ವರ್ಜೀನಿಯಾ : ಕಾರಿನಲ್ಲೇ ಮಗುವನ್ನು ಹೆಚ್ಚು ಕಾಲ ಬಿಟ್ಟುಹೋದ ಪರಿಣಾಮ 11 ತಿಂಗಳ ಮಗುವೊಂದು ಮೃತಪಟ್ಟಿರುವ ಘಟನೆ ವರ್ಜೀನಿಯಾದಲ್ಲಿ ನಡೆದಿದೆ.
ಈ ಕುರಿತು ಉತ್ತರ ವರ್ಜೀನಿಯಾದ ಪೊಲೀಸರು ಪ್ರತಿಕ್ರಿಯಿಸಿದ್ದು, ಪ್ರಾಥಮಿಕ ತನಿಖೆ ಪ್ರಕಾರ ಮಗುವಿನ ತಂದೆ ಮಗುವನ್ನು ಕಾರಿನ ಹಿಂದಿನ ಸೀಟಿನಲ್ಲಿ ಇರಿಸಿದ್ದಾಗಿ ತಿಳಿದು ಬಂದಿದೆ. ನಂತರ ಅತ್ತ ಗಮನಹರಿಸದೇ ಬೇರೊಂದು ಕಾರನ್ನು ಬಳಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಹವಾಮಾನ ವರದಿ ಪ್ರಕಾರ ವರ್ಜೀನಿಯಾದಲ್ಲಿ ಮಗು ಸಾವನ್ನಪ್ಪಿದ ದಿನ ತಾಪಮಾನ 80ಸೆ. ನಿಂದ 90 ಸೆಂಟಿಗ್ರೇಡ್ಗೆ ಏರಿತ್ತು. ಬೇರೊಂದು ಕಾರಿನಲ್ಲಿ ಮನೆಗೆ ಹಿಂತಿರುಗಿದ ನಂತರ ತಂದೆ ಮತ್ತೊಂದು ಮಗು ಎತ್ತಿಕೊಳ್ಳಲು ಮನೆಯೊಳಗಿನ ಡೇ ಕೇರ್‌ನೊಳಗೆ ಹೋದಾಗ ಆ 11 ತಿಂಗಳ ಮಗುವನ್ನು ಕಾರಿನಲ್ಲೇ ಬಿಟ್ಟಿದ್ದು ನೆನಪಾಗಿದೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.