ETV Bharat / international

ಉಕ್ರೇನ್-ರಷ್ಯಾ ಬಿಕ್ಕಟ್ಟು ಶಮನಕ್ಕೆ ಮಾತುಕತೆಯೊಂದೇ ಮಾರ್ಗ: ವಿಶ್ವಸಂಸ್ಥೆ - ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮ್ಟ್ರೋ ಕುಲೆಬಾ

ರಷ್ಯಾ ಮತ್ತು ಉಕ್ರೇನ್‌ನ ನಡುವಿನ ಸಂಘರ್ಷ ನಿವಾರಣೆಗೆ ಮಾತುಕತೆಯೇ ಅತ್ಯುತ್ತಮ ಮಾರ್ಗ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

Russia-Ukraine crisis:  un chief believes in  Diplomacy
ಉಕ್ರೇನ್-ರಷ್ಯಾ ಬಿಕ್ಕಟ್ಟು ನಿವಾರಣೆಗೆ ಮಾತುಕತೆಯೊಂದೇ ಮಾರ್ಗ: ವಿಶ್ವಸಂಸ್ಥೆ
author img

By

Published : Feb 15, 2022, 11:40 AM IST

ವಿಶ್ವಸಂಸ್ಥೆ: ಉಕ್ರೇನ್​ನಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಇದೇ ವಿಚಾರವಾಗಿ, ಅಮೆರಿಕ ಮತ್ತು ರಷ್ಯಾದ ನಡುವೆ ಭಿನ್ನಾಭಿಪ್ರಾಯಗಳು ಇನ್ನೂ ಮುಗಿದಿಲ್ಲ. ಈ ಬೆನ್ನಲ್ಲೇ ರಷ್ಯಾ ಮತ್ತು ಉಕ್ರೇನ್‌ನ ಅಧಿಕಾರಿಗಳೊಂದಿಗೆ ಮಾತನಾಡಿದ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ರಷ್ಯಾದ ಉನ್ನತ ರಾಜತಾಂತ್ರಿಕ ಅಧಿಕಾರಿ ಸೆರ್ಗೆಯ್ ಲಾವ್ರೊವ್ ಮತ್ತು ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮ್ಟ್ರೋ ಕುಲೆಬಾ ಅವರೊಂದಿಗೆ ಮಾತನಾಡಿರುವ ಆಂಟೋನಿಯೊ ಗುಟೆರೆಸ್, ಸಂಘರ್ಷ ನಿವಾರಣೆಗೆ ಮಾತುಕತೆಯೇ ಅತ್ಯುತ್ತಮ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.

ಇದೇ ವೇಳೆ ವಿಶ್ವಸಂಸ್ಥೆಯ ಕಾಳಜಿ ಬಗ್ಗೆ ಗುಟೆರೆಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಉದ್ವಿಗ್ನತೆಗಳನ್ನು ಶಮನಗೊಳಿಸಲು ನಡೆಯುತ್ತಿರುವ ರಾಜತಾಂತ್ರಿಕ ಚರ್ಚೆಗಳನ್ನು ಅವರು ಸ್ವಾಗತಿಸಿದ್ದಾರೆ. ಮಾತುಕತೆಗಿಂತ ಅತ್ಯುತ್ತಮ ಮಾರ್ಗವಿಲ್ಲ ಎಂದು ಡುಜಾರಿಕ್ ಹೇಳಿದ್ದಾರೆ.

ಇದನ್ನೂ ಓದಿ: ಫೆ.16ರಂದು ರಷ್ಯಾ ದಾಳಿ ಮಾಡಬಹುದು: ಸಂಚಲನ ಸೃಷ್ಟಿಸಿದ ಉಕ್ರೇನ್ ಅಧ್ಯಕ್ಷರ ಫೇಸ್‌ಬುಕ್‌ ಪೋಸ್ಟ್‌

ಜನವರಿ 21ರಂದು ಸುದ್ದಿಗೋಷ್ಠಿ ನಡೆಸಿ, ರಷ್ಯಾ ಉಕ್ರೇನ್​ ಅನ್ನು ಆಕ್ರಮಿಸುವುದಿಲ್ಲ ಎಂದು ಗುಟೆರಸ್ ಹೇಳಿದ್ದರು. ಅವರ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆ ಆಗಿದೆ ಎಂದು ನಾನು ನಂಬುವುದಿಲ್ಲ ಎಂದು ಡುಜಾರಿಕ್ ಹೇಳಿದ್ದಾರೆ.

ಉಕ್ರೇನ್‌ನ ಪೂರ್ವ ಡೊನ್‌ಬಾಸ್ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮಿನ್ಸ್ಕ್ ಒಪ್ಪಂದಗಳ ಕುರಿತು ವಾರ್ಷಿಕ ಸಭೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಗುರುವಾರ ನಡೆಸಲಿದ್ದು, ಈ ಸಭೆ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.