ನ್ಯೂಯಾರ್ಕ್: ಡಿಸೆಂಬರ್ ಅಂತ್ಯದಲ್ಲಿ ವಿತರಣೆಗೆ ಲಭ್ಯವಿರುವ ಮೊಡೆರ್ನಾ ಮತ್ತು ಫಿಜರ್‌ನಿಂದ ತಲಾ 20 ಮಿಲಿಯನ್ ಲಸಿಕೆ ಪ್ರಮಾಣ ಹೊಂದುವ ಭರವಸೆ ಇದೆ ಎಂದು ಫಿಜರ್ ಇಂಕಾ ಅಧಿಕಾರಿಗಳು ಹೇಳಿದ್ದಾರೆ.
ಫಿಜರ್ ಇಂಕ್ ಜರ್ಮನ್ ಪಾಲುದಾರರೊಂದಿಗೆ ಅಭಿವೃದ್ಧಿಪಡಿಸುತ್ತಿರುವ ಕೋವಿಡ್-19 ಲಸಿಕೆಯ ಕೊನೆಯ ಹಂತದ ಪ್ರಯೋಗದ ಅಂತಿಮ ಫಲಿತಾಂಶ ಲಸಿಕೆ ಶೇ. 95ರಷ್ಟು ಪರಿಣಾಮಕಾರಿದೆ ಎಂಬುದನ್ನು ತೋರಿಸಿದೆ. ಈ ಲಸಿಕೆಯ ಪರಿಣಾಮ ವಯಸ್ಸು ಮತ್ತು ಜನಾಂಗೀಯ ಆಧಾರದ ಮೇಲೆ ಸ್ಥಿರವಾಗಿದೆ. ಯಾವುದೇ ಅಡ್ಡಪರಿಣಾಮಗಳಿಲ್ಲ. ಇದು ರೋಗನಿರೋಧಕ ಶಕ್ತಿಯಾಗಿದೆ ಎಂಬುದರ ಸಂಕೇತ ಎಂದು ಔಷಧಿ ತಯಾರಕ ಸಂಸ್ಥೆ ತಿಳಿಸಿದೆ.
ಮೊದಲು ಲಸಿಕೆಯನ್ನು ವೈದ್ಯಕೀಯ ಮತ್ತು ನರ್ಸಿಂಗ್ ಹೋಮ್ ಕೆಲಸಗಾರರಂತಹ ದುರ್ಬಲ ಗುಂಪುಗಳಿಗೆ ಮತ್ತು ಗಂಭೀರ ಆರೋಗ್ಯ ಸ್ಥಿತಿ ಇರುವ ಜನರಿಗೆ ನೀಡಲಾಗುವುದು. ಫಿಜರ್ ಲಸಿಕೆಗೆ ಅಮೆರಿಕ ಈಗಾಗಲೇ 100 ಮಿಲಿಯನ್ ಡೋಸ್ನಷ್ಟು ಮುಂಗಡ ಆರ್ಡರ್ ಮಾಡಿದೆ. ನಮ್ಮ ಬಳಿ ಆಹಾರ ಮತ್ತು ಔಷಧ ಆಡಳಿತದಿಂದ (ಎಫ್ಡಿಎ) ತುರ್ತು ಬಳಕೆಗಾಗಿ ಅರ್ಜಿ ಸಲ್ಲಿಸಲು ಬೇಕಾದ ಎರಡು ತಿಂಗಳ ಸುರಕ್ಷತಾ ಡೇಟಾ ಕಂಪನಿ ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವೈರಸ್‌ನಿಂದಾಗಿ ನಿರ್ದಿಷ್ಟವಾಗಿ ಅಪಾಯದಲ್ಲಿರುವ 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ದಕ್ಷತೆಯು ಶೇ. 94ಕ್ಕಿಂತ ಅಧಿಕವಾಗಿದೆ. ಪ್ರಯೋಗದ ಆರಂಭಿಕ ಫಲಿತಾಂಶಗಳು ಲಸಿಕೆಯು ಶೇ. 90ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂಬುದನ್ನು ತೋರಿಸಿದ ಒಂದು ವಾರದ ನಂತರ ಅಂತಿಮ ವಿಶ್ಲೇಷಣೆ ಹೊರ ಬರುತ್ತಿದೆ. ಮಾಡರ್ನಾ ಇಂಕ್ ಸೋಮವಾರ ತನ್ನ ಲಸಿಕೆಗಾಗಿ ಪ್ರಾಥಮಿಕ ಡೇಟಾ ಬಿಡುಗಡೆ ಮಾಡಿದೆ.
ಮೆಸೆಂಜರ್ ಆಆರ್ಎನ್ಎ (ಎಮ್ಆರ್ಎನ್ಎ) ಎಂದು ಕರೆಯಲ್ಪಡುವ ಹೊಸ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಿದ ಎರಡು ಲಸಿಕೆಗಳಿಂದ ನಿರೀಕ್ಷೆಗಿಂತ ಉತ್ತಮವಾದ ಫಲಿತಾಂಶ ಲಭ್ಯವಾಗಿದೆ ಎನ್ನಲಾಗಿದೆ.