ವಾಷಿಂಗ್ಟನ್: ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ್ಯಾನ್ಸಿ ಪೆಲೋಸಿಯನ್ನು ಹೌಸ್ ಸ್ಪೀಕರ್ ಆಗಿ ಭಾನುವಾರ ಅಧಿಕೃತ ಘೋಷಣೆ ಮಾಡಿದ್ದು, ಈ ಮೂಲಕ ನಾನ್ಸಿ ಎರಡನೇ ಬಾರಿಗೆ ಸ್ಪೀಕರ್ ಆಗಿ ಮರು ಆಯ್ಕೆಯಾಗಿದ್ದಾರೆ.
216 ಸದಸ್ಯರ ಮತಗಳ ಮೂಲಕ ನಾನ್ಸಿ ಪೆಲೋಸಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಅವರೊಂದಿಗೆ ಪೈಪೋಟಿಯಲ್ಲಿದ್ದ ಹೌಸ್ನ ಅಲ್ಪಸಂಖ್ಯಾತ ನಾಯಕ ಕೆವಿನ್ ಮೆಕಾರ್ಥಿ 209 ಮತಗಳನ್ನು ಪಡೆದಿದ್ದಾರೆ. ಸೆನೆಟರ್ ಟಮ್ಮಿ ಡಕ್ವರ್ತ್ ಒಂದು ಮತ ಪಡೆದರೆ, ಪ್ರತಿನಿಧಿ ಹಕೀಮ್ ಜೆಫ್ರಿಸ್ ಒಂದು ಮತ ಪಡೆದರು ಎಂದು ಸಿಎನ್ಎನ್ ವರದಿ ಮಾಡಿದೆ.
ಹೌಸ್ ನ ಡೆಮೋಕ್ರಾಟ್ ಉಸ್ತುವಾರಿಯಾಗಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಪೆಲೋಸಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಈಕೆ 2006 ರಿಂದ 2011 ರವರೆಗೆ ಸ್ಪೀಕರ್ ಆಗಿ ಸದನವನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
"ಇದು ಅಧಿಕಾರದಲ್ಲಿನ ತಮ್ಮ ಕೊನೆಯ ಅವಧಿ. ಹಾಗೇ ಸ್ಪೀಕರ್ ಆಗಿ ಎರಡು ಅವಧಿಗಿಂತ ಹೆಚ್ಚು ಅವಧಿಯನ್ನು ಪೂರೈಸುವುದಿಲ್ಲ" ಎಂದು ಪೆಲೋಸಿ ಹೇಳಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.