ವಾಷಿಂಗ್ಟನ್ : ಪ್ರತಿಭಟನಾಕಾರರು ಹೌಸ್ ಚೇಂಬರ್ ಕಡೆಗೆ ನುಗ್ಗುತ್ತಿರುವಾಗ ಟ್ರಂಪ್ ಬೆಂಬಲಿಗರಾಗಿದ್ದ ಮಹಿಳೆ ಆ್ಯಶ್ಲಿ ಬಬ್ಬಿತ್ ಮೇಲೆ ನಮ್ಮ ಸಿಬ್ಬಂದಿಯೊಬ್ಬರು ಗುಂಡು ಹಾರಿಸಿದ್ದಾರೆ ಎಂದು ಯುಎಸ್ ಕ್ಯಾಪಿಟಲ್ ಪೊಲೀಸರು ತಿಳಿಸಿದ್ದಾರೆ.
ಕ್ಯಾಪಿಟಲ್ ಮೇಲಿನ ಹಿಂಸಾತ್ಮಕ ದಾಳಿಯ ವೇಳೆ ಸ್ಯಾನ್ ಡಿಯಾಗೋ ಮೂಲದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರಾಗಿದ್ದ ಮಹಿಳೆಯ ಮೇಲೆ ಶೂಟ್ ಮಾಡಲಾಗಿತ್ತು. ಮೃತ ಮಹಿಳೆ ಅಕ್ರಮ ವಲಸೆ ಸೇರಿದಂತೆ ಇತರ ವಿಚಾರಗಳಲ್ಲಿ ಅಧ್ಯಕ್ಷ ಟ್ರಂಪ್ನ್ನು ಪ್ರಶ್ನಿಸುವವರ ವಿರುದ್ಧ ಕಟು ನಿಲುವನ್ನು ಹೊಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓದಿ : ಗುಂಡು ತಗುಲಿ ಸಾವು ಸಂಭವಿಸೋಕೂ ಮುನ್ನ ಆಕೆಯ ಕೊನೆಯ ಟ್ವೀಟ್ ಹೀಗಿತ್ತು..
ಬಬ್ಬಿತ್ ಚುನಾವಣಾ ವಂಚನೆಯ ಕುರಿತು ಅಧ್ಯಕ್ಷ ಟ್ರಂಪ್ ಮತ್ತು ಬೆಂಬಲಿಗರ ಆಧಾರ ರಹಿತ ಪೋಸ್ಟ್ಗಳನ್ನು ಆಗಾಗ ಶೇರ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಯುಎಸ್ ಕ್ಯಾಪಿಟಲ್ಗೆ ನುಗ್ಗಿದ ನೂರಾರು ಪ್ರತಿಭಟನಾಕಾರರಲ್ಲಿ ಬಬ್ಬಿತ್ ಕೂಡ ಒಬ್ಬರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಬಬ್ಬಿತ್ ಸಾವಿನ ಕುರಿತು ಪ್ರತಿಕ್ರಿಯೆ ನೀಡಿರುವ ಆಕೆಯ ಪತಿ, "ಅವಳು ತನ್ನ ದೇಶವನ್ನು ಪ್ರೀತಿಸುತ್ತಿದ್ದಳು, ಮತ್ತು ಅವಳು ತನ್ನ ದೇಶವನ್ನು ಬೆಂಬಲಿಸುವುದು ಸರಿಯೆಂದು ಭಾವಿಸಿದ್ದನ್ನು ಮಾಡುತ್ತಿದ್ದಳು" ಎಂದು ಹೇಳಿದ್ದಾರೆ.
ಓದಿ : ಕ್ಯಾಪಿಟಲ್ ಮೇಲಿನ ದಾಳಿಗೆ ಟ್ರಂಪ್ ಖಂಡನೆ : ಬೈಡನ್ ಪರ ಬ್ಯಾಟಿಂಗ್
ಕ್ಯಾಪಿಟಲ್ ದಾಳಿಯ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಇತರ ಮೂವರನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲಬಾಮಾ ಅಥೆನ್ಸ್‌ನ 55 ವರ್ಷದ ಕೆವಿನ್ ಗ್ರೀಸನ್, ಜಾರ್ಜಿಯಾ ಕೆನ್ನೆಸಾವ್‌ನ 34 ವರ್ಷದ ರೋಸನ್ನೆ ಬಾಯ್ಲ್ಯಾಂಡ್ ಮತ್ತು ಪೆನ್ಸಿಲ್ವೇನಿಯಾ ರಿಂಗ್‌ಟೌನ್‌ನ 50 ವರ್ಷದ ಬೆಂಜಮಿನ್ ಫಿಲಿಪ್ಸ್ ಮೃತರು. ಗಲಭೆಯ ಸಂದರ್ಭದಲ್ಲಿ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿರುವುದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.