ETV Bharat / international

ಕಾಬೂಲ್​ನಲ್ಲಿದ್ದಾರೆ 5,200 ಅಮೆರಿಕ ಯೋಧರು, ಏರ್ಪೋರ್ಟ್ ಸುರಕ್ಷಿತ: US ಆರ್ಮಿ ಮೇಜರ್​ ಜನರಲ್

ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲ. ಆಫ್ಘನ್​ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ಅಮೆರಿಕ ಆರ್ಮಿ ಮೇಜರ್​ ಜನರಲ್​ ಹೇಳಿದ್ದಾರೆ.

US ಆರ್ಮಿ ಮೇಜರ್​ ಜನರಲ್
US ಆರ್ಮಿ ಮೇಜರ್​ ಜನರಲ್
author img

By

Published : Aug 19, 2021, 9:08 PM IST

ವಾಷಿಂಗ್ಟನ್ (ಅಮೆರಿಕ): ಆಫ್ಘನ್​ನ ಇಂದಿನ ಸ್ಥಿತಿಗೆ ಅಮೆರಿಕವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಅಮೆರಿಕ ಆರ್ಮಿ ಮೇಜರ್​ ಜನರಲ್​ ವಿಲಿಯಂ ಹ್ಯಾಂಕ್​ ಟೇಲರ್​ ಪ್ರತಿಕ್ರಿಯೆ ನೀಡಿದ್ದಾರೆ.

ಕಾಬೂಲ್​ನಲ್ಲಿ ಸದ್ಯ 5,200 ಕ್ಕೂ ಹೆಚ್ಚು ಅಮೆರಿಕದ ಯೋಧರಿದ್ದು, ವಿಮಾನ ನಿಲ್ದಾಣ ಸುರಕ್ಷಿತವಾಗಿದೆ. ಅಲ್ಲದೇ, ವಿಮಾನ ಕಾರ್ಯಾಚರಣೆಗಳಿಗೆ ಮುಕ್ತವಾಗಿದೆ, ಯಾವುದೇ ಸಮಸ್ಯೆಗಳಿಲ್ಲ ಎಂದಿದ್ದಾರೆ. ಆಗಸ್ಟ್​ 14 ರಿಂದ ಜನರ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಿದ್ದು, ನಾವು ಈವರೆಗೆ ಅಂದಾಜು 7 ಸಾವಿರ ಜನರನ್ನು ಸ್ಥಳಾಂತರಿಸಿದ್ದೇವೆ ಎಂದು ವಿವರಿಸಿದ್ದಾರೆ.

ಜುಲೈ ಅಂತ್ಯದಲ್ಲಿ ವಿಶೇಷ ವಲಸೆಗಾರರ ವೀಸಾಗಳ ಚಲನೆಯೊಂದಿಗೆ ರಕ್ಷಣಾ ಇಲಾಖೆಯು ವಿದೇಶಾಂಗ ಇಲಾಖೆ ಬೆಂಬಲಿಸಲು ಆರಂಭಿಸಿತು. ಈ ವೇಳೆ ಅಫ್ಘಾನಿಸ್ತಾನದಿಂದ ಹೊರಬಂದ ಜನರ ಒಟ್ಟು ಸಂಖ್ಯೆ 12,000 ಎಂದು ಹ್ಯಾಂಕ್ ಟೇಲರ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಾಗರಿಕರಿಗೆ ಭದ್ರತೆ ಒದಗಿಸುವ ಭರವಸೆ ನೀಡಿದೆ ತಾಲಿಬಾನ್​: ಅಬ್ದುಲ್ಲಾ ಅಬ್ದುಲ್ಲಾ!

ಕಳೆದ 20 ವರ್ಷಗಳಿಂದ ಅಮೆರಿಕದ ಸೇನೆ ಆಫ್ಘನ್​ನಲ್ಲಿ ಬೀಡುಬಿಟ್ಟಿತ್ತು. ಕಳೆದೊಂದು ಇತ್ತೀಚೆಗೆ ಅಮೆರಿಕ ಹಂತಹಂತವಾಗಿ ತನ್ನ ಸೇನೆಯನ್ನು ಹಿಂಪಡೆದುಕೊಳ್ಳುತ್ತಿದ್ದಂತೆ, ತಾಲಿಬಾನ್​ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.