ನ್ಯೂಯಾರ್ಕ್: ಕ್ಯಾಪಿಟಲ್ ಹಿಲ್ ಹಿಂಸಾಚಾರದ ದೋಷಾರೋಪಣೆಯ ವಿಚಾರಣೆಯ ಒಂದು ವಾರದ ಬಳಿಕ ಏಳು ರಿಪಬ್ಲಿಕನ್ ಸೇರಿದಂತೆ 57 ಸೆನೆಟರ್‌ಗಳು ಮಾತ್ರ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶಿಕ್ಷಿಸುವಂತೆ ಮತ ಚಲಾಯಿಸಿದ್ದಾರೆ.
ಜನವರಿ 6ರಂದು ಟ್ರಂಪ್, ಶ್ವೇತ ಭವನದ ಬಳಿ ಸಮಾವೇಶ ಕೈಗೊಂಡಿದ್ದರು. ಆ ಸಮಾವೇಶದಲ್ಲಿ ಅವರು ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆಸುವಂತೆ ಕರೆ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸೆನೆಟರ್ ಎದುರು ವಾಗ್ದಂಡನೆಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಜಪಾನ್ನ ಫುಕಾಶಿಮಾ ಕರಾವಳಿಯಲ್ಲಿ ಪ್ರಬಲ ಭೂಕಂಪ!
ಅದರಂತೆ ಜ.6ರಂದು ಅಂದಿನ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಬೆಂಬಲಿಗರು ಕ್ಯಾಪಿಟಲ್ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ನಡೆಯುತ್ತಿದ್ದ ಎಲೆಕ್ಟೋರಲ್ ಕಾಲೇಜ್ ಮತ ಎಣಿಕೆಗೆ ಅಡ್ಡಿಯುಂಟು ಮಾಡುವ ಜತೆಗೆ, ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಐವರ ಸಾವಿಗೂ ಕಾರಣರಾಗಿದ್ದರು.
ಟ್ರಂಪ್ ವಿರುದ್ಧ ವಾಗ್ದಂಡನೆಗೆ ಆತನನ್ನು ಶಿಕ್ಷಿಸಲು ಮೂರನೇ ಎರಡರಷ್ಟು ಬಹುಮತಕ್ಕೆ ಬೇಕಾದ 67 ಮತಗಳ ಪೈಕಿ 57 ಸೆನೆಟರ್‌ಗಳು ಶಿಕ್ಷೆಯ ಪರ ಮತಚಲಾಯಿಸಿದ್ದಾರೆ. ದೋಷಾರೋಪಣೆಗೆ 10 ಮತಗಳು ಕಡಿಮೆ ಬಂದಿದ್ದು, ವಾಗ್ದಂಡನೆಯಿಂದ ಟ್ರಂಪ್ ಖುಲಾಸೆಗೊಂಡಿದ್ದಾರೆ.