ETV Bharat / international

ಭಾರತ ಜೊತೆ ಅಮೆರಿಕ ಸಂಬಂಧ ತನ್ನದೇ ಅರ್ಹತೆ ಮೇಲೆ ನಿಂತಿದೆ; ರಷ್ಯಾ ಜತೆಗಿನ ಉದ್ವಿಗ್ನತೆ ಪರಿಣಾಮ ಬೀರಲ್ಲ ಎಂದ ಯುಎಸ್‌

ಭಾರತದೊಂದಿಗೆ ಅಮೆರಿಕ ಸಂಬಂಧವು ತನ್ನದೇ ಆದ ಅರ್ಹತೆಯ ಮೇಲೆ ನಿಂತಿದೆ. ರಷ್ಯಾದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಅಮೆರಿಕ ಹೇಳಿದೆ.

Relationship with India stands on its own merit, not impacted by tensions with Russia: US
ಭಾರತದೊಂದಿಗಿನ ಸಂಬಂಧವು ತನ್ನದೇ ಆದ ಅರ್ಹತೆಯ ಮೇಲೆ ನಿಂತಿದೆ, ರಷ್ಯಾದೊಂದಿಗಿನ ಉದ್ವಿಗ್ನತೆಯಿಂದ ಪ್ರಭಾವಿತವಾಗಿಲ್ಲ: ಯುಎಸ್
author img

By

Published : Feb 4, 2022, 7:00 AM IST

ವಾಷಿಂಗ್ಟನ್: ರಷ್ಯಾ-ಉಕ್ರೇನ್‌ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯುದ್ಧದ ಭೀತಿ ಎದುರಾಗಿದೆ. ಉಕ್ರೇನ್‌ ಪರ ನಿಂತಿರುವ ಅಮೆರಿಕ, ಭಾರತದೊಂದಿಗೆ ಇರುವ ತಮ್ಮ ಸಂಬಂಧಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೇಳಿದೆ.

ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ರಷ್ಯಾ - ಅಮೆರಿಕ ನಡುವೆ ಇದೀಗ ಉದ್ವಿಗ್ನತೆ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಭಾರತ - ಯುಎಸ್ ಬಾಂಧವ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್, ಭಾರತದೊಂದಿಗೆ ನಮ್ಮದೇ ಆದ ಅರ್ಹತೆಯ ಸಂಬಂಧವನ್ನು ಹೊಂದಿದ್ದೇವೆ ಎಂದಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್‌ ಬಿಕ್ಕಟ್ಟಿನ ಬಗ್ಗೆ ಭಾರತದ ಅಭಿಪ್ರಾಯದ ಕುರಿತು ಪ್ರತಿಕ್ರಿಯಿಸಲು ನೆಡ್ ಪ್ರೈಸ್ ನಿರಾಕರಿಸಿದ್ದು, ಈ ನಿರ್ದಿಷ್ಟ ವಿಷಯದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಮ್ಮ ಪಾಲುದಾರ ರಾಷ್ಟ್ರ ಭಾರತ ತನ್ನ ನಿಲುವು ತಿಳಿಸುವ ನಿರ್ಧಾರವನ್ನು ಆ ದೇಶಕ್ಕೆ ಬಿಡುತ್ತೇನೆ ಎಂದಿದ್ದಾರೆ.

ಉಕ್ರೇನ್‌ ವಿರುದ್ಧ ರಷ್ಯಾದ ಅಪ್ರಚೋದಿತ ಸಂಭಾವ್ಯ ಆಕ್ರಮಣದ ಬಗ್ಗೆ ನಮ್ಮ ಕಳವಳ ಕುರಿತು ಪಾಲುದಾರ ರಾಷ್ಟ್ರ ಭಾರತ ಸೇರಿದಂತೆ ಜಗತ್ತಿನ ಹತ್ತಾರು ರಾಷ್ಟ್ರಗಳ ಸಂಪರ್ಕದಲ್ಲಿ ಇದ್ದೇವೆ. ಈಗಾಗಲೇ ಅಮೆರಿಕ ಹಲವು ಹಂತಗಳಲ್ಲಿ ಮಾತುಕತೆಯಲ್ಲಿ ಇದೆ ಎಂದು ಹೇಳಿದ್ದಾರೆ.

ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವು ಆ ನೆರೆಹೊರೆಯ ದೇಶಗಳ ಭದ್ರತಾ ಪರಿಸರಕ್ಕೆ ಪರಿಣಾಮ ಬೀರುತ್ತದೆ. ಭಾರತ ಅಥವಾ ಜಗತ್ತಿನ ಯಾವುದೇ ದೇಶವಾಗಿದ್ದರೂ ಈ ಬೆಳವಣಿಗೆಗಳ ಬಗ್ಗೆ ಅಪಾರವಾದ ತಿಳಿವಳಿಕೆ ಇರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಕಳೆದ ಹಲವು ದಿನಗಳಿಂದ ರಷ್ಯಾ-ಉಕ್ರೇನ್‌ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯುದ್ಧದ ಭೀತಿ ಎದುರಾಗಿದೆ. ಎರಡೂ ದೇಶಗಳು ತಮ್ಮ ಗಡಿಯುದ್ದಕ್ಕೂ ಸೇನೆಗಳನ್ನು ನಿಯೋಜಿಸಿವೆ.

ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೈನಿಯರು ಬೀಡು ಬಟ್ಟಿರುವುದಕ್ಕೆ ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ರಷ್ಯಾ ಬೆದರಿಕೆ ಹಿನ್ನೆಲೆಯಲ್ಲಿ ಅಮೆರಿಕ ತನ್ನ 8,500 ಪಡೆಗಳನ್ನು ಉಕ್ರೇನ್‌ಗೆ ಕಳುಹಿಸಿ ಕೊಟ್ಟಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಪತ್ನಿ ವಿನಿಮಯ ದಂಧೆ.. ಟ್ವಿಟರ್ ಮೂಲಕ ಆಹ್ವಾನ.. ಪತ್ನಿಯ ವಿಡಿಯೋ ಮಾಡೋ ಪತಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.