ETV Bharat / international

50 ಲಕ್ಷ ಮಂದಿಯ ಇಮೇಲ್ ವಿಳಾಸ ಸೋರಿಕೆ: ರಾಬಿನ್​ಹುಡ್ - Robinhood says on email addresses

ನವೆಂಬರ್​ 3ರಂದು ಸುಮಾರು 50 ಲಕ್ಷ ಮಂದಿಗೆ ಸಂಬಂಧಿಸಿದ ಇಮೇಲ್ ವಿಳಾಸಗಳ ಮಾಹಿತಿ ಮೂರನೇ ಸಂಸ್ಥೆ ಅಥವಾ ವ್ಯಕ್ತಿಯಿಂದ ಕದಿಯಲ್ಪಟ್ಟಿತ್ತು ಎಂದು ಅಮೆರಿಕದ ಹಣಕಾಸು ಸೇವಾ ಸಂಸ್ಥೆ ರಾಬಿನ್​​ಹುಡ್ ಹೇಳಿದೆ.

Robinhood says email addresses of 5 mln customers exposed in security breach
50 ಲಕ್ಷ ಮಂದಿಯ ಇಮೇಲ್ ವಿಳಾಸ ಸೋರಿಕೆ: ರಾಬಿನ್​ಹುಡ್
author img

By

Published : Nov 9, 2021, 4:11 PM IST

ವಾಷಿಂಗ್ಟನ್(ಅಮೆರಿಕ): ಸುಮಾರು 50 ಲಕ್ಷ ಮಂದಿಗೆ ಸಂಬಂಧಿಸಿದ ಇಮೇಲ್ ವಿಳಾಸಗಳ ಮಾಹಿತಿ ಮೂರನೇ ಸಂಸ್ಥೆ ಅಥವಾ ವ್ಯಕ್ತಿಯಿಂದ ( Third Party) ಕದಿಯಲ್ಪಟ್ಟಿದೆ ಎಂದು ಅಮೆರಿಕದ ಹಣಕಾಸು ಸೇವಾ ಸಂಸ್ಥೆ ರಾಬಿನ್​​ಹುಡ್ ಮಾರ್ಕೆಟ್ಸ್​​​​ ಮಾಹಿತಿ ಹೊರಹಾಕಿದೆ.

ನವೆಂಬರ್​ 3ರಂದು ವಿವಿಧ ಗುಂಪುಗಳ ಸುಮಾರು 20 ಲಕ್ಷ ಮಂದಿಯ ಪೂರ್ಣ ಹೆಸರುಗಳನ್ನು ಕದಿಯಲಾಗಿದೆ. ಇದರಲ್ಲಿ ಸುಮಾರು 310 ಮಂದಿ ಇಮೇಲ್​ನಲ್ಲಿ ಹೆಸರು, ಜನ್ಮ ದಿನಾಂಕ, ಝಿಪ್ ಕೋಡ್​​ ಮುಂತಾದ ವೈಯಕ್ತಿಕ ಮಾಹಿತಿ ಹೊಂದಿರುವುದು ಗೊತ್ತಾಗಿದೆ ಎಂದು ತಿಳಿಸಿದೆ.

ಹೀಗೆ ಕದ್ದಿರುವ ಮಾಹಿತಿಯಲ್ಲಿ ಬ್ಯಾಂಕ್ ಖಾತೆ ಸಂಖ್ಯೆ, ಡೆಬಿಟ್ ಕಾರ್ಡ್ ಸಂಖ್ಯೆಗಳು ಇಲ್ಲವೆಂದು ನಂಬಲಾಗಿದೆ. ಕದಿಯಲ್ಪಟ್ಟ ಇಮೇಲ್ ಖಾತೆಯ ವಿಳಾಸ ಹೊಂದಿರುವ ಯಾವುದೇ ವ್ಯಕ್ತಿಗೆ ಹಣಕಾಸಿನ ನಷ್ಟವಾಗಿಲ್ಲ ಎಂದು ರಾಬಿನ್​​ಹುಡ್​​ ಉಲ್ಲೇಖಿಸಿದೆ.

ಮೂರನೇ ವ್ಯಕ್ತಿ ಅಥವಾ ಸಂಸ್ಥೆಯು ಅನಧಿಕೃತವಾಗಿದ್ದು, ಗ್ರಾಹಕ ಸೇವಾ ಸಂಸ್ಥೆಯ ರೂಪದಲ್ಲಿ ಕರೆ ಮಾಡುವುದರ ಮೂಲಕ ಇಮೇಲ್​ಗಳ ಮಾಹಿತಿಯನ್ನು ಕದ್ದಿದ್ದಾರೆ. ಇದರ ಜೊತೆಗೆ ಹಣಕ್ಕಾಗಿ ಬೇಡಿಕೆಯನ್ನೂ ಇಡಲಾಗಿದೆ ಎಂದು ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಉಗ್ರಗಾಮಿ ಸಂಘಟನೆ ಟಿಎಲ್​ಪಿ ವಿರುದ್ಧದ ನಿಷೇಧ ಹಿಂಪಡೆದ ಪಾಕಿಸ್ತಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.