ಸ್ಯಾನ್ ಫ್ರಾನ್ಸಿಸ್ಕೋ: ಸ್ನ್ಯಾಪ್‌ಚಾಟ್ ಅಪ್ಲಿಕೇಶನ್ನ ಕ್ಯುರೇಟೆಡ್ ವಿಷಯದ ಡಿಸ್ಕವರ್ ಪುಟದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಪ್ರಚಾರ ಮಾಡದಿರಲು ನಿರ್ಧರಿಸಿದೆ ಎಂದು ಆಕ್ಸಿಯೋಸ್ ಬುಧವಾರ ವರದಿ ಮಾಡಿದೆ.
"ಟ್ರಂಪ್ ವಿವಾದಾತ್ಮಕ ವಿಷಯವನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಸ್ನ್ಯಾಪ್ಚಾಟ್ನಲ್ಲಿ ಅಲ್ಲ. ನಾವು ಪ್ರಸ್ತುತ ಸ್ನ್ಯಾಪ್‌ಚಾಟ್‌ನ ಡಿಸ್ಕವರ್ ಪ್ಲಾಟ್‌ಫಾರ್ಮ್‌ನಲ್ಲಿ ಅಧ್ಯಕ್ಷರ ವಿಷಯವನ್ನು ಪ್ರಚಾರ ಮಾಡುತ್ತಿಲ್ಲ" ಎಂದು ಸ್ನ್ಯಾಪ್‌ಚಾಟ್‌ನ ಮೂಲ ಕಂಪನಿ ಸ್ನ್ಯಾಪ್‌ನ ವಕ್ತಾರರು ಉಲ್ಲೇಖಿಸಿದ್ದಾರೆ.
"ಡಿಸ್ಕವರ್‌ನಲ್ಲಿ ಉಚಿತ ಪ್ರಚಾರವನ್ನು ನೀಡುವ ಮೂಲಕ ಜನಾಂಗೀಯ ಹಿಂಸೆ ಮತ್ತು ಅನ್ಯಾಯವನ್ನು ಪ್ರಚೋದಿಸುವ ಧ್ವನಿಗಳನ್ನು ನಾವು ಉತ್ತೇಜಿಸುವುದಿಲ್ಲ. ಜನಾಂಗೀಯ ಹಿಂಸೆ ಮತ್ತು ಅನ್ಯಾಯಕ್ಕೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ ಮತ್ತು ಅಮೆರಿಕದಲ್ಲಿ ಶಾಂತಿ, ಪ್ರೀತಿ, ಸಮಾನತೆ ಮತ್ತು ನ್ಯಾಯವನ್ನು ಬಯಸುವ ಎಲ್ಲರೊಂದಿಗೆ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ" ಎಂದು ಹೇಳಿದ್ದಾರೆ.
ಇನ್ನು ಈ ಹಿಂದೆ ಜಾರ್ಜ್ ಫ್ಲಾಯ್ಡ್ ಅವರ ಸಾವಿನ ವಿರುದ್ಧದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಟ್ರಂಪ್ ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಟ್ರಂಪ್ ವಿರುದ್ಧ ಕ್ರಮ ಕೈಗೊಳ್ಳಲು ಫೇಸ್‌ಬುಕ್‌ನಲ್ಲಿ ಅನೇಕರು ಒತ್ತಾಯಿಸಿದ್ದರು. ಟ್ವಿಟ್ಟರ್ನಲ್ಲಿ ಹ್ಯಾಶ್ಟ್ಯಾಗ್ ಬ್ಲ್ಯಾಕ್ ಲೈವ್ ಮ್ಯಾಟರ್ ಎಂಬ ಆಂದೋಲನ ಕೂಡ ಶುರುವಾಗಿತ್ತು.