ಸ್ಯಾನ್ ಫ್ರಾನ್ಸಿಸ್ಕೋ: ಎಲೋನ್ ಮಸ್ಕ್ ಒಡೆತನದ ಕಂಪನಿ ಸ್ಪೇಸ್ ಎಕ್ಸ್ ತನ್ನ ಕಡಿಮೆ ಖರ್ಚಿನ, ಹೊಸ ರೈಡ್ ಶೇರ್ ಮಿಷನ್ ಅಡಿಯಲ್ಲಿ 143 ಸಣ್ಣ ಉಪಗ್ರಹಗಳನ್ನು ಒಂದೇ ರಾಕೆಟ್ ಬಳಸಿ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಉಡಾಯಿಸಿದ್ದು, ಹೊಸ ದಾಖಲೆ ಸೃಷ್ಟಿಸಿದೆ.
ಟ್ರಾನ್ಸ್‌ಪೋರ್ಟರ್-1 ಎಂಬ ಹೆಸರಿನ ಈ ಮಿಷನ್ನಡಿ ಎರಡು ಹಂತದ ಫಾಲ್ಕನ್-9 ರಾಕೆಟ್ ಫ್ಲೋರಿಡಾದ ಕೇಪ್ ಕೆನವೆರಲ್ ಉಡಾವಣಾ ಕೇಂದ್ರದಿಂದ ಆಕಾಶಕ್ಕೆ ಚಿಮ್ಮಿತು.
ಫಾಲ್ಕನ್ 9 ರಾಕೆಟ್ 143 ಉಪಗ್ರಹಗಳನ್ನು ಹೊತ್ತು ಆಕಾಶಕ್ಕೆ ಹಾರಿದೆ. ಒಂದೇ ಬಾರಿಗೆ 143 ಸ್ಯಾಟಲೈಟ್ಗಳನ್ನು ಹಾರಿಸಿದ್ದು ಒಂದು ದಾಖಲೆಯಾಗಿದೆ. ಈ ಮೂಲಕ ರೈಡ್ಶೇರ್ ಯೋಜನೆಯು ಯಶಸ್ವಿಯಾಗಿದೆ ಎಂದು ಸ್ಪೇಸ್ ಎಕ್ಸ್ ತಿಳಿಸಿದೆ.
200 ಕೆ.ಜಿ. ಉಪಗ್ರಹ ಹೊತ್ತೊಯ್ಯಲು 1 ಮಿಲಿಯನ್ ಡಾಲರ್ ವೆಚ್ಚ ತಗುಲಿದೆ. 143 ಉಪಗ್ರಹಗಳಲ್ಲಿ 48 - ಭೂ ಚಿತ್ರ ತೆಗೆಯುವ ಉಪಗ್ರಹಗಳು, 17 ಸಂವಹನ ಹಾಗೂ 30 ಸಣ್ಣ ಉಪಗ್ರಹಗಳಿವೆ. ಅಮೆರಿಕ ಮತ್ತು ಯೂರೋಪ್ ಮೂಲದ ಸ್ಯಾಟಲೈಟ್ಗಳನ್ನು ಜರ್ಮನಿಯ ಎಕ್ಸೊಲಾಂಚ್ ಮೂಲಕ ಉಡಾವಣೆ ಮಾಡಲಾಯಿತು.
ಈ ಉಡಾವಣೆಯು ಈ ಹಿಂದಿನ ಎಲ್ಲ ವಿಶ್ವ ದಾಖಲೆಗಳನ್ನು ಮುರಿದಿದೆ ಎಂದು ನಾಸಾ ತಿಳಿಸಿದೆ. ಈ ಹಿಂದೆ ನಾರ್ತ್ರೋಪ್ ಗ್ರಮ್ಮನ್ 108 ಉಪಗ್ರಹಗಳನ್ನು ಉಡಾಯಿಸಿತ್ತು.