ಅಮೆರಿಕ: 15 ವರ್ಷದ ಬಾಲಕ ಹೈಸ್ಕೂಲ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ, ಶಿಕ್ಷಕ ಸೇರಿದಂತೆ ಆರು ಜನರು ಗಾಯಗೊಂಡಿದ್ದು, ಮೂವರು ವಿದ್ಯಾರ್ಥಿಗಳು ಅಸುನೀಗಿದ್ದಾರೆ.
ಮಧ್ಯಾಹ್ನ ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ತರಗತಿಗಳು ನಡೆಯುತ್ತಿರುವಾಗ ಈ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ 16 ವರ್ಷದ ಬಾಲಕ, 14 ಮತ್ತು 17 ವರ್ಷದ ಬಾಲಕಿಯರು ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ ಆರು ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಆರೋಪಿಯನ್ನು ಅಧಿಕಾರಿಗಳು ಬಂಧಿಸಿದ್ದು, ಗನ್ ವಶಪಡಿಸಿಕೊಂಡಿದ್ದಾರೆ.
ಈ ಭಯಾನಕ ಘಟನೆಯ ನಂತರ ಶಾಲೆಗೆ ಬೀಗ ಹಾಕಲಾಗಿದೆ. ಅಧಿಕಾರಿಗಳು ಗುಂಡಿನ ದಾಳಿ ನಡೆದ ಬಾಲಕನಿಗಾಗಿ ಶೋಧ ಪ್ರಾರಂಭಿಸಿದಾಗ, ಉಳಿದ ಶಾಲಾ ಮಕ್ಕಳನ್ನು ಕೊಠಡಿಗೆ ಕಳುಹಿಸಿ, ಬೀಗ ಹಾಕಿ ರಕ್ಷಿಸಿದ್ದರು.
-
#UPDATE| My heart goes out to the families enduring the unimaginable grief of losing a loved one: President Biden said after a Michigan school shooting left 3 students dead & 6 people wounded
— ANI (@ANI) December 1, 2021 " class="align-text-top noRightClick twitterSection" data="
"Suspect, a 15-year-old boy turned himself in & handed over his pistol," he added pic.twitter.com/uqGUhcve85
">#UPDATE| My heart goes out to the families enduring the unimaginable grief of losing a loved one: President Biden said after a Michigan school shooting left 3 students dead & 6 people wounded
— ANI (@ANI) December 1, 2021
"Suspect, a 15-year-old boy turned himself in & handed over his pistol," he added pic.twitter.com/uqGUhcve85#UPDATE| My heart goes out to the families enduring the unimaginable grief of losing a loved one: President Biden said after a Michigan school shooting left 3 students dead & 6 people wounded
— ANI (@ANI) December 1, 2021
"Suspect, a 15-year-old boy turned himself in & handed over his pistol," he added pic.twitter.com/uqGUhcve85
ಬೈಡನ್ ಬೇಸರ:
ಈ ಘಟನೆಯ ಕುರಿತು ಬೇಸರ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ತಮ್ಮ ಪ್ರೀತಿಯ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳ ದುಃಖ ಊಹಿಸಲಾಗದು. ಮೃತರ ಕುಟುಂಸ್ಥರಿಗೆ ಈ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.