ಕೇಪ್ ಕೆನವೆರಲ್(ಅಮೆರಿಕ): ಮೂರು ದಿನಗಳ ಕಾಲ ಬಾಹ್ಯಾಕಾಶ ಪ್ರವಾಸ ಕೈಗೊಂಡಿದ್ದ ನಾಲ್ವರು ಫ್ಲೋರಿಡಾದ ಕರಾವಳಿಯಲ್ಲಿ ಶನಿವಾರ ಸಂಜೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ.
-
#WATCH | After orbiting Earth for 3 days, four astronauts of Inspiration4 flying aboard SpaceX’s Dragon spacecraft safely splashed down in Atlantic Ocean off coast Florida, US today, marking the completion of world’s first all-civilian human spaceflight to orbit
— ANI (@ANI) September 18, 2021 " class="align-text-top noRightClick twitterSection" data="
(Video: SpaceX) pic.twitter.com/HNeuHq3b2t
">#WATCH | After orbiting Earth for 3 days, four astronauts of Inspiration4 flying aboard SpaceX’s Dragon spacecraft safely splashed down in Atlantic Ocean off coast Florida, US today, marking the completion of world’s first all-civilian human spaceflight to orbit
— ANI (@ANI) September 18, 2021
(Video: SpaceX) pic.twitter.com/HNeuHq3b2t#WATCH | After orbiting Earth for 3 days, four astronauts of Inspiration4 flying aboard SpaceX’s Dragon spacecraft safely splashed down in Atlantic Ocean off coast Florida, US today, marking the completion of world’s first all-civilian human spaceflight to orbit
— ANI (@ANI) September 18, 2021
(Video: SpaceX) pic.twitter.com/HNeuHq3b2t
ಮೂರು ದಿನಗಳ ಹಿಂದೆ ಸ್ಪೇಸ್ಎಕ್ಸ್ (SpaceX) ಕಂಪನಿಯ ಖಾಸಗಿ ಫ್ಲೈಟ್ ಕೆನಡಿ ಬಾಹ್ಯಾಕಾಶ ಕೇಂದ್ರದ ಪ್ಯಾಡ್ 39A ನಿಂದ ನಭಕ್ಕೆ ಜಿಗಿದಿತ್ತು. ಇದರಲ್ಲಿ ಓರ್ವ ಉದ್ಯಮಿ, ಆರೋಗ್ಯ ಕಾರ್ಯಕರ್ತೆ, ಮತ್ತಿಬ್ಬರು ಬುಧವಾರ ರಾತ್ರಿ Inspiration-4 ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು.
ವಿಶ್ವದ ಕುತೂಹಲ ಹುಟ್ಟುಹಾಕಿದ್ದ, ಬಹುನಿರೀಕ್ಷಿತ ಯೋಜನೆ ಇದಾಗಿದ್ದು, ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದವರಾರೂ, ವೃತ್ತಿಪರ ಬಾಹ್ಯಾಕಾಶಯಾನಿಗಳಾಗಿರಲಿಲ್ಲ.
ಬಿಲೇನಿಯರ್ ಜರೇಡ್ ಐಸಾಕ್ಮನ್ (38), ವೇತನ ಪಾವತಿ ಪ್ರಕ್ರಿಯೆ ನಡೆಸುವ ಕಂಪನಿಯೊಂದರ ಸಂಸ್ಥಾಪಕರಾಗಿದ್ದು, ಇವರೊಂದಿಗೆ ಬಾಲ್ಯದಲ್ಲಿಯೇ ಕ್ಯಾನ್ಸರ್ನಿಂದ ಗುಣಮುಖರಾದ, ಆರೋಗ್ಯ ಕಾರ್ಯಕರ್ತರಾದ ಹೈಲೆ ಹರ್ಕೆನಿಕ್ಸ್ (29) ಜೊತೆಯಾಗಿದ್ದರು. ಈ ಇಬ್ಬರ ಜೊತೆಗೆ ಸ್ವೀಪ್ಟೇಕ್ಸ್ (Sweepstakes) ಎಂಬ ಸ್ಪರ್ಧೆಯಲ್ಲಿ ಜಯಗಳಿಸಿದ್ದ ವಾಷಿಂಗ್ಟನ್ನಲ್ಲಿ ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಕ್ರಿಸ್ ಸೆಂಬ್ರೊಸ್ಕಿ (42) ಹಾಗೂ ಅರಿಜೋನಾದ ಸಮುದಾಯ ಕಾಲೇಜೊಂದರ ಎಜುಕೇಟರ್ ಸಿಯಾನ್ ಪ್ರಾಕ್ಟರ್ (51) ಎಂಬುವವರೂ ಇದ್ದರು.
ಈ ನಾಲ್ವರು ಬಾಹ್ಯಾಕಾಶ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಆರು ತಿಂಗಳಿಗೂ ಅಧಿಕ ಕಾಲ ತರಬೇತಿ ಪಡೆದಿದ್ದರು. ಸ್ವಯಂಚಾಲಿತ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಸಂಭವನೀಯ ತುರ್ತು ಪರಿಸ್ಥಿತಿಗಳನ್ನು ಎದುರಿಸುವುದನ್ನು ಕಲಿತಿದ್ದರು. ಇದೀಗ ಈ ನಾಲ್ವರು ಮೂರು ದಿನಗಳ ಕಾಲ ಬಾಹ್ಯಾಕಾಶ ಪ್ರವಾಸ ಕೈಗೊಂಡು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿದ್ದಾರೆ.