ETV Bharat / international

360 ಡಿಗ್ರಿಯಲ್ಲಿ ಮೊದಲ ಹೈ-ಡೆಫಿನಿಷನ್ ಚಿತ್ರ ಕಳುಹಿಸಿದ ಮಾರ್ಸ್​ ರೋವರ್​​ - ನಾಸಾದ ಮಾರ್ಸ್ 2020

ಮಂಗಳ ಗ್ರಹದ ಮೇಲೆ ಪರ್ಸವೆರೆನ್ಸ್ ರೋವರ್ ತೆಗೆದುಕೊಂಡ ಮೊದಲ 360 ಡಿಗ್ರಿ ವಿಹಂಗಮ ನೋಟವನ್ನು ನಾಸಾ ಬಿಡುಗಡೆ ಮಾಡಿದೆ. ರೋವರ್‌ನ ಮಾಸ್ಟ್ ಅಥವಾ "ಹೆಡ್" 360 ಡಿಗ್ರಿಯಲ್ಲಿ ತಿರುಗಿದ ನಂತರ ಜೆಜೆರೊ ಕ್ರೇಟರ್‌ನಿಂದ ಮಾಸ್ಟ್‌ಕ್ಯಾಮ್- ಝೆಡ್ ತೆಗೆದ ಮೊದಲ ಹೈ-ಡೆಫಿನಿಷನ್ ಚಿತ್ರ ಇದಾಗಿದೆ.

Perseverance rover gives high-definition panoramic view of landing site
ಮಾರ್ಸ್ 2020 ಪರ್ಸಿವಿಯರೆನ್ಸ್‌ ಮಿಷನ್
author img

By

Published : Feb 25, 2021, 3:32 PM IST

ವಾಷಿಂಗ್ಟನ್: ಫೆಬ್ರವರಿ 18 ರಂದು ರೆಡ್ ಪ್ಲಾನೆಟ್​ ತಲುಪಿರುವ ನಾಸಾದ ಮಾರ್ಸ್ 2020 ಪರ್ಸಿವರೆನ್ಸ್‌ ರೋವರ್ ಮಂಗಳ ಗ್ರಹದಲ್ಲಿನ ಜೆಜೆರೊ ಕ್ರೇಟರ್‌ನಲ್ಲಿ ಭಾನುವಾರ ಸುತ್ತುವರೆದಿದೆ. ಅಲ್ಲದೇ 360 ಡಿಗ್ರಿಯಲ್ಲಿ ತಿರುಗಿದ ನಂತರ ರೋವರ್‌ನ ಮಾಸ್ಟ್‌ಕ್ಯಾಮ್- ಝೆಡ್ ಉಪಕರಣವು ತನ್ನ ಮೊದಲ ದೃಶ್ಯಾವಳಿಗಳನ್ನು ಸೆರೆಹಿಡಿದಿದೆ.

ನಾಸಾ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಇದು ರೋವರ್‌ನ ಎರಡನೇ ದೃಶ್ಯಾವಳಿಯಾಗಿದೆ. ಏಕೆಂದರೆ ರೋವರ್‌ನ ನ್ಯಾವಿಗೇಷನ್ ಕ್ಯಾಮೆರಾಗಳು ಅಥವಾ ನ್ಯಾವ್‌ಕ್ಯಾಮ್‌ಗಳು ಸಹ ಅದರಲ್ಲಿ ಇವೆ. ಫೆಬ್ರವರಿ 20 ರಂದು 360 ಡಿಗ್ರಿ ನೋಟದಲ್ಲಿ ರೋವರ್​ ದೃಶ್ಯವನ್ನು ಸೆರೆ ಹಿಡಿದಿದೆ.

ಮಾಸ್ಟ್‌ಕ್ಯಾಮ್-ಝೆಡ್ ಎಂಬುದು ಡ್ಯುಯಲ್-ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದ್ದು, ಕ್ಯಾಮೆರಾಗಳು ಜೂಮ್ ಇನ್ ಮಾಡಲು, ಫೋಕಸ್ ಮಾಡಲು ಮತ್ತು ಹೈ-ಡೆಫಿನಿಷನ್ ವಿಡಿಯೋವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತವೆ. ಜೊತೆಗೆ ಮಂಗಳ ಗ್ರಹದ ಮೇಲ್ಮೈಯ ವಿಹಂಗಮ ಬಣ್ಣ ಮತ್ತು 3 ಡಿ ಚಿತ್ರಗಳು, ನಿಕಟ ಮತ್ತು ದೂರದ ವಸ್ತುಗಳ ವಿವರವಾದ ಪರೀಕ್ಷೆಯನ್ನು ಮಾಡಲು ಸಹ ಇದು ಅನುಕೂಲವಾಗಲಿದೆ.

ಕ್ಯಾಮೆರಾಗಳು, ವಿಜ್ಞಾನಿಗಳಿಗೆ ಜೆಜೆರೊ ಕ್ರೇಟರ್​ನ ಭೌಗೋಳಿಕ ಇತಿಹಾಸ ಮತ್ತು ವಾಯುಮಂಡಲದ ಸ್ಥಿತಿಗತಿಗಳನ್ನು ನಿರ್ಣಯಿಸಲು ಸಹಾಯ ಮಾಡುತ್ತವೆ. ಅಲ್ಲದೇ ರೋವರ್​ನ ಇತರ ಉಪಕರಣಗಳಿಂದ ಹತ್ತಿರದಿಂದ ನೋಡಲು ಯೋಗ್ಯವಾದ ಬಂಡೆಗಳು ಮತ್ತು ಕೆಸರನ್ನು ಗುರುತಿಸಲು ಸಹಾಯ ಮಾಡುತ್ತದೆ. ಭವಿಷ್ಯದಲ್ಲಿ ಭೂಮಿಗೆ ಮರಳಲು ರೋವರ್ ಯಾವ ಬಂಡೆಯ ಸ್ಯಾಂಪಲ್ ಮಾಡಬೇಕು ಮತ್ತು ಹೇಗೆ ಸಂಗ್ರಹಿಸಬೇಕು ಎಂಬುದನ್ನು ನಿರ್ಧರಿಸಲು ಕ್ಯಾಮೆರಾಗಳು ಮಿಷನ್ ತಂಡಕ್ಕೆ ಸಹಾಯ ಮಾಡುತ್ತವೆ ಎಂದು ಪ್ರಕಟಣೆ ತಿಳಿಸಿದೆ.

ಓದಿ:ಫೆ.18 ರಂದು ಮಂಗಳಗ್ರಹದಲ್ಲಿ ಇಳಿಯಲಿದೆ ರೋವರ್.. ಏನಿದರ ವಿಶೇಷತೆ

142 ಚಿತ್ರಗಳಿಂದ ಒಟ್ಟಿಗೆ ಕೂಡಿಸಲ್ಪಟ್ಟ, ಹೊಸದಾಗಿ ಬಿಡುಗಡೆಯಾದ ದೃಶ್ಯಾವಳಿ ದೂರದಲ್ಲಿರುವ ಪ್ರಾಚೀನ ನದಿ ಡೆಲ್ಟಾದ ಕುಳಿ ರಿಮ್ ಮತ್ತು ಬಂಡೆಯ ಮುಖವನ್ನು ಬಹಿರಂಗಪಡಿಸುತ್ತದೆ. ಕ್ಯಾಮೆರಾ ವ್ಯವಸ್ಥೆಯು ರೋವರ್ ಬಳಿ 0.1 ರಿಂದ 0.2 ಇಂಚುಗಳಷ್ಟು (3 ರಿಂದ 5 ಮಿಲಿಮೀಟರ್) ಮತ್ತು ಹಾರಿಜಾನ್ ಉದ್ದಕ್ಕೂ ದೂರದ ಇಳಿಜಾರುಗಳಲ್ಲಿ 6.5 ರಿಂದ 10 ಅಡಿ (2 ರಿಂದ 3 ಮೀಟರ್) ವಿವರಗಳನ್ನು ಬಹಿರಂಗಪಡಿಸಬಹುದು.

ಮಾರ್ಸ್ 2020 ಪರ್ಸಿವರೆನ್ಸ್‌ ಮಿಷನ್ ನಾಸಾದ ಮೂನ್ ಟು ಮಾರ್ಸ್ ಪರಿಶೋಧನಾ ವಿಧಾನದ ಒಂದು ಭಾಗವಾಗಿದೆ. ಇದರಲ್ಲಿ ಚಂದ್ರನಿಗೆ ಆರ್ಟೆಮಿಸ್ ಕಾರ್ಯಾಚರಣೆಗಳು ಸೇರಿವೆ. ಇದು ಕೆಂಪು ಗ್ರಹದ ಮಾನವ ಪರಿಶೋಧನೆಗೆ ಸಿದ್ಧವಾಗಲು ಸಹಾಯ ಮಾಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.