ETV Bharat / international

ನಿಲ್ಲದ ಪ್ರವಾಹದ ಅಬ್ಬರ: 6 ಜನ ಸಾವು ಕೆಲವು ಪ್ರದೇಶಗಳು ಜಲಾವೃತ

ಶನಿವಾರದಿಂದ ಭಾನುವಾರದವರೆಗೆ ಅಮೆರಿಕದ ನ್ಯಾಶ್ವಿಲ್ಲೆಯಲ್ಲಿ 7 ಸೆಂ.ಮೀ ಹೆಚ್ಚು ಮಳೆಯಾಗಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ 8 ಸೆಂ.ಮೀಗಿಂತ ಹೆಚ್ಚು ಮಳೆಯಾಗಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ತಿಳಿಸಿದೆ.

Tennessee flood deaths rise to 6 with more rain coming
ಟೆನ್ನೆಸ್ಸೀನಲ್ಲಿ ನಿಲ್ಲದ ಪ್ರವಾಹದ ಅಬ್ಬರ
author img

By

Published : Mar 31, 2021, 8:23 AM IST

ನ್ಯಾಶ್ವಿಲ್ಲೆ (ಅಮೆರಿಕ): ಟೆನ್ನೆಸ್ಸಿಯಲ್ಲಿ ಪ್ರವಾಹದ ಅಬ್ಬರ ಜೊರಾಗಿದ್ದು ಆರು ಜನ ಮೃತ ಪಟ್ಟಿದ್ದು, ರಾಜ್ಯದ ಕೆಲವು ಭಾಗಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ ಎಂದು ಅಲ್ಲಿನ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ನ್ಯಾಶ್ವಿಲ್ಲೆಯ ನೆಲೆಯಾದ ಡೇವಿಡ್ಸನ್ ಕೌಂಟಿಯಲ್ಲಿ 4 ಜನರು ಮತ್ತು ಚೀಥಮ್ ಮತ್ತು ಹಾಕಿನ್ಸ್ ಕೌಂಟಿಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ ಎಂದು ಅಲ್ಲಿನ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಶನಿವಾರದಿಂದ ಭಾನುವಾರದವರೆಗೆ ನ್ಯಾಶ್ವಿಲ್ಲೆಯಲ್ಲಿ 7 ಸೆಂ.ಮೀ ಹೆಚ್ಚು ಮಳೆಯಾಗಿದೆ, ಮತ್ತು ಇನ್ನೂ ಕೆಲವು ಪ್ರದೇಶಗಳಲ್ಲಿ 8 ಸೆಂ.ಮೀಗಿಂತ ಹೆಚ್ಚು ಮಳೆಯಾಗಿದೆ ಎಂದು ರಾಷ್ಟ್ರೀಯ ಹವಾಮಾನ ಸೇವಾ ವಿಭಾಗ ಮಾಹಿತಿ ಹಂಚಿಕೊಂಡಿದೆ.

ಓದಿ : ಶೇ 90ರಷ್ಟು ವಯಸ್ಕರರು ಏ.19 ರೊಳಗೆ ಲಸಿಕೆ ಪಡೆಯಲು ಅರ್ಹರು: ಜೋ ಬೈಡನ್ ಘೋಷಣೆ

ಇಂದು ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದ್ದು, ಹೆಚ್ಚಿನ ಪ್ರವಾಹ ಉಂಟಾಗುವ ಸಾಧ್ಯತೆಯಿದೆ. ಮಧ್ಯ ಟೆನ್ನೆಸ್ಸಿಯಲ್ಲಿ 2.5 ರಿಂದ 5 ಸೆಂಟಿಮೀಟರ್ ಮಳೆಯಾಗುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ಎಚ್ಚರಿಸಿದೆ.

ಅಮೆರಿಕದಾ ಟೆಕ್ಸಾಸ್​, ಅಲಬಾಮಾ ಸೇರಿ ಹಲವು ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದ್ದು ಜನಜೀವನ ತೊಂದರೆಗೊಳಗಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.