ETV Bharat / international

ಕ್ಯಾಥೋಲಿಕ್ ಚರ್ಚ್​ನಲ್ಲಿ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಪತ್ತೆ :ವರದಿ

216,000 ಮಂದಿಯ ಮೇಲೆ 3 ಸಾವಿರ ಮಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಂದರೆ ಒಬ್ಬ ವ್ಯಕ್ತಿ ಸುಮಾರು 70 ಮಂದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಫ್ರೆಂಚ್ ಸಮಾಜಕ್ಕೆ, ಕ್ಯಾಥೊಲಿಕ್ ಚರ್ಚ್‌ ಕ್ರೂರವಾಗಿದೆ ಎಂದು ಒವಿಲಿಯಾರ್ ಸ್ಯಾವಿಗ್ನಾಕ್ ಆರೋಪಿಸಿದ್ದಾರೆ.

Major report to expose sex abuse in France's Catholic Church
ಫ್ರಾನ್ಸ್​ನ ಕ್ಯಾಥೋಲಿಕ್ ಚರ್ಚ್​ನಲ್ಲಿ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಪತ್ತೆ :ವರದಿ
author img

By

Published : Oct 5, 2021, 2:45 PM IST

ಪ್ಯಾರಿಸ್, ಫ್ರಾನ್ಸ್​​: ಏಳು ದಶಕಗಳ ಅವಧಿಯಲ್ಲಿ ಸುಮಾರು 10 ಸಾವಿರ ಮಂದಿ ಅಥವಾ ಅದಕ್ಕಿಂತ ಹೆಚ್ಚು ಮಂದಿ ಫ್ರಾನ್ಸ್​ನ ಕ್ಯಾಥೋಲಿಕ್ ಚರ್ಚ್​ನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಸಂತ್ರಸ್ತರಲ್ಲಿ ಬಹುಪಾಲು ಮಂದಿ ಮಕ್ಕಳಿದ್ದಾರೆ ಎಂದು ವರದಿಯೊಂದು ಹೇಳಿದೆ.

ಸ್ವತಂತ್ರ ಆಯೋಗವನ್ನು ಈ ಕುರಿತು ಸುಮಾರು ಎರಡೂವರೆ ಸಾವಿರ ಪುಟಗಳ ವರದಿಯನ್ನು ಸಿದ್ದಪಡಿಸಿದ್ದು, ಈ ವರದಿಯ ಪ್ರಕಾರ ಸುಮಾರು 3 ಸಾವಿರ ಮಂದಿಯಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಅದರಲ್ಲಿ ಬಹುತೇಕ ಮಂದಿ ಚರ್ಚ್​ನ ಪಾದ್ರಿಗಳಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಂತ್ರಸ್ತರ ಅಸೋಸಿಯೇಷನ್ ಆದ ಪಾರ್ಲೆರ್​ ಎಟ್ ರಿವೈವ್ರೆ (Parler et Revivre) ಮುಖ್ಯಸ್ಥ ಒವಿಲಿಯಾರ್ ಸ್ಯಾವಿಗ್ನಾಕ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಂತ್ರಸ್ತರ ಸಂಖ್ಯೆ 2,16,000 ಸಾವಿರ ತಲುಪಿದೆ ಎಂದು ಅಸೋಸಿಯೇಟೆಡ್​ ಪ್ರೆಸ್​ಗೆ ಮಾಹಿತಿ ನೀಡಿದ್ದಾರೆ.

216,000 ಮಂದಿಯ ಮೇಲೆ 3 ಸಾವಿರ ಮಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಂದರೆ, ಒಬ್ಬ ವ್ಯಕ್ತಿ ಸುಮಾರು 70 ಮಂದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಫ್ರೆಂಚ್ ಸಮಾಜಕ್ಕೆ, ಕ್ಯಾಥೊಲಿಕ್ ಚರ್ಚ್‌ ಕ್ರೂರವಾಗಿದೆ ಎಂದು ಒವಿಲಿಯಾರ್ ಸ್ಯಾವಿಗ್ನಾಕ್ ಹೇಳಿದ್ದಾರೆ.

ಸ್ವತಂತ್ರ ಆಯೋಗವು ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದೆ. ಸಂತ್ರಸ್ತರು ಮತ್ತು ಸಾಕ್ಷಿಗಳನ್ನು ವಿಚಾರಣೆ ಮಾಡಿದೆ. 1950ರಿಂದ ಈ ಆಯೋಗವು ಚರ್ಚ್, ನ್ಯಾಯಾಲಯ, ಪೊಲೀಸ್ ಮತ್ತು ಪತ್ರಿಕಾ ದಾಖಲೆಗಳನ್ನು ಅಧ್ಯಯನ ಮಾಡಿದೆ. ತನಿಖೆಯ ಪ್ರಾರಂಭದಲ್ಲಿ ಸುಮಾರು 6,500 ಮಂದಿ ತಾವು ಸಂತ್ರಸ್ಥರೆಂದು ಹೇಳಿಕೊಂಡಿದ್ದರು ಎಂದು ಒವಿಲಿಯಾರ್ ಸ್ಯಾವಿಗ್ನಾಕ್ ಹೇಳಿದ್ದಾರೆ.

ಈ ಕುರಿತು ಇನ್ನೂ ತನಿಖೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಫೋಟಕ ವಿಚಾರಗಳು ಹೊರಬರುವ ಸಾಧ್ಯತೆಯಿದೆ.

ಇದನ್ನೂ ಓದಿ: ಮಗಳ ತಂಟೆಗೆ ಬರಬೇಡ ಎಂದಿದ್ದಕ್ಕೆ ತಂದೆಯ ಕೊಲೆಗೆ ಸ್ಕೆಚ್‌; ರೌಡಿ ಸೇರಿ 10 ಮಂದಿ ಅರೆಸ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.