ETV Bharat / international

ಶ್ವೇತಭವನಕ್ಕೆ ಕಾಲಿಡಲಿವೆ ಬೈಡನ್​ ಸಾಕಿರುವ ಪೆಟ್ಸ್​ - Major Biden to shift to White House

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್​ ಜನವರಿ 20 (ನಾಳೆ) ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ಚಾಂಪ್​​ ಮತ್ತು ಮೇಜರ್​ ಎಂಬ ಹೆಸರಿನ ಪೆಟ್ಸ್​​ ಶ್ವೇತಭವನಕ್ಕೆ ಕಾಲಿಡುತ್ತಿವೆ.

The return of 1st Pets: Major & Champ Biden, maybe a cat too
ಶ್ವೇತಭವನಕ್ಕೆ ಕಾಲಿಡಲಿವೆ ಬೈಡನ್​ ಸಾಕಿಕೊಂಡಿರುವ ಪೆಟ್ಸ್​
author img

By

Published : Jan 19, 2021, 2:01 PM IST

ನ್ಯೂಯಾರ್ಕ್​​: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್​ ಜನವರಿ ನಾಳೆ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನಾಲ್ಕು ವರ್ಷಗಳ ಬಳಿಕ ತನ್ನ ಪೆಟ್ಸ್​​(ಶ್ವಾನ)ಗಳನ್ನು ಶ್ವೇತಭವನಕ್ಕೆ ತರಲು ಅವರು ನಿರ್ಧರಿಸಿದ್ದಾರೆ.

ಕಷ್ಟದಲ್ಲಿರುವವರಿಗೆ ನೆರವಾಗಬೇಕೆಂದು ಬೈಡನ್​ ತಂದೆ ಹೇಳಿಕೊಟ್ಟಿದ್ದು, ಕಷ್ಟದಲ್ಲಿದ್ದ ಶ್ವಾನವೊಂದನ್ನು ಬೈಡನ್​ ಕರೆತಂದರು. ಅದಕ್ಕೆ ಕ್ರಿಸ್​ ಮಸ್​ಹಬ್ಬದಂದು ಚಾಂಪ್​​ ಎಂದು ನಾಮಕರಣ ಮಾಡಲಾಯಿತು. ಡಿಹೆಚ್​​ಎ ಸಂಸ್ಥೆ ನೆರವಿನಿಂದ ಚಾಂಪ್​​ ಅನ್ನು ರಕ್ಷಿಸಲಾಗಿದ್ದು, ಬೈಡನ್​​ ರಕ್ಷಿಸಿರುವ ಮೊದಲ ಶ್ವಾನ ಚಾಂಪ್​ ಆಗಿದೆ.

ಈ ಸುದ್ದಿಯನ್ನೂ ಓದಿ: ಜೋ ಬೈಡನ್​ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿಲ್ಲ ಟ್ರಂಪ್​, ಕಾರಣ?

ಮೇಜರ್ ಹೆಸರಿನ ಮತ್ತೊಂದು ಶ್ವಾನ 2018ರಲ್ಲಿ ಬೈಡನ್​​ ಕುಟುಂಬ ಸೇರಿದೆ. ಈ ಶ್ವಾನಕ್ಕೂ ಕೂಡ ತಲೆಗೆ ಪೆಟ್ಟಾಗಿದ್ದ ಸಂದರ್ಭ ಬೈಡನ್​ ಅದನ್ನು ರಕ್ಷಿಸಿದ್ದಾರೆ. ​​ಬೈಡನ್​ ಅಮೆರಿಕದ ಉಪಾಧ್ಯಕ್ಷರಾಗಿದ್ದ ವೇಳೆ ತಮ್ಮ ಪ್ರವಾಸದಲ್ಲಿ ಈ ಶ್ವಾನವನ್ನೂ ಸಹ ಕೊಂಡೊಯ್ಯುತ್ತಿದ್ದರು.

ಸದ್ಯ ಚಾಂಪ್​​ ಮತ್ತು ಮೇಜರ್​ ಎಂಬ ಹೆಸರಿನ ಈ ಎರಡೂ ಪೆಟ್ಸ್​​ ಶ್ವೇತಭವನಕ್ಕೆ ಕಾಲಿಡುತ್ತಿರುವುದು ವಿಶೇಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.