ವಾಷಿಂಗ್ಟನ್(ಅಮೆರಿಕ): ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ದೋಷಾರೋಪಣೆ ಪಟ್ಟಿ ರೆಡಿಯಾಗಿದೆ ಎಂದು ಘೋಷಿಸಿದ್ದಾರೆ. ಈ ಸಂಬಂಧ ಡೆಮಾಕ್ರಟ್ಸ್ ಮತಕ್ಕೆ ಹಾಕಲು ಸನ್ನದ್ದರಾಗಿದ್ದು, ಕ್ರಿಸ್ಮಸ್ ವೇಳೆಗೆ ಈ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಘೋಷಿಸಿದ್ದಾರೆ
'ಟ್ರಂಪ್ ಅಧಿಕಾರ ದುರುಪಯೋಗದಲ್ಲಿ ತೊಡಗಿದ್ದಾರೆ, ಅವರು ನಮ್ಮ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಿದ್ದಾರೆ. ಅಷ್ಟೇಅಲ್ಲದೇ ದೇಶದ ಚುನಾವಣೆಯ ಸಮಗ್ರತೆಗೆ ಧಕ್ಕೆ ತಂದಿದ್ದಾರೆ. ಇನ್ನೂ ರಾಷ್ಟ್ರಪತಿಗಳೂ ನಮಗೆ ಬೇರೆ ಯಾವ ದಾರಿಯನ್ನೂ ಉಳಿಸಿಲ್ಲ ಹೀಗಾಗಿ ದೋಷಾರೋಪಣೆ ಹೊರಿಸಲಾಗಿದ್ದು, ಈ ಸಂಬಂಧ ಕರಡು ಸಹ ಸಿದ್ಧಗೊಳಿಸಲಾಗಿದೆ ಎಂದು ಪೆಲ್ಲೋಸಿ ತಿಳಿಸಿದ್ದಾರೆ.
ಮಂಗಳವಾರ ಜಾರಿ ಮಾಡಿದ್ದ ವರದಿಯಲ್ಲಿ 'ಅಧ್ಯಕ್ಷರ ಕ್ರಮಗಳು ಸಂವಿಧಾನವನ್ನು ಗಂಭೀರವಾಗಿ ಉಲ್ಲಂಘಿಸಿವೆ ಅಧ್ಯಕ್ಷ ಟ್ರಂಪ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇನ್ನೂ ಮುಂಬರಲಿರುವ 2020ರ ಮರುಚುನಾವಣೆಗೆ ವಿದೇಶಿ ಸರ್ಕಾರವೊಂದರ ಹಸ್ತಕ್ಷೇಪಕ್ಕೆ ಪ್ರೇರೇಪಿಸುವ ಮೂಲಕ ದೇಶದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಪೆಲ್ಲೋಸಿ ಹೇಳಿದ್ದರು ಎಂದು ಹೇಳಲಾಗಿದೆ.
ಟ್ರಂಪ್ ವಿರುದ್ಧ ದೋಷಾರೋಪಣೆಗೆ ಸಾಕಷ್ಟು ಪುರಾವೆಗಳಿವೆ. ರಿಪಬ್ಲಿಕನ್ ಪಕ್ಷದ ನಾಯಕ(ಅಧ್ಯಕ್ಷ ಟ್ರಂಪ್) ರಾಷ್ಟ್ರೀಯ ಹಿತಾಸಕ್ತಿಗಳನ್ನು ಮೀರಿದ ಖಾಸಗಿ ರಾಜಕೀಯ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸಿದ್ದಾರೆ. ಅವರು ಮುಂಬರಲಿರುವ 2020ರ ಮರುಚುನಾವಣೆಯಲ್ಲಿ ಉಕ್ರೇನ್‌ಗೆ ಸಹಾಯ ಮಾಡಲು ವಿದೇಶಿ ಹಸ್ತಕ್ಷೇಪವನ್ನು ಪ್ರೇರೇಪಿಸುತ್ತಿದ್ದಾರೆ ಎಂದು ದೂರಿ ಅಮೆರಿಕದ ಸಂಸತ್ತಿನ ಗುಪ್ತಚರ ಸಮಿತಿಯು ಟ್ರಂಪ್ ವಿರುದ್ಧ ದೋಷಾರೋಪಣೆ ಪಟ್ಟಿ ಸಿದ್ಧಪಡಿಸಲಾಗಿದೆ.