ಫಿಲಡೆಲ್ಫಿಯಾ: ವಾಹನಗಳ ಬಳಕೆಯಿಂದ ಪರಿಸರ ಮಾಲಿನ್ಯ ಜೊತೆಗೆ ಅಪಘಾತದಂತಹ ಪ್ರಕರಣಗಳು ಹೆಚ್ಚಾದರೂ ಮನುಷ್ಯರಿಗೆ ಇವು ತುಂಬಾ ಉಪಕಾರಿ. ಅಂತೆಯೇ ಆಟೋಪೈಲಟ್‌ನಲ್ಲಿ ಕಾರು ಸಂಚರಿಸುತ್ತಿರುವಾಗಲೇ ಫಿಲಡೆಲ್ಫಿಯಾ ಮಹಿಳೆ ಟೆಸ್ಲಾ ಮುಂಭಾಗದ ಸೀಟಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.
-
My wife courageously delivered our baby girl, Maeve, in the front seat of our @Tesla model 3 en route to the hospital - here’s the story @PhillyInquirer ! @elonmusk @Tesla thx for the autopilot 🤝💯 #tesbaby https://t.co/JPMfh7AyhN
— Keating Sherry (@KeatingSherry) December 16, 2021 " class="align-text-top noRightClick twitterSection" data="
">My wife courageously delivered our baby girl, Maeve, in the front seat of our @Tesla model 3 en route to the hospital - here’s the story @PhillyInquirer ! @elonmusk @Tesla thx for the autopilot 🤝💯 #tesbaby https://t.co/JPMfh7AyhN
— Keating Sherry (@KeatingSherry) December 16, 2021My wife courageously delivered our baby girl, Maeve, in the front seat of our @Tesla model 3 en route to the hospital - here’s the story @PhillyInquirer ! @elonmusk @Tesla thx for the autopilot 🤝💯 #tesbaby https://t.co/JPMfh7AyhN
— Keating Sherry (@KeatingSherry) December 16, 2021
ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ: 65 ವರ್ಷದ ಉದ್ಯಮಿಯಿಂದ 6 ಸಾವಿರ ಕಿಮೀ ಬೈಕ್ ರೈಡ್
ಈ ದಂಪತಿಯ ಕಾರು ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ. ಪರಿಣಾಮ ಪತಿ ತನ್ನ ಹೆಂಡತಿಗೆ ಸಹಾಯ ಮಾಡುವ ಉದ್ದೇಶದಿಂದ ವಾಹನವನ್ನು ಆಟೋಪೈಲಟ್‌ನಲ್ಲಿ ಇರಿಸಿದ್ದಾನೆ.
ಈ ವೇಳೆ, ಕಾರು ತನ್ನಷ್ಟಕ್ಕೆ ತಾನು ಸಂಚರಿಸುತ್ತಿರುವಾಗಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಸೆಪ್ಟೆಂಬರ್‌ನಲ್ಲಿ ಜನಿಸಿದ ಈ ಮಗುವನ್ನು 'ಮೊದಲ ಟೆಸ್ಲಾ ಬೇಬಿ' ಎಂದು ಕರೆಯಲಾಗುತ್ತಿದೆ. ಫಿಲಡೆಲ್ಫಿಯಾ ನಿವಾಸಿ 33 ವರ್ಷದ ಯಿರಾನ್ ಶೆರ್ರಿ ಅವರು ಮಗುವಿಗೆ ಜನ್ಮ ನೀಡಿದ್ದು, ತನ್ನ ಪತಿ ಕೀಟಿಂಗ್ ಹಾಗೂ ಮೂರು ವರ್ಷದ ಮಗ ರಾಫಾ ಆ ವೇಳೆ ಕಾರಿನಲ್ಲಿ ಇದ್ದರು.
ನಾವು ರಜಾದಿನಗಳನ್ನು ಆನಂದಿಸಲು ಮತ್ತು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಎದುರು ನೋಡುತ್ತಿದ್ದೇವೆ ಎಂದು ಕೀಟಿಂಗ್ ಬರೆದುಕೊಂಡಿದ್ದಾರೆ.