಕ್ರೋಸಾಫ್ಟ್ ಜೊತೆ ಪಾಲುದಾರರಾಗಲು ವಾಲ್ಮಾರ್ಟ್ ಯೋಜಿಸಿತ್ತು. ವಾಲ್ಮಾರ್ಟ್ ಇನ್ನೂ ಆಸಕ್ತಿ ಹೊಂದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅದರೆ ಈ ಬಗ್ಗೆ ಪ್ರತಿಕ್ರಿಯಿಸಲು ಒರಾಕಲ್ ಕಾರ್ಪೊರೇಷನ್ ನಿರಾಕರಿಸಿದೆ.