ವಾಷಿಂಗ್ಟನ್( ಅಮೆರಿಕ): ಅಧ್ಯಕ್ಷ ಜೋ ಬೈಡನ್ ಅವರ ಆಡಳಿತದಲ್ಲಿ ಬಜೆಟ್ ನಿರ್ವಹಣೆ ಸಮಿತಿಯ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದ ನೀರಾ ಟಂಡನ್ ಅವರ ನಾಮನಿರ್ದೇಶನವನ್ನು ಹಿಂತೆಗೆದುಕೊಳ್ಳಲಾಗಿದೆ.
ಟಂಡನ್ ಈ ಹಿಂದೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಿ ಅಲ್ಲಿನ ಸೆನೆಟರ್ಗಳು, ಅವರು ಆ ಸ್ಥಾನ ನಿರ್ವಹಿಸಲು ಸೂಕ್ತರಲ್ಲ ಎಂದು ದೂಷಿಸಿದ್ದರು. ಈ ಆರೋಪಗಳು ಪ್ರಮುಖ ಕೆಲಸದ ಸಂಬಂಧದ ಮೇಲೆ ವಿಷಕಾರಿ ಮತ್ತು ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಸೆನೆಟರ್ಗಳು ಅಭಿಪ್ರಾಯಪಟ್ಟಿದ್ದರು.
ಮಧ್ಯಮ ರಿಪಬ್ಲಿಕನ್ ಅವರು ಟಂಡನ್‌ಗೆ ಅಗತ್ಯವಾದ ಬೆಂಬಲ ನೀಡುತ್ತಾರೆ ಎಂದು ಬೈಡೆನ್ ಆಶಿಸಿದ್ದರು. ಆದರೆ, ಅದು ಅಸಂಭವವಾಗಿದೆ. ಸೆನೆಟ್ನಲ್ಲಿ ರಿಪಬ್ಲಿಕನ್ ಮತ್ತು ಡೆಮೋಕ್ರಾಟ್ಗಳನ್ನು ಗುರಿಯಾಗಿಸಿಕೊಂಡು ಟ್ವಿಟರ್ನಲ್ಲಿ ಈ ಹಿಂದೆ ಟಂಡನ್ ಪೋಸ್ಟ್ ಮಾಡಿದ್ದರು.
ಇನ್ನು ಈ ಬಗ್ಗೆ ಮಾತನಾಡಿದ ಬೈಡನ್, "ಮ್ಯಾನೇಜ್ಮೆಂಟ್ ಮತ್ತು ಬಜೆಟ್ ಕಚೇರಿಯ ನಿರ್ದೇಶಕರ ನಾಮ ನಿರ್ದೇಶನದಿಂದ ತನ್ನ ಹೆಸರನ್ನು ಹಿಂತೆಗೆದುಕೊಳ್ಳುವ ನೀರಾ ಟಂಡನ್ ಅವರ ಮನವಿಯನ್ನು ನಾನು ಸ್ವೀಕರಿಸಿದ್ದೇನೆ. ಅವರ ಸಾಧನೆಯ ದಾಖಲೆ, ಅವರ ಅನುಭವ ಮತ್ತು ಅವರ ಸಲಹೆಯ ಬಗ್ಗೆ ನನಗೆ ಅತ್ಯಂತ ಗೌರವವಿದೆ. ನನ್ನ ಆಡಳಿತದಲ್ಲಿ ಅವಳು ಪಾತ್ರವಹಿಸಬೇಕು ಎಂದು ನಾನು ಎದುರು ನೋಡುತ್ತಿದ್ದೆ" ಎಂದಿದ್ದಾರೆ.