ಯುಎಸ್ನಲ್ಲಿ ಮೊದಲ ಬಾರಿಗೆ ಸಿಖ್ ಜನಾಂಗವನ್ನು 2020 ರ ಜನಗಣತಿಯಲ್ಲಿ ಪ್ರತ್ಯೇಕ ಜನಾಂಗೀಯ ಗುಂಪಾಗಿ ಪರಿಗಣಿಸಲು ಮುಂದಾಗಿದೆ ಎಂದು ಅಲ್ಪಸಂಖ್ಯಾತ ಸಮುದಾಯದ ಸಂಘಟನೆಯು ಮಂಗಳವಾರ ಹೇಳಿದೆ.
ಇದರ ಕುರಿತು ಮಾತನಾಡಿದ ಸ್ಯಾನ್ ಡಿಯಾಗೋ ಸಿಖ್ ಸೊಸೈಟಿಯ ಅಧ್ಯಕ್ಷ ಬಲ್ಜೀತ್ ಸಿಂಗ್, ಸಿಖ್ ಸಮುದಾಯದ ಇಷ್ಟುದಿನಗಳ ಸತತ ಪ್ರಯತ್ನಗಳು ಇಂದು ಫಲಪ್ರದವಾಗಿವೆ. ಇದೊಂದು ಮೈಲಿಗಲ್ಲು ಕ್ಷಣವಾಗಿದ್ದು, ಇದು ಅಮೆರಿಕದ ಸಿಖ್ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ, ಮುಂದಿನ ದಿನಗಳಲ್ಲಿ ಇತರ ಜನಾಂಗಗಳಿಗೂ ಸಹಕಾರಿಯಾಗಿದೆ ಎಂದರು.
ಅಮೆರಿಕಾದಲ್ಲಿನ ಸಿಖ್ಖರ ನಿಖರವಾದ ಎಣಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರತ್ಯೇಕವಾದ ಕೋಡ್ ಅಗತ್ಯವಿದೆ ಎಂದು ಸ್ಪಷ್ಟವಾಗಿದ್ದು, ಇದೊಂದು ವಿಶಿಷ್ಟ ಗುರುತನ್ನು ಗುರುತಿಸುತ್ತದೆ ಎಂದು ಯುಎಸ್ ಜನಗಣತಿ ಉಪನಿರ್ದೇಶಕ ರಾನ್ ಜಾರ್ಮಿನ್ ಹೇಳಿದರು.
ಯುಎಸ್ ಸಿಖ್ಖರ ಪ್ರಕಾರ, ಯುಎಸ್ನಲ್ಲಿ ಪ್ರಸ್ತುತ ಅಂದಾಜು 10 ಲಕ್ಷ ಸಿಖ್ಖರು ವಾಸಿಸುತ್ತಿದ್ದಾರೆ. ಆದ್ದರಿಂದ ಈ ಜನಗಣತಿಯಲ್ಲಿ ಒಂದು ವಿಶಿಷ್ಟ ಜನಾಂಗೀಯ ಗುಂಪಾಗಿ ಪ್ರತಿನಿಧಿಸುವ ಮೂಲಕ ವಿಶೇಷ ಮಾನದಂಡಗಳನ್ನು ಪೂರೈಸುತ್ತಾರೆ ಮತ್ತು ವಿಶಿಷ್ಟ ಏಕೀಕೃತ ನೋಟ, ಸಂಸ್ಕೃತಿ, ಭಾಷೆ, ಆಹಾರ ಮತ್ತು ಇತಿಹಾಸವನ್ನು ಹೊಂದುತ್ತಾರೆ.
ಕಳೆದ ಎರಡು ದಶಕಗಳಿಗಿಂತಲೂ ಅಮೆರಿಕದಲ್ಲಿ ನೆಲೆಸಿರುವ ಸಿಖ್ಖರು ಪ್ರತ್ಯೇಕ ಕೋಡ್ಗಳಿಗಾಗಿ ಹಾಗೂ ಸಿಖ್ಖರನ್ನು ಜನಾಂಗೀಯ ಗುಂಪಾಗಿ ಸೇರಿಸಬೇಕೆಂದು ಯುಎಸ್ ಫೆಡರಲ್ ರಿಜಿಸ್ಟರ್ನೊಂದಿಗೆ ನಿರಂತರ ಹೋರಾಟ ನಡೆಸುತ್ತ ಬಂದಿದ್ದರು. ಸಿಖ್ಖರನ್ನು ಜನಾಂಗೀಯ ಗುಂಪಾಗಿ ಸೇರಿಸುವುದರಿಂದ ಸಿಖ್ ಸಮುದಾಯದ ವಿರುದ್ಧ ಬೆದರಿಸುವ ಮತ್ತು ಸಿಖ್ಖರ ಮೇಲೆ ದ್ವೇಷದ ಅಪರಾಧಗಳನ್ನು ಸಾಧಿಸುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಬಹುದಾಗಿದೆ.
ಹಲವಾರು ದಿನಗಳಿಂದ ಅಮೆರಿಕನ್ ಸಿಖ್ ನಿಯೋಗವು ಯುಎಸ್ ಜನಗಣತಿಯೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದು, ಕೊನೆಯದಾಗಿ ಜನವರಿ 6 ರಂದು ಸ್ಯಾನ್ ಡಿಯಾಗೋದಲ್ಲಿ ಸಭೆ ನಡೆಸಿತ್ತು. ಇದರೊಂದಿಗೆ 2020 ರ ಯುಎಸ್ ಜನಗಣತಿಗೆ ಸಿಖ್ ಒಕ್ಕೂಟವು ಜನಗಣತಿ ಬ್ಯೂರೋ ಜೊತೆ ಪಾಲುದಾರಿಕೆ ಹೊಂದಿದೆ.