ವಾಷಿಂಗ್ಟನ್(ಅಮೆರಿಕ) : ಯುದ್ಧ ವಾತಾವರಣದ ಉಕ್ರೇನ್ ಮತ್ತು ರಷ್ಯಾ ನಡುವೆ ಏರ್ಪಟ್ಟಿದೆ. ಈ ಬೆನ್ನಲ್ಲೇ ಉಕ್ರೇನ್ಗೆ ಸೇರಿದ ಬ್ಯಾಂಕ್‌ಗಳ ಮೇಲೆ ಸೈಬರ್ ದಾಳಿ ನಡೆಸಲಾಗಿತ್ತು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕದಲ್ಲಿರುವ ರಷ್ಯಾ ರಾಯಭಾರ ಕಚೇರಿ ಸ್ಪಷ್ಟನೆ ನೀಡಿದೆ.
ಇತ್ತೀಚೆಗೆ ಉಕ್ರೇನಿಯನ್ ಬ್ಯಾಂಕ್‌ಗಳ ಮೇಲೆ ನಡೆದ ಸೈಬರ್ ದಾಳಿಯಲ್ಲಿ ರಷ್ಯಾ ಭಾಗಿಯಾಗಿಲ್ಲ ಎಂದು ರಷ್ಯಾದ ರಾಯಭಾರ ಕಚೇರಿ ಹೇಳಿಕೆ ನೀಡಿದ್ದು, ಅಮೆರಿಕ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಈ ಮೂಲಕ ಅಮೆರಿಕದ ಆರೋಪಕ್ಕೆ ಹಿನ್ನಡೆಯಾಗಿದೆ.
ಶುಕ್ರವಾರವಷ್ಟೆ, ಅಮೆರಿಕದ ಸೈಬರ್ ಆ್ಯಂಡ್ ಎಮರ್ಜ್ಡ್ ಟೆಕ್ನಾಲಜಿಯ ರಾಷ್ಟ್ರೀಯ ಭದ್ರತಾ ಸಲಹೆಗಾರರಲ್ಲಿ ಒಬ್ಬರಾದ ಅನ್ನೆ ನ್ಯೂಬರ್ಗರ್ ಅವರು ರಷ್ಯಾದ ಸೈಬರ್ ತಜ್ಞರು, ಉಕ್ರೇನ್ ದೇಶದ ರಕ್ಷಣಾ ಸಚಿವಾಲಯ ಸೇರಿದಂತೆ ಉಕ್ರೇನಿಯನ್ ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಬೈಡನ್ ಸರ್ಕಾರ ನಂಬಿದೆ ಎಂದು ಹೇಳಿಕೆ ನೀಡಿದ್ದರು.
-
We have taken note of purely anti-Russian statements of Deputy National Security Advisor Anne Neuberger, who accused the Russian special services of cyberattacks on Ukrainian defense agencies and banks. pic.twitter.com/AVuyQ8swWl
— Russian Embassy in USA 🇷🇺 (@RusEmbUSA) February 19, 2022 " class="align-text-top noRightClick twitterSection" data="
">We have taken note of purely anti-Russian statements of Deputy National Security Advisor Anne Neuberger, who accused the Russian special services of cyberattacks on Ukrainian defense agencies and banks. pic.twitter.com/AVuyQ8swWl
— Russian Embassy in USA 🇷🇺 (@RusEmbUSA) February 19, 2022We have taken note of purely anti-Russian statements of Deputy National Security Advisor Anne Neuberger, who accused the Russian special services of cyberattacks on Ukrainian defense agencies and banks. pic.twitter.com/AVuyQ8swWl
— Russian Embassy in USA 🇷🇺 (@RusEmbUSA) February 19, 2022
ಇದನ್ನೂ ಓದಿ: ಉಕ್ರೇನ್ ಮೇಲೆ ಆಕ್ರಮಣ ನಡೆಸಲು ರಷ್ಯಾ ನಿರ್ಧಾರ: ಜೋ ಬೈಡನ್
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಷ್ಯಾ ರಾಯಭಾರ ಕಚೇರಿ ಅಮೆರಿಕದ ಆಧಾರರಹಿತ ಹೇಳಿಕೆಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ. ಅಮೆರಿಕ ಉಲ್ಲೇಖಿಸಿ ಘಟನೆಗಳಲ್ಲಿ ರಷ್ಯಾ ಭಾಗಿಯಾಗಿಲ್ಲ ಮತ್ತು ಸೈಬರ್‌ಸ್ಪೇಸ್‌ನಲ್ಲಿ ಯಾವುದೇ ದುರುದ್ದೇಶಪೂರಿತ ಕಾರ್ಯಾಚರಣೆಯನ್ನು ನಡೆಸಿಲ್ಲ ಎಂದು ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದು, ನ್ಯೂಬರ್ಗರ್ ಅವರ ಹೇಳಿಕೆಯನ್ನು ರಷ್ಯಾ ವಿರೋಧಿ ಎಂದು ಕರೆದಿದೆ.