ಯಾರ್ಕ್, ಮೈನೆ( ಅಮೆರಿಕ): ಟ್ರಾಫಿಕ್ ಪೊಲೀಸ್ ಮತ್ತು ಇಲಾಖೆಯ ಶ್ವಾನದಿಂದ ದಾಳಿಗೊಳಗಾಗಿದ್ದ ವ್ಯಕ್ತಿಯೊಬ್ಬ ಕೋರ್ಟ್ ಮೆಟ್ಟಿಲೇರಿ ಭಾರಿ ಮೊತ್ತದ ಪರಿಹಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧದ ಘಟನೆಯ ವಿಡಿಯೋ ತುಣುಕೊಂದನ್ನು ಹಾಗೂ 2019 ರಲ್ಲಿ ನಡೆದ ಘಟನೆಯ ವಿಡಿಯೋವನ್ನು ಯಾರ್ಕ್ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಏನಿದು ಘಟನೆ?
ಸೆಪ್ಟೆಂಬರ್ 2019 ರಲ್ಲಿ ಸ್ಟೀಫನ್ ಬ್ರೆನ್ನನ್ ಎಂಬ ಕಾರಿನ ಚಾಲಕ ಹೆಡ್ಲೈಟ್ ಫ್ಲ್ಯಾಷ್ ಮಾಡಿದ ಸಂಬಂಧ ಪೊಲೀಸ್ ಅಧಿಕಾರಿ ಜೊನಾಥನ್ ರೋಜರ್ಸ್ ಕಾರ್ ನಿಲ್ಲಿಸುವಂತೆ ಡ್ರೈವರ್ಗೆ ಸೂಚಿಸುತ್ತಾರೆ.
ಪೊಲೀಸ್ ಅಧಿಕಾರಿ ಜೊನಾಥನ್ ರೋಜರ್ಸ್ ಆಜ್ಞೆಯನ್ನು ಪರಿಪಾಲಿಸಿದ್ದ. ಈ ವೇಳೆ ಪೊಲೀಸ್ ಇಲಾಖೆಯ ಶ್ವಾನ ಬ್ರೆನ್ನನ್ ಮೇಲೆ ಎರಗಿದ್ದಲ್ಲದೇ ಕಚ್ಚಿ ಗಾಯಗೊಳಿಸಿತ್ತು. ಈ ದೃಶ್ಯಾವಳಿಗಳನ್ನು ಪೊಲೀಸರ ಡ್ಯಾಶ್ಕ್ಯಾಮ್ದಲ್ಲಿ ಸೆರೆಯಾಗಿದ್ದವು.
ಓದಿ: ನಾಡಿನಾದ್ಯಂತ ಸಂಕ್ರಾಂತಿ ಸಂಭ್ರಮ; ಹಬ್ಬದ ಮಹತ್ವ, ಆಚರಣೆ ಹೀಗಿದೆ...
ಈ ಘಟನೆಯ ಬಳಿಕ ಸ್ಟೀಫನ್ ಬ್ರೆನ್ನನ್ ಯಾರ್ಕ್ ಪಟ್ಟಣ ಪೊಲೀಸ್ ಅಧಿಕಾರಿಯ ವಿರುದ್ಧ ಮೊಕದ್ದಮೆ ಹೂಡಿದ್ದರು. ಪೋರ್ಟ್ಸ್‌ಮೌತ್ ಹೆರಾಲ್ಡ್ ಈ ತಿಂಗಳ ಆರಂಭದಲ್ಲಿ ಪರಿಹಾರ ವಿವರಗಳನ್ನು ವರದಿ ಮಾಡಿದೆ. ಬ್ರೆನ್ನನ್ ಅವರ ವಕೀಲರು ನಾಯಿ ಕಚ್ಚಿದರಿಂದ ನಮ್ಮ ಕಕ್ಷಿದಾರ ಹಲವಾರು ತಿಂಗಳುಗಳ ಚಿಕಿತ್ಸೆಯ ನಂತರ ಗುಣಮುಖರಾಗಿದ್ದಾರೆ ಎಂದು ವಾದ ಮಂಡಿಸಿದರು.
ಹೆರಾಲ್ಡ್ ಅವರನ್ನು ಒಳಗೊಂಡಿರುವ ಸೀಕೋಸ್ಟ್ ಮೀಡಿಯಾ ಗ್ರೂಪ್, ವಿಡಿಯೋಗಾಗಿ ಸಾರ್ವಜನಿಕ ದಾಖಲೆಗಳನ್ನು ನೀಡುವಂತೆ ಮನವಿ ಮಾಡಿತ್ತು. ಹೀಗಾಗಿ ಯಾರ್ಕ್ ಅಧಿಕಾರಿಗಳು ಬುಧವಾರ ತಡವಾಗಿ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಸತ್ಯಾಸತ್ಯೆತೆಯನ್ನು ಪರಿಶೀಲಿಸಿದ ನ್ಯಾಯಾಧೀಶರು ಸ್ಟೀಫನ್ ಬ್ರೆನ್ನನ್ಗೆ $325,000 (ರೂ. 2,40,33,750) ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ನಾಯಿ ಕಚ್ಚಿ ಗಾಯಗೊಳಿಸಿರುವುದರಿಂದ ಆ ಕಾರಿನ ಚಾಲಕನಿಗೆ ಈಗ ಕೋಟ್ಯಂತರ ರೂ. ಪರಿಹಾರವೂ ಸಿಕ್ಕಿದೆ.