ETV Bharat / international

ಮತ್ತೆ ಜೀವದಾನ: ಮಹಾಭಿಯೋಗದಲ್ಲಿ ಬಚಾವ್​ ಆದ ಡೊನಾಲ್ಡ್​​ ಟ್ರಂಪ್​​.. ಹೀಗಿದೆ ಡೀಟೇಲ್ಸ್​​ ರಿಪೋರ್ಟ್​​​!! - ಟ್ರಂಪ್​ ಬಗ್ಗೆ ಮಾಹಿತಿ

ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಎರಡು ಬಾರಿ ವಾಗ್ದಂಡನೆಗೆ ಗುರಿಯಾಗಿರುವ ಕುಖ್ಯಾತಿ ಪಡೆದಿರುವ ಡೊನಾಲ್ಡ್​ ಟ್ರಂಪ್​, ಅಧ್ಯಕ್ಷ ಸ್ಥಾನ ಕಳೆದುಕೊಂಡ ನಂತರವೂ ಸಹ ವಾಗ್ದಂಡನೆಗೆ ಗುರಿಯಾಗಿದ್ದರು. ಆದರೆ, ಸೆನೆಟ್​ನಲ್ಲಿ ನಡೆದ ಮಹಾಭಿಯೋಗದಲ್ಲಿ ಟ್ರಂಪ್​ ಜಯ ಸಾಧಿಸಿದ್ದು, ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

FIle Photo
ಸಂಗ್ರಹ ಚಿತ್ರ
author img

By

Published : Feb 15, 2021, 3:48 PM IST

Updated : Feb 15, 2021, 5:14 PM IST

ವಾಷಿಂಗ್ಟ್​ನ್​​(ಅಮೆರಿಕ): ಪ್ರಪಂಚದ ದೊಡ್ಡಣ್ಣ ಎಂದು ಹೆಸರುವಾಸಿಯಾಗಿರುವ ಅಮೆರಿಕ ದೇಶದ ಬಗ್ಗೆ ಸಹಜವಾಗಿಯೇ ಎಲ್ಲರಿಗೂ ತಿಳಿದಿರುವ ವಿಷಯವಾಗಿತ್ತು. ಆದರೆ ಅಲ್ಲಿನ ರಾಜಕೀಯ ಸ್ಥಿತಿ ಗತಿಗಳೇನು ಎಂಬುದು ಇಲ್ಲಿಯವರೆಗೆ ಹಲವಾರು ಮಂದಿಗೆ ತಿಳಿದಿರುವುದು ಕಡಿಮೆ. 2016ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಗೊಂಡ ಡೊನಾಲ್ಡ್​​ ಟ್ರಂಪ್​ ಅಧಿಕಾರಕ್ಕೆ ಬಂದ ಬಳಿಕ ಅಮೆರಿಕದ ವಸ್ತು ಸ್ಥಿತಿ ರಾಜಕೀಯದ ಬಗ್ಗೆ ಹಲವರಿಗೆ ತಿಳಿಯಲಾರಂಭಿಸಿದ್ದು, ಮಹಾಭಿಯೋಗ, ದೋಷಾರೋಪಣೆ ಎಂಬ ಅಂಶಗಳು ಅಮೆರಿಕ ಸಂವಿಧಾನದಲ್ಲಿದೆ ಎಂದು ಮನದಟ್ಟಾಯಿತು. ಇವೆಲ್ಲವುದಕ್ಕೂ ಕಾರಣ ಡೊನಾಲ್ಡ್​​ ಟ್ರಂಪ್.

ರಿಪಬ್ಲಿಕನ್​​ ಪಕ್ಷದಿಂದ 2016ರಂದು ಅಮೆರಿಕ ಅಧ್ಯಕ್ಷ ಗಾಧಿ ಹಿಡಿದ ಡೊನಾಲ್ಡ್​​ ಟ್ರಂಪ್​ ತಮ್ಮ ವಿಚಿತ್ರ ವರ್ತನೆ, ನೇರ ನುಡಿ, ವಾಕ್ಚಾತುರ್ಯದಿಂದ ವಿಶ್ವದ ಗಮನ ಸೆಳೆದಿದ್ದರು. ಇವರ ಅಧಿಕಾರವಧಿಯಲ್ಲಿ ಹೊಗಳಿಕೆಗಳಿಗಿಂತ ತೆಗಳಿಕೆಗಳೇ ಅತಿಯಾಗಿ ಉದ್ಬವಿಸಿದ್ದು, ವಿಪಕ್ಷವಾಗಿದ್ದ ಡೆಮಾಕ್ರಟಿಕ್​ ಪಕ್ಷ ಆರೋಪದ ಸುರಿಮಳೆಯನ್ನೇ ಸುರಿಸಿತ್ತು. ಇದರಲ್ಲಿ ಮುಖ್ಯವಾಗಿ ಟ್ರಂಪ್​​, ಉಕ್ರೇನಿಯನ್​​ ಅಧ್ಯಕ್ಷರ ಬಳಿ ಜೋ ಬೈಡನ್​​ ಹಾಗೂ ಅವರ ಮಗ ಹಂಟರ್​​ ಬಗ್ಗ ತನಿಖೆ ನಡೆಸಲು ಸಹಾಯ ಕೋರಿದ್ದರು ಎಂದು ಆರೋಪಿಸಿ ಡಿಸೆಂಬರ್​ 2019ರನ್ನು ದೋಷಾರೋಪಣೆಗೆ ಒಳಪಡಿಸಲಾಯಿತು.

ಸ್ಪೀಕರ್​​ ನ್ಯಾನ್ಸಿ ಪೆಲೋಸಿಗೆ ಎರಡನೇ ಬಾರಿ ಮುಖಭಂಗ:

ಈ ವೇಳೆ ಸ್ಪೀಕರ್​ ನ್ಯಾನ್ಸಿ, ಟ್ರಂಪ್ ವಿರುದ್ಧ ದೋಷಾರೋಪಣೆ ಮಾಡುವುದಾಗಿ ಪ್ರಕಟಿಸಿದ್ದರು. ದೋಷಾರೋಪಣೆ ಮಾಡಲೆಂದು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಪ್ರಕಟಿಸಿದ್ದರು. ಇದಕ್ಕೆ ಹೌಸ್​ ಆಫ್​​ ​ರೆಪ್ರೆಸೆಂಟೇಟಿವ್ಸ್​​ ಒಪ್ಪಿಗೆ ಪಡೆದು, ಈ ನಿರ್ಣಯವನ್ನ ಸೆನೆಟ್​​ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಸೆನೆಟ್​​ನಲ್ಲಿ ಟ್ರಂಪ್​ಗೆ ಬಹುಮತವಿದ್ದಿದ್ದರಿಂದ ದೋಷಾರೋಪಣೆ ಅಂಗೀಕಾರಗೊಂಡಿರಲಿಲ್ಲ.

Pelosi
ನ್ಯಾನ್ಸಿ ಪೆಲೋಸಿ

ಇದಾದ ಬಳಿಕ, ಕೊರೊನಾ ಎಂಬ ಮಹಾಮಾರಿ ಜಗತ್ತನ್ನೇ ಆಕ್ರಮಿಸಿಕೊಂಡು ಮನುಕುಲಕೆ ಸಂಕಟವನ್ನುಂಟು ಮಾಡಿತ್ತು. ಕೊರೊನಾದಿಂದಾಗಿ ಅಮೆರಿಕ ದೇಶ ಪಡಬಾರದ ಕಷ್ಟ ಅನುಭವಿಸಿದ್ದು, ಇದರ ಹೊಣೆಯೂ ಸಹ ಟ್ರಂಪ್​ ತಲೆ ಮೇಲೆಯೇ ಬಂದೊದಗಿತು. ಇದೇ ಸದಾವಕಾಶ ಎಂದುಕೊಂಡ ಡೆಮಾಕ್ರಟಿಕರು ಕೊರೊನಾ ನಿರ್ವಹಣೆಯಲ್ಲಿ ಟ್ರಂಪ್​ ವಿಫಲರಾಗಿದ್ದಾರೆ, ಕೇವಲ ವಾಕ್ಚಾತುರ್ಯತೆ ಇದ್ದರೆ ಸಾಲದು, ಕೆಲಸ ಮಾಡುವ ಇಚ್ಚಾಶಕ್ತಿಯೂ ಸಹ ಅತ್ಯವಶ್ಯಕ ಎಂದು ಸಮರ ಸಾರಲು ಆರಂಭಿಸಿದ್ದರು. ಅಷ್ಟೊತ್ತಿಗಾಗಲೇ ನವೆಂಬರ್​ ಸಮೀಪಿಸಿದ್ದು, ಅಮೆರಿಕ ಚುನಾವಣೆಗೆ ದಿನಗಣನೆ ಪ್ರಾರಂಭಗೊಂಡಿತ್ತು.

ಸುಮಾರು 4 ವರ್ಷಗಳ ಕಾಲ ಹುಲಿಯಂತೆ ಘರ್ಜಿಸಿದ್ದ ಟ್ರಂಪ್,​ ಚುನಾವಣೆ ಸಮೀಪಿಸುತ್ತಿದ್ದಂತೆ ಕೊಂಚ ಸಪ್ಪಗಾಗಿದ್ದರು. ಅಷ್ಟೊತ್ತಿಗಾಗಲೇ, ಡೆಮಾಕ್ರಟಿಕ್​ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಎಂದು ಹೇಳಿಕೊಂಡಿದ್ದ ಜೋ ಬೈಡೆನ್​ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡು ಟ್ರಂಪ್​ ಅಧಿಕಾರವಧಿಯಲ್ಲಿನ ಹಿನ್ನಡೆಗಳನ್ನು ಜನರಿಗೆ ಎತ್ತಿ ತೋರಿಸುವ ಕೆಲಸದಲ್ಲಿ ನಿರತರಾಗಿದ್ದರು. ಕೊರೊನಾ ಕಾಲಘಟ್ಟದಲ್ಲಿ ಟ್ರಂಪ್​ ಅಧಿಕಾರ ನಿರ್ವಹಿಸಲು ವಿಫಲರಾಗಿದ್ದಾರೆ, ಅದಲ್ಲದೇ ಹಲವಾರು ಹಗರಣದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಡೆಮಾಕ್ರಟಿಕರು ಅಮೆಮರಿಕನ್ನರ ಮನವೊಲಿಸುವಲ್ಲಿ ಯಶಸ್ವಿಯಾಗತೊಡಗಿದರು.

ಸುಪ್ರೀಂನಲ್ಲಿ ಟ್ರಂಪ್​ಗೆ ಮುಖಭಂಗ

ಈ ಮಧ್ಯೆ ಹೇಗಾದರೂ ಮಾಡಿ ಎರಡನೇ ಬಾರಿಗೆ ಅಧಿಕಾರ ಹಿಡಿಯಬೇಕೆಂಬ ಹೆಬ್ಬಯಕೆಯಿಂದ ಶತಾಯುಘತಾಯವಾಗಿ ಟ್ರಂಪ್​ ಪ್ರಯತ್ನಿಸಿದ್ದರೂ ಸಹ, ಅವರ ಯಾವುದೇ ಆಲೋಚನೆಗಳು ಹಾಗೂ ತಂತ್ರಗಳು ಕೈ ಹಿಡಿಯಲಿಲ್ಲ. ಕೊನೆಗೂ 2020ರ ಚುನಾವಣೆಯಲ್ಲಿ ಟ್ರಂಪ್​​ ಸೋಲನುಭುವಿಸುವಂತಾಯಿತು. ಇದಾದ ಬಳಿಕವೂ ಮರಳಿ ಯತ್ನವ ಮಾಡು ಎಂಬಂತೆ, ಈ ಚುನಾವಣೆಯಲ್ಲಿ ಏನೋ ಮೋಸವಾಗಿದೆ, ನಾನು ಸೋಲುವುದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಘಂಟಾ ಘೋಷವಾಗಿ ಹೇಳಿಕೊಂಡ ಟ್ರಂಪ್​, ನ್ಯಾಯಾಲಯದ ಮೊರೆ ಹೋಗಿದ್ದರು, ಆದರೆ ದುರಾದೃಷ್ಟವಶಾತ್​ ಸತ್ಯ ಎಂದಿಗೂ ಸುಳ್ಳಾಗುವುದಿಲ್ಲ ಎಂಬಂತೆ ಅವರ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು.

Trump
ಡೊನಾಲ್ಡ್​ ಟ್ರಂಪ್​

ಅಧಿಕಾರ ಬಿಡುವ ವಾರ ಮೊದಲು ಎರಡನೇ ಬಾರಿ ಮಹಾಭಿಯೋಗ ಗೊತ್ತುವಳಿ ಮಂಡನೆ:

ಇಷ್ಟೆಲ್ಲಾ ಆದ ಬಳಿಕವೂ ಸಹ ಟ್ರಂಪ್​ಗೆ ದೋಷಾರೋಪಣೆ ಎಂಬುದು ಶನಿ ಹೆಗಲೇರಿದಂತಾಗಿತ್ತು. ನೀ ಎನ್ನ ಬಿಟ್ಟರು, ನಾ ನಿನ್ನ ಬಿಡಲಾರೆ ಎಂಬಂತೆ ಅಧ್ಯಕ್ಷ ಕುರ್ಚಿ ಟ್ರಂಪ್​ ಕೈ ತಪ್ಪಿ ಹೋಗಿದ್ದರೂ ಸಹ, ಅಧಿಕಾರದವಧಿಯಲ್ಲಿ ಮಾಡಲಾದ ಅಪರಾಧಗಳು ಟ್ರಂಪ್​​ರನ್ನು ದೋಷಾರೋಪಣೆಗೆ ಒಳಪಡಿಸುವಂತೆ ಮಾಡಿತ್ತು. ಎಲ್ಲವುದಕ್ಕಿಂತ ಮುಖ್ಯವಾಗಿ ಜನವರಿ 6ರಂದು ಟ್ರಂಪ್​​ ಬೆಂಬಲಿಗರು ಕ್ಯಾಪಿಟಲ್​ ಕಟ್ಟಡದ ಮೇಲೆ ನಡೆಸಿದ ದಾಳಿಯೇ ಟ್ರಂಪ್​​ರನ್ನು ದೋಷಾರೋಪಣೆಗೆ ಒಳಪಡಿಸಲು ಪ್ರಮುಖ ಕಾರಣ ಎನ್ನಲಾಗಿದೆ. ಈ ಎಲ್ಲದರ ನಡುವೆ, ಡೊನಾಲ್ಡ್​​ ಟ್ರಂಪ್​ ಹಲವಾರು ಬಾರಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದರು. ಆದರೂ ಸಹ ಟ್ರಂಪ್​ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಬೇಕು ಎಂಬ ಉದ್ದೇಶದಿಂದ ಡೆಮಾಕ್ರಟಿಕರು ಟ್ರಂಪ್​ ಅಧಿಕಾರದಿಂದ ಕೆಳಗಿಳಿದರೂ ಸಹ ದೋಷಾರೋಪಣೆಗೆ ಒಳಪಡಿಸಿದ್ದರು.

ಅಧಿಕಾರದಲ್ಲಿಲ್ಲದಿದ್ದರೂ ಮಹಾಭಿಯೋಗ ಮಾಡಬಹುದಾ?

ಅಧಿಕಾರ ಹಿಡಿದ ಪಕ್ಷದಿಂದ ಮಹಾಭಿಯೋಗವನ್ನು ನಡೆಸಲು ಅವಕಾಶವಿದ್ದು, ಇದನ್ನು 'ತಡ ಮಹಾಭಿಯೋಗ'(Late impeachment) ಎಂದು ಕರೆಯಲಾಗುತ್ತದೆ. ಮಹಾಭಿಯೋಗ ಯಶಸ್ವಿಯಾದರೆ ಆ ವ್ಯಕ್ತಿ ಮುಂದಿನ ದಿನಗಳಲ್ಲಿ ಅಧಿಕಾರ ಹಿಡಿಯಲು ಅಥವಾ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ. ಹೀಗಾಗಿ ಭವಿಷ್ಯದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರ ಹಿಡಿಯಬಾರದು ಎಂಬ ಕಾರಣಕ್ಕೆ ಡೆಮಾಕ್ರಟಿಕರು ಮಹಾಭಿಯೋಗ ನಡೆಸಿದ್ದರು.

ಅಧಿಕಾರವಧಿ ಮುಗಿಯುವ ವಾರ ಮೊದಲು ಹೌಸ್​ ಆಫ್​ ರೆಪ್ರೆಸೆಂಟಿಟಿವ್​​​ನಲ್ಲಿ ಗೊತ್ತುವಳಿ ಅಂಗೀಕಾರ!

ಕ್ಯಾಪಿಟಲ್​ ಹಿಲ್ ಮೇಲೆ ಟ್ರಂಪ್​ ಬೆಂಬಲಿಗರು ದಾಳಿ ಮಾಡಿದ್ದನ್ನು ಖಂಡಿಸಿ ಹಾಗೂ ಅಮೆರಿಕ ಪ್ರಜಾಪ್ರಭುತ್ವಕ್ಕೆ ಟ್ರಂಪ್ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದ ಡೆಮಾಕ್ರಟ್​ಗಳು, ಡೊನಾಲ್ಡ್​ ಟ್ರಂಪ್​ ವಿರುದ್ಧ ಮಹಾಭೀಯೋಗ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದರು. ಅಮೆರಿಕ ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವ ಗೊತ್ತುವಳಿ ಅಮೆರಿಕದ ಹೌಸ್ ಆಫ್​ ರೆಪ್ರೆಸೆಂಟಿಟಿವ್​ ನಲ್ಲಿ ಅಂಗೀಕಾರಗೊಂಡಿತ್ತು. ಇದು ಸೆನೆಟ್​ನಲ್ಲಿ ಅಂಗೀಕಾರವಾಗಬೇಕಿತ್ತು. ಅಷ್ಟರಲ್ಲಿ ಡೊನಾಲ್ಡ್ ಅಧ್ಯಕ್ಷೀಯ ಅವಧಿ ಮುಗಿದು, ಜ. 20 ರಂದು ಬೈಡನ್​ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಆಗ ಇಂಪೀಚ್​ಮೆಂಟ್​ ಪ್ರಕ್ರಿಯೆಗೆ ತಡೆ ಉಂಟಾಗಿತ್ತು.

ದೋಷಾರೋಪಣೆ ಗೊತ್ತುವಳಿ ವಿರೋಧಿಸಿದ ಟ್ರಂಪ್​: ವಕೀಲರಿಂದ ಸಮರ್ಥ ವಾದ ಮಂಡನೆ

ಆದರೆ ಪಟ್ಟು ಬಿಡದ ಸ್ಪೀಕರ್​ ನ್ಯಾನ್ಸಿ ಪೆಲೋಸಿ ಸೆನೆಟ್​ನಲ್ಲೂ ವಾಗ್ದಂಡನೆ ಪ್ರಕ್ರಿಯೆ ಮುಂದುವರೆಸಿದ್ದರು. ಈ ವೇಳೆ ಸೆನೆಟ್​ನಲ್ಲಿ ಟ್ರಂಪ್​ ಪರವಾಗಿ ವಕೀಲ ಮೈಕೆಲ್​ ವ್ಯಾನ್ ಡೆರ್ ವೀನ್ ವಾದ ಮಂಡಿಸಿದ್ದು, ಟ್ರಂಪ್​ರನ್ನು ದೋಷಾರೋಪಣೆಗೆ ಒಳಪಡಿಸುವುದರಲ್ಲಿ ಯಾವುದೇ ಹುರುಳಿಲ್ಲ, ಇದು ಡೆಮಾಕ್ರಟಿಕ್​ ಪಕ್ಷ ಅವರ ಮೇಲೆ ದ್ವೇಷ ತೀರಿಸಿಕೊಳ್ಳಲು ಮಾಡುತ್ತಿರುವ ಕಾರ್ಯವಾಗಿದೆ ಎಂದು ಕಿಡಿಕಾರಿದ್ದರು. ಅದಲ್ಲದೆ, ಕ್ಯಾಪಿಟಲ್​​ ಕಟ್ಟಡದ ಮೇಲಿನ ದಾಳಿಗೂ ಮುಂಚಿತವಾಗಿಯೇ ಡೆಮೊಕ್ರಾಟ್ ಪಕ್ಷದವರು ಮಾಜಿ ಅಧ್ಯಕ್ಷ ಟ್ರಂಪ್​​ ವಿರುದ್ಧ ದ್ವೇಷದ ಅಭಿಯಾನ ನಡೆಸುತ್ತಿದ್ದರು. ಸಂದರ್ಭಕ್ಕೆ ಸರಿಯಾದಂತೆ ಜನವರಿ 6ರಂದು ಅದೊಂದು ದಾಳಿ ನಡೆದಿದ್ದು, ಡೆಮೊಕ್ರಾಟ್​ಗಳು ಅಲ್ಲಿ ನಡೆದ ಸನ್ನಿವೇಶದ ಚಿತ್ರಣವನ್ನೇ ಬದಲಿಸಿದ್ದಾರೆ ಎಂದು ಆರೋಪಿಸಿದ್ದರು.

Lawyer
ವಕೀಲ ಮೈಕೆಲ್​ ವ್ಯಾನ್ ಡೆರ್ ವೀನ್

ಟ್ರಂಪ್‌ ಅವರ ನೇರ, ದಿಟ್ಟ ಮಾತುಗಳು ಹಾಗೂ ಅತಿಯಾದ ವಾಕ್ಚಾತುರ್ಯ ಡೆಮಾಕ್ರಟಿಕರ ಹೊಟ್ಟೆ ಕಿಚ್ಚಿಗೆ ಕಾರಣವಾಗಿತ್ತು. ಮೊದಲಿನಿಂದಲೂ ಟ್ರಂಪ್​ ವಿರುದ್ದ ಕಿಡಿಕಾರುತ್ತಿದ್ದ ಅವರು, ಹೇಗಾದರೂ ಮಾಡಿ ಅಧ್ಯಕ್ಷ ಗಾದಿಯನ್ನು ಟ್ರಂಪ್​ರಿಂದ ಕಿತ್ತುಕೊಳ್ಳಬೇಕೆಂದು ಹೊಂಚು ಹಾಕಿದ್ದರು. ಅದಲ್ಲದೆ ದೋಷಾರೋಪಣೆ ಮೂಲಕ ಮುಂದಿನ ಚುನಾವಣೆಯಲ್ಲಿಯೂ ಸಹ ಟ್ರಂಪ್​ ಸ್ಪರ್ಧಿಸಬಾರದು ಎಂಬ ಹುನ್ನಾರ ಅವರದ್ದಾಗಿದೆ ಎಂದೂ ಸಹ ವಕೀಲರು ಪ್ರತಿಪಾದಿಸಿದ್ದರು.

ಟ್ರಂಪ್​ ವಕೀಲರ ವಾದ ಬಲವಾಗಿ ಅಲ್ಲಗಳೆದ ಟೆಮಾಕ್ರಟಿಕರು:

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಡೆಮಾಕ್ರಟಿಕರು, ಅಧ್ಯಕ್ಷರ ಅಧಿಕಾರ ವರ್ಗಾವಣೆ ವೇಳೆ ಕ್ಯಾಪಿಟಲ್​ನಲ್ಲಿ ನಡೆದ ಹಿಂಸಾಚಾರದ ವಿಚಾರವಾಗಿ ಟ್ರಂಪ್ ಖುಲಾಸೆಗೊಂಡರೆ ಮತ್ತೆ ಟ್ರಂಪ್ ಹಿಂಸಾಚಾರ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಜಾಮಿ ರಸ್ಕಿನ್ ಪ್ರತಿಪಾದಿಸಿದ್ದರು.

Biden
ಜೋ ಬೈಡೆನ್​

ಅಂತಿಮವಾಗಿ ಟ್ರಂಪ್​ ಬಚಾವ್​; ಬೈಡನ್​, ಪೆಲೋಸಿಗೆ ನಿರಾಸೆ

ಒಟ್ಟಾರೆ ಸೆನೆಟ್​ನಲ್ಲಿ ಮೂರು ದಿನಗಳ ಕಾಲ ವಾದ - ಪ್ರತಿವಾದಗಳು ನಡೆದ್ದಿದ್ದು, ಟ್ರಂಪ್​ರನ್ನು ವಾಗ್ದಂಡನೆಗೆ ಗುರಿಪಡಿಸಲು ಮೂರನೇ ಎರಡರಷ್ಟು ಬಹುಮತ ಬೇಕಿತ್ತು. ಅಂದರೆ 100ರಲ್ಲಿ 67 ಮತಗಳ ಅವಶ್ಯಕತೆ ಇತ್ತು. ಆದರೆ, ನಿನ್ನೆ ನಡೆದ ಸೆನೆಟ್​ ಅಧಿವೇಶನದಲ್ಲಿ(ಅಮೆರಿಕ ಸಮಯದ ಪ್ರಕಾರ ಶನಿವಾರ) ಬಹುಮತಕ್ಕೆ ಬೇಕಾದ 67 ಮತಗಳ ಪೈಕಿ 57 ಸೆನೆಟರ್​ಗಳು ಟ್ರಂಪ್​​ಗೆ ಶಿಕ್ಷೆ ನೀಡುವಂತೆ ಮತಚಲಾಯಿಸಿದ್ದರು. ದೋಷಾರೋಪಣೆಗೆ 10 ಮತಗಳು ಕಡಿಮೆ ಬಂದಿದ್ದರಿಂದ, ವಾಗ್ದಂಡನೆಯಿಂದ ಟ್ರಂಪ್​ ಖುಲಾಸೆಗೊಂಡಿದ್ದಾರೆ.

Pelosi
ಜೋ ಬೈಡೆನ್​ ಹಾಗೂ ನ್ಯಾನ್ಸಿ ಪೆಲೋಸಿ

ಈ ಮೂಲಕ ಟ್ರಂಪ್​ಗೆ ಮರು ಜೀವ ದೊರೆತಂತಾಗಿದ್ದು, ಮುಂದಿನ ಚುನಾವಣೆಗೆ ಸ್ಪರ್ಧಿಸಲು ಹಾಗೂ ಚುನಾವಣೆಯಲ್ಲಿ ಗೆದ್ದರೆ ಅಧಿಕಾರದ ಗದ್ದುಗೆ ಹಿಡಿಯಲು ಟ್ರಂಪ್​ಗೆ ಯಾವುದೇ ಅಡೆ ತಡೆಗಳು ಇಲ್ಲದಂತಾಗಿದೆ.

ಟ್ರಂಪ್​ ದೋಷಾರೋಪಣೆ ಇದೇ ಮೊದಲಲ್ಲ:

ಅಮೆರಿಕ ರಾಜಕೀಯ ಇತಿಹಾಸದಲ್ಲೇ ಟ್ರಂಪ್​ ತಮ್ಮ ಮೊದಲ ಅಧಿಕಾರ ಅವಧಿಯಲ್ಲಿಯೇ ಎರಡು ಬಾರಿ ವಾಗ್ದಂಡನೆಗೆ ಗುರಿಯಾದ ಮೊದಲ ಅಧ್ಯಕ್ಷರಾಗಿದ್ದಾರೆ. ಡಿಸೆಂಬರ್​ 2019ರಲ್ಲಿಯೂ ಸಹ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ದೋಷಾರೋಪಣೆ ಮಾಡಲು ಎಂದು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಪ್ರಕಟಿಸಿದ್ದರು. ಇದಕ್ಕೆ ಹೌಸ್​ ಆಫ್​​ ​ರೆಪ್ರೆಸೆಂಟೇಟಿವ್ಸ್​​ ಒಪ್ಪಿಗೆ ಪಡೆದು, ಈ ನಿರ್ಣಯವನ್ನ ಸೆನೆಟ್​​ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಸೆನೆಟ್​​ನಲ್ಲಿ ಟ್ರಂಪ್​ಗೆ ಬಹುಮತವಿದ್ದಿದ್ದರಿಂದ ದೋಷಾರೋಪಣೆ ಅಂಗೀಕಾರಗೊಂಡಿರಲಿಲ್ಲ.

2019 ರೀತಿಯಲ್ಲಿಯೇ 2020ರಲ್ಲೂ ಆಗಿದ್ದು, ಟ್ರಂಪ್​ರನ್ನು ಶಿಕ್ಷೆಗೊಳಪಡಿಸಲು ಬಹುಮತವಿಲ್ಲದ ಕಾರಣ ಟ್ರಂಪ್​ ತಲೆ ಮೇಲೆ ನೇತಾಡುತ್ತಿದ್ದ ವಾಗ್ದಂಡನೆ ಎಂಬ ತೂಗುಗತ್ತಿಯಿಂದ ಮುಕ್ತಿ ಸಿಕ್ಕಂತಾಗಿದೆ.

Trump
ಡೊನಾಲ್ಡ್​ ಟ್ರಂಪ್​

ಏನಿದು ದೋಷಾರೋಪಣೆ?:

ದೋಷಾರೋಪಣೆ ಎಂದರೆ ಶಾಸಕಾಂಗ ಅಥವಾ ಇತರ ಕಾನೂನುಬದ್ಧವಾಗಿ ರಚಿಸಲಾದ ನ್ಯಾಯಮಂಡಳಿ ಅಧಿಕಾರಿ ಅಥವಾ ಸಾರ್ವಜನಿಕ ಕ್ಷೇತ್ರದ ರಾಜಕೀಯ ನಾಯಕನ ವಿರುದ್ಧ ದುಷ್ಕೃತ್ಯಕ್ಕಾಗಿ ಆರೋಪಗಳನ್ನು ಮಾಡುವುದು ಎಂಬ ಅರ್ಥವನ್ನು ನೀಡುತ್ತದೆ. ದೋಷಾರೋಪಣೆಯನ್ನು ರಾಜಕೀಯ ಮತ್ತು ಕಾನೂನು ಅಂಶಗಳನ್ನು ಒಳಗೊಂಡಿರುವ ವಿಶಿಷ್ಟ ಪ್ರಕ್ರಿಯೆ ಎಂದು ಹೇಳಲಾಗುತ್ತದೆ. ಗುರುತರ ಆರೋಪಗಳು ಅಧ್ಯಕ್ಷರ ಮೇಲೆ ಬಂದಾಗ, ಅವರ ವಿರುದ್ಧ ದೋಷಾರೋಪ ಹೊರಿಸುವ ಪ್ರಕ್ರಿಯೆಯೇ ಈ ವಾಗ್ದಂಡನೆ ಅಥವಾ ಮಹಾ ಅಭಿಯೋಗ ಎನ್ನಲಾಗುತ್ತದೆ.

ಅಮೆರಿಕ ದೇಶದಲ್ಲಿ ದೋಷಾರೋಪಣೆ ಎಂಬುದು ಹೆಚ್ಚಾಗಿ ಚಾಲ್ತಿಯಲ್ಲಿದ್ದು, ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವೇಳೆ, ಯಾವುದಾದರೂ ಅಪರಾಧ ಅಥವಾ ಹಗರಣಗಳಲ್ಲಿ ಭಾಗಿಯಾಗಿದ್ದರೆ ಅಂಥವರನ್ನು ದೋಷಾರೋಪಣೆಗೆ ಒಳಪಡಿಸಲಾಗುತ್ತದೆ. ದೋಷಾರೋಪಣೆ ಸಾಬೀತಾದರೆ, ಅವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ.

ಅಧ್ಯಕ್ಷೀಯ ದೋಷಾರೋಪಣೆ ಪ್ರಕ್ರಿಯೆ ಹೇಗೆ:

ದೋಷಾರೋಪಣೆ ಪ್ರಕ್ರಿಯೆಯು ಔಪಚಾರಿಕ ಪ್ರಕ್ರಿಯೆಯಾಗಿದ್ದು, ಅಮೆರಿಕದ ಪ್ರಸ್ತುತ ಅಧ್ಯಕ್ಷರು ತಪ್ಪಿನ ಆರೋಪ ಹೊರಿಸುತ್ತಾರೆ. ದೋಷಾರೋಪಣೆ ಎಂಬುದು ಅಧ್ಯಕ್ಷರ ವಿರುದ್ಧ ರಚಿಸಲಾದ ಆರೋಪಗಳ ಪಟ್ಟಿ. ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಅಮೆರಿಕದ ಎಲ್ಲಾ ಅಧಿಕಾರಿಗಳು ಸಹ ದೋಷಾರೋಪಣೆಯನ್ನು ಎದುರಿಸಬಹುದು.

ಈ ಪ್ರಕ್ರಿಯೆಯು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​​ನಲ್ಲಿ( ಅಮೆರಿಕ ಸಂಸತ್ತಿನ ಕೆಳಮನೆ) ಪ್ರಾರಂಭವಾಗುತ್ತದೆ, ಅಲ್ಲಿ ಯಾವುದೇ ಸದಸ್ಯರೂ ಸಹ ದೋಷಾರೋಪಣೆ ಪ್ರಕ್ರಿಯೆಯನ್ನು ಮುಂದುವರಿಸಲು ಅಥವಾ ಮತ ಚಲಾಯಿಸಲು ಒತ್ತಾಯಿಸಬಹುದು. ಆದರೆ, ಆರೋಪದ ಬಗ್ಗೆ ವಿಚಾರಣೆ ನಡೆಸಿ ಮುಂದುವರಿಯಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಸದನದ ಸ್ಪೀಕರ್‌ಗೆ ಬಿಟ್ಟಿರುವ ವಿಚಾರವಾಗಿರುತ್ತದೆ.

ದೋಷಾರೋಪಣೆ ಮಾಡಲಾದ ವ್ಯಕ್ತಿಯ ದೋಷಾರೋಪ ಪಟ್ಟಿಯನ್ನ ಹೌಸ್​ ಆಫ್​​ ​ರೆಪ್ರೆಸೆಂಟೇಟಿವ್ಸ್​​ನಲ್ಲಿ​​ ಒಪ್ಪಿಗೆ ಸಿಕ್ಕರೆ, ಈ ನಿರ್ಣಯವನ್ನ ಸೆನೆಟ್​​ ಅಂಗೀಕಾರಕ್ಕೆ ಕಳುಹಿಸಲಾಗುತ್ತದೆ. ಸೆನೆಟ್​ನಲ್ಲೂ ದೋಷಾರೋಪ ಪಟ್ಟಿಗೆ ಅನುಮೋದನೆ ಸಿಕ್ಕರೆ, ಅಲ್ಲಿಯ ಸದಸ್ಯರು ಮತ ಹಾಕಿದರೆ, ದೋಷಾರೋಪ ಸಾಬೀತಾದಂತಾಗುತ್ತದೆ. ಆಗ ಅಧ್ಯಕ್ಷ ಪದವಿಯಲ್ಲಿದ್ದವರು ಪದತ್ಯಾಗ ಮಾಡಬೇಕಾಗುತ್ತದೆ. ಹೀಗೆ ಆಗಬೇಕಾದರೆ, ಹೌಸ್​ ಆಫ್​ ರೆಪ್ರೆಸೆಂಟೇಟಿವ್ಸ್​ನಲ್ಲಿ ಸರಳ ಬಹುಮತ ಹಾಗೂ ಸೆನೆಟ್​ನಲ್ಲಿ 2ನೇ 3ರಷ್ಟು ಬಹುಮತದೊಂದಿಗೆ ದೋಷಾರೋಪ ಅಂಗೀಕಾರವಾಗಬೇಕಾಗುತ್ತದೆ. ಆಗ ಮಾತ್ರವೇ ಅಧ್ಯಕ್ಷರನ್ನ ಪದಚ್ಯುತಗೊಳಿಸಬಹುದು. ಇಲ್ಲದಿದ್ದರೆ ಅವರು ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಇನ್ನು ಅಧಿಕಾರದಿಂದ ಕೆಳಗಿಳಿದ ಮೇಲೆ ಹಿಂದಿನ ಅಧ್ಯಕ್ಷರ ವಿರುದ್ಧ ದೋಷಾರೋಪ ಹೊರಿಸಿದ್ದರೆ, ಆಗಲೂ 2ನೇ ಮೂರರಷ್ಟು ಬಹುಮತ ಪಡೆದು ಅಂಗೀಕಾರವಾಗಬೇಕಾಗುತ್ತದೆ.

ಈವರೆಗೆ ದೋಷಾರೋಪಣೆಗೆ ಒಳಗಾದ ಅಧ್ಯಕ್ಷರುಗಳು ಯಾರು?

ಸುಮಾರು 232 ವರ್ಷಗಳ ಅಮೆರಿಕ ರಾಜಕೀಯ ಇತಿಹಾಸದಲ್ಲಿ ಟ್ರಂಪ್​ರನ್ನು ಒಳಗೊಂಡಂತೆ 4 ಅಧ್ಯಕ್ಷರು ದೋಷಾರೋಪಣೆಗೆ ಒಳಗಾಗಿದ್ದಾರೆ. 1868ರಲ್ಲಿ ಆ್ಯಂಡ್ರ್ಯೂ ಜಾನ್ಸನ್‌, 1973ರಲ್ಲಿ ರಿಚರ್ಡ್ ನಿಕ್ಸನ್ ಹಾಗೂ 1998ರಲ್ಲಿ ಬಿಲ್‌ ಕ್ಲಿಂಟನ್‌ ಅವರು ವಾಗ್ದಂಡನೆಗೆ ಗುರಿಯಾಗಿದ್ದರು.

ಈ ಹಿಂದೆ ಆ್ಯಂಡ್ರ್ಯೂ ಜಾನ್ಸನ್ ವಿರುದ್ಧ ವಾಗ್ದಂಡನೆ ನಡೆದಿತ್ತು. ಆದರೆ, ಸೆನೆಟ್ ವಿಚಾರಣೆ ವೇಳೆ ಒಂದು ಮತದ ಅಂತರದಿಂದ ಗೆದ್ದಿದ್ದರು. ಇದಾದ ಬಳಿಕ ಜಾನ್ಸನ್ ಮತ್ತೊಂದು ಅವಧಿಗೆ ಆಯ್ಕೆಯಾಗಲಿಲ್ಲ. ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ತಮ್ಮ ಎರಡನೇ ಅಧ್ಯಕ್ಷ ಅವಧಿಯಲ್ಲಿ ವಾಗ್ದಂಡನೆ ಎದುರಿಸಿದ್ದರು.

ಈ ಮೂವರ ಪೈಕಿ ಆ್ಯಂಡ್ರ್ಯೂ ಜಾನ್ಸನ್‌ ಬಿಲ್‌ ಕ್ಲಿಂಟನ್‌ ಶಿಕ್ಷೆಗೊಳಗಾಗಲಿಲ್ಲ. ಆದರೆ, ರಿಚರ್ಡ್ ನಿಕ್ಸನ್​​ರನ್ನು ವಾಟರ್ ಗೇಟ್ ಹಗರಣದ ಹಿನ್ನೆಲೆ ದೋಷಾರೋಪಣೆಗೆ ಒಳಪಡಿಸಲಾಗಿತ್ತು ಆದರೆ, ಮಹಾಭಿಯೋಗಕ್ಕೂ ಮುನ್ನವೇ ಅವರು ರಾಜೀನಾಮೆ ನೀಡಿ ತೆರಳಿದ್ದರು.

ಇನ್ನು ಡೊನಾಲ್ಡ್​ ಟ್ರಂಪ್​​ ಈ ವಾಗ್ದಂಡನೆ ಎದುರಿಸಿರುವ ನಾಲ್ಕನೇ ಅಧ್ಯಕ್ಷರಾಗಿದ್ದಾರೆ. ಅದಲ್ಲದೇ, ಟ್ರಂಪ್​ ತಮ್ಮ ಮೊದಲ ಅಧಿಕಾರ ಅವಧಿಯಲ್ಲಿಯೇ ಎರಡು ಬಾರಿ ವಾಗ್ದಂಡನೆಗೆ ಗುರಿಯಾದ ಮೊದಲ ಅಧ್ಯಕ್ಷರಾಗಿದ್ದಾರೆ.

Trump
ಡೊನಾಲ್ಡ್​ ಟ್ರಂಪ್​

ಅಧಿಕಾರದಿಂದ ಕೆಳಗಿಳಿದರೂ ಸಹ ಟ್ರಂಪ್ ವಿರುದ್ಧ ಮಹಾಭಿಯೋಗವೇಕೆ?:

ಭಾರತದಂತಹ ದೇಶಗಳಲ್ಲಿ ಆರೋಪ ಎದುರಿಸುತ್ತಿರುವ ರಾಷ್ಟ್ರಪತಿ ಮತ್ತು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳನ್ನು ಅಧಿಕಾರದಿಂದ ಕೆಳಗಿಳಿಸಲು ಮಹಾಭಿಯೋಗ ಮಾಡುವ ಸಂವಿಧಾನಾತ್ಮಕ ಹಕ್ಕುಗಳಿವೆ. ಆದರೆ ಭಾರತದಲ್ಲಿ ಅಧಿಕಾರದಲ್ಲಿ ಇರದೇ ಇರುವಾಗ ಇಂತಹ ಪ್ರಕ್ರಿಯೆಗಳಿಲ್ಲ. ಆದರೆ ಅಮೆರಿಕದಲ್ಲಿ ಇಂತಹ ಅವಕಾಶ ಇದೆ. ಏಕೆಂದರೆ ಮುಂದಿನ ದಿನಗಳಲ್ಲಿ ಮತ್ತೆ ಅಧ್ಯಕ್ಷೀಯ ಪದವಿಗೆ ನಿಲ್ಲದಂತೆ ನಿರ್ಬಂಧಿಸುವ ಸಲುವಾಗಿ ಲೇಟ್​ ಇಂಪೀಚ್​ಮೆಂಟ್​ ಮಂಡಿಸಲಾಗುತ್ತದೆ. ಅದರಂತೆಯೇ ಡೊನಾಲ್ಡ್​​ ಟ್ರಂಪ್​ ಅಧಿಕಾರವಧಿ ಮುಗಿದಿದ್ದರೂ ಸಹ ದೋಷಾರೋಪಣೆಗೆ ಒಳಪಡಿಸಲಾಗಿದೆ, ಇದನ್ನು ತಡ ಮಹಾಭಿಯೋಗ'(Late impeachment) ಎಂದು ಕರೆಯಲಾಗುತ್ತದೆ. ಈ ವೇಳೆ ಆರೋಪ ಸಾಬೀತಾಗಿ ಶಿಕ್ಷೆಗೆ ಒಳಗಾದರೆ, ಮತ್ತೊಮ್ಮೆ ಟ್ರಂಪ್​ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗುತ್ತಾರೆ. (ಆದರೆ ಟ್ರಂಪ್​ ವಿರುದ್ಧದ ಮಹಾಭೀಯೋಗ ಗೊತ್ತುವಳಿ ಸೆನೆಟ್​ನಲ್ಲಿ ಅಂಗೀಕಾರವಾಗಿಲ್ಲ) ಹೀಗಾಗಿ ಅವರು ವಾಗ್ದಂಡನೆಯಿಂದ ಪಾರಾಗಿದ್ದಾರೆ.

Last Updated : Feb 15, 2021, 5:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.