ETV Bharat / international

ಲಿಂಗ ಸಮಾನತೆ, ಮಹಿಳಾ ಸಬಲೀಕರಣಕ್ಕೆ ಬದ್ಧ: ವಿಶ್ವಸಂಸ್ಥೆಯಲ್ಲಿ ಭಾರತದ ಸಂದೇಶ

ನ್ಯೂಯಾರ್ಕ್​ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 65ನೇ ಅಧಿವೇಶನದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಹಿಳೆಯರ ಸ್ಥಿತಿಗತಿ ಕುರಿತ ಸಾಮಾನ್ಯ ಚರ್ಚೆಯಲ್ಲಿ ಪಾಲ್ಗೊಂಡು ಭಾಷಣ ಮಾಡಿದರು.

Smriti Irani speech in  UN general meeting
ಸ್ಮೃತಿ ಇರಾನಿ
author img

By

Published : Mar 20, 2021, 8:57 AM IST

ನ್ಯೂಯಾರ್ಕ್​​/ಯುಎಸ್: ಪುರುಷರಿಗೆ ಸಮಾನವಾಗಿ ಮಹಿಳೆಗೆ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶಗಳನ್ನು ವಿಸ್ತರಿಸಲು ಮತ್ತು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಗುರಿಗಳನ್ನು ಮುನ್ನಡೆಸುವ ಭಾರತದ ಬದ್ಧತೆಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಶುಕ್ರವಾರ ಪುನರುಚ್ಚರಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 65ನೇ ಅಧಿವೇಶನದಲ್ಲಿ ಮಹಿಳೆಯರ ಸ್ಥಿತಿಗತಿ ಕುರಿತ ಸಾಮಾನ್ಯ ಚರ್ಚೆಯಲ್ಲಿ ಕೇಂದ್ರ ಸಚಿವೆ ಇರಾನಿ ಮಾತನಾಡಿದರು. "ಕೋವಿಡ್​ ನಂತರದ ದಿನಗಳಲ್ಲಿ ಜಗತ್ತಿನಾದ್ಯಂತ ಇರುವ ನಮ್ಮ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗಾಗಿ ಹೆಚ್ಚು ನ್ಯಾಯಯುತ ಮತ್ತು ಸಮಾನವಾದ ಸ್ಥಾನಗಳನ್ನು ನಿರ್ಮಿಸುವ ಬದ್ಧತೆಯಲ್ಲಿ ಭಾರತ ಸ್ಥಿರವಾಗಿದೆ." ಎಂದು ಹೇಳಿದರು.

ಭಾರತವನ್ನು ಮಹಿಳಾ ಅಭಿವೃದ್ಧಿ ಎಂಬ ಮಾದರಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಕೊಂಡೊಯ್ಯುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವನ್ನು ಸಚಿವೆ ಸ್ಮೃತಿ ಇರಾನಿ ಶ್ಲಾಘಿಸಿದರು, 'ಆತ್ಮನಿರ್ಭರ ಭಾರತ್' ಆಕಾಂಕ್ಷೆಯನ್ನು ಈಡೇರಿಸುವಲ್ಲಿ ಮಹಿಳಾ ಸಂಸ್ಥೆ ಮತ್ತು ನಾಯಕತ್ವವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಭಾರತದಲ್ಲಿ ಮಹಿಳೆಯರ ಆರ್ಥಿಕ ಸ್ಥಿತಿ ಬಲಪಡಿಸಲು, ಉದ್ಯೋಗ ಮತ್ತು ಸ್ವ-ಉದ್ಯೋಗಾವಕಾಶಗಳ ಸೃಷ್ಟಿ, ಆರೋಗ್ಯ, ರಕ್ಷಣೆ, ಸುರಕ್ಷತೆ, ಭದ್ರತೆ ಮತ್ತು ಶಿಕ್ಷಣವನ್ನು ವಿಸ್ತರಿಸುವತ್ತ ಗಮನಹರಿಸುವ ಪ್ರಮುಖ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಸ್ಥಳೀಯ ಆಡಳಿತದಲ್ಲಿ ಮಹಿಳೆಯರಿಗೆ ಸ್ಥಾನಗಳ ಮೀಸಲಾತಿ ಹಿನ್ನೆಲೆ 1.37 ದಶಲಕ್ಷಕ್ಕೂ ಹೆಚ್ಚು ಚುನಾಯಿತ ಭಾರತೀಯ ಮಹಿಳಾ ಪ್ರತಿನಿಧಿಗಳು ಸಮುದಾಯ ಮಟ್ಟದಲ್ಲಿ ಸಾರ್ವಜನಿಕ ನೀತಿಗಳನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಉತ್ತಮ ನಾಯಕತ್ವ ಪ್ರದರ್ಶಿಸುತ್ತಿದ್ದಾರೆ. ಪ್ರಧಾನ ಮಂತ್ರಿ ಜನ ಧನ್ ಆರ್ಥಿಕ ಯೋಜನೆಯ ಮೂಲಕ ನಮ್ಮ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 220 ಮಿಲಿಯನ್​ಗೂ ಹೆಚ್ಚು ಭಾರತೀಯ ಮಹಿಳೆಯರನ್ನು ಬ್ಯಾಂಕಿಂಗ್​ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳುವಂತೆ ಮಾಡಲಾಯ್ತು ಎಂಬುದು ನಮಗೆ ಬಹಳ ಸಂತೋಷದ ಸಂಗತಿಯಾಗಿದೆ ಎಂದು ಇರಾನಿ ತಿಳಿಸಿದರು.

ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆ ಜಾರಿಯಾದ ನಂತರ, ಹುಟ್ಟಿನ ಲಿಂಗಾನುಪಾತ 16 ಪಾಯಿಂಟ್‌ಗಳಿಂದ ಸುಧಾರಣೆ ಕಂಡಿದ್ದು ಅಖಿಲ ಭಾರತ ಮಟ್ಟದಲ್ಲಿ ಪ್ರತೀ ಸಾವಿರ ಮಂದಿಗೆ 918 ಇದ್ದದ್ದು ಪ್ರಸ್ತುತ 934 ರಷ್ಟಾಗಿದೆ. ಭಾರತದಲ್ಲಿ ತಾಯಂದಿರ ಮರಣ ಪ್ರಮಾಣವು ಕಡಿಮೆಯಾಗಿದೆ. 2014-16ರಲ್ಲಿ 1 ಲಕ್ಷ ಮಂದಿಗೆ 130 ಇದ್ದ ತಾಯಿ ಮರಣ ದರ 2016-18ರಲ್ಲಿ 113 ಕ್ಕೆ ಇಳಿಕೆ ಕಂಡಿದೆ.

ಕಳೆದ 6 ವರ್ಷಗಳಲ್ಲಿ 80 ದಶಲಕ್ಷಕ್ಕೂ ಹೆಚ್ಚು ಭಾರತೀಯ ಮಹಿಳೆಯರಿಗೆ ಶುದ್ಧ ಅಡುಗೆ ಇಂಧನವನ್ನು ಒದಗಿಸುವ ಪ್ರಯತ್ನವನ್ನು ಭಾರತ ಸರ್ಕಾರ ಮಾಡಿದೆ. 10 ಕೋಟಿ ಮನೆಗಳಲ್ಲಿ ಶೌಚಾಲಯಗಳ ನಿರ್ಮಾಣವಾಗಿದ್ದು, ಭಾರತದಲ್ಲಿ ಮಹಿಳೆಯರ ಆರೋಗ್ಯ ಮತ್ತು ಕಲ್ಯಾಣಕ್ಕೆ ಅಪಾರ ಕೊಡುಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.