ETV Bharat / international

ಸೋಂಕಿನಿಂದ ಹೃದಯ ರಕ್ತನಾಳಕ್ಕೆ ತೊಂದರೆ: ವರ್ಜೀನಿಯಾ ವಿವಿ ತಜ್ಞರ ಎಚ್ಚರಿಕೆ

author img

By

Published : May 24, 2020, 5:55 PM IST

ಕೊರೊನಾ ವೈರಸ್ ಹೃದಯ ವೈಫಲ್ಯ, ಹೃದಯಾಘಾತ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಪಾರ್ಶ್ವವಾಯುವಿಗೆ ಕಾರಣವಾಗುವ ಗಂಭೀರ ಹೃದಯರಕ್ತನಾಳದ ತೊಂದರೆಗಳಿಗೆ ಕಾರಣವಾಗಬಹುದು ಎಂದು ವರ್ಜೀನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.

COVID-19-induced cardiovascular complications
ಕೊರೊನಾ ಸೋಂಕಿನಿಂದ ಹೃದಯರಕ್ತನಾಳಕ್ಕೆ ತೊಂದರೆ

ರಿಚ್​ಮಂಡ್​: ಕೊರೊನಾ ಸಾಂಕ್ರಾಮಿಕವು ಹೃದಯದ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಕೋವಿಡ್​ ಸೋಂಕು ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಅಮೆರಿಕದ ವರ್ಜೀನಿಯಾ ವಿಶ್ವವಿದ್ಯಾಲಯದ ತಜ್ಞರು ಸಂಶೋಧನೆಯ ಹಲವು ಅಂಶಗಳನ್ನು ಅಮೆರಿಕನ್ ಜರ್ನಲ್ ಆಫ್ ಎಮರ್ಜೆನ್ಸಿ ಮೆಡಿಸಿನ್‌ನಲ್ಲಿ ಪ್ರಕಟಿಸಿದ್ದಾರೆ.

ಹೃದಯ ಆರೈಕೆ ಮುಖ್ಯ:

ವೈರಸ್ ಪೀಡಿತರನ್ನು ರಕ್ಷಿಸುವ ಉದ್ದೇಶದಿಂದ ತುರ್ತಾಗಿ ವಿವಿಧ ಔಷಧಿಗಳನ್ನು ಬಳಸಲಾಗುತ್ತದೆ. ವೈದ್ಯರು ರೋಗಿಗಳ ಉಸಿರಾಟದ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಗಮನ ಹರಿಸದಿದ್ದರೂ ವೈರಸ್, ರೋಗಿಗಳ ಸಾವಿಗೆ ಕಾರಣವಾಗಬಹುದು.

ವೈರಸ್ ಮಾನವ ದೇಹದ ಮೇಲೆ ಹೇಗೆ ಮತ್ತು ಏಕೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಹೆಚ್ಚಿನ ಸಂಖ್ಯೆಯ ರೋಗಿಗಳನ್ನು ಪರೀಕ್ಷಿಸಿದ್ದೇವೆ. ನಾವು ಸಂಶೋಧನೆಯ ಮೇಲೆ, ವಿಶೇಷವಾಗಿ ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ಎಂದು ವರ್ಜೀನಿಯಾ ವಿಶ್ವವಿದ್ಯಾಲಯದ ಸಂಶೋಧಕ ವಿಲಿಯಂ ಬ್ರೇಡ್ ಹೆಳಿದ್ದಾರೆ.

ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು:

ಕೊರೊನಾ ಸೋಂಕಿತರಲ್ಲಿ ಕಾಲು ಭಾಗದಷ್ಟು ಮಂದಿ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆ ಕಂಡುಹಿಡಿದಿದೆ. ವೈರಸ್‌ನಿಂದಾಗಿ ಹೃದಯ ವೈಫಲ್ಯದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಮೃತ ರೋಗಿಗಳಲ್ಲಿ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳಿವೆ ಎಂಬುದು ಸ್ಪಷ್ಟವಾಗಿದೆ.

ಜ್ವರ ಅಥವಾ ಇತರ ವೈರಸ್‌ಗಳು ದೇಹಕ್ಕೆ ಪ್ರವೇಶಿಸಿದ ಕೆಲವು ವಾರಗಳಲ್ಲಿ ಬ್ಲಡ್ ಪ್ಲೇಟ್ಸ್​ ಬೇರ್ಪಡಿಸುತ್ತವೆ. ಇದು ಸಾವಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಪ್ರಸ್ತುತ ಕೋವಿಡ್ -19 ಸೋಂಕಿಗೆ ಸಂಜೀವಿನಿ ಎಂದು ಪರಿಗಣಿಸಲಾಗಿರುವ ಮಲೇರಿಯಾ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್​ನಿಂದ ಹೃದಯಾಘಾತ ಸಂಭವಿಸಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಇದು ಹೃದಯದ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.