ETV Bharat / international

ಕೋವಿಡ್, ​ಫ್ಲಾಯ್ಡ್‌​ ಹತ್ಯೆ ತಂದಿತ್ತ ಸಂಕಷ್ಟ.. ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್​​ಗೆ ಸೋಲು!?

ಕೊರೊನಾ ಸೋಂಕಿತರ ಸಂಖ್ಯೆಯೂ ದಿನೆದಿನೇ ರಾಕೆಟ್​​​ ವೇಗದಲ್ಲಿ ಮುನ್ನುಗ್ಗುತ್ತಿವೆ. ಆರ್ಥಿಕ ಸುಂಕಗಳು ಮತ್ತು ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ನವೆಂಬರ್‌ನಲ್ಲಿ ಗೆಲುವಿನ ನಗೆ ಬೀರಲೇಬೇಕೆಂದು ಟ್ರಂಪ್​ ನಾನಾ ಪ್ರಯತ್ನ ನಡೆಸುತ್ತಿದ್ದಾರೆ. ಇತ್ತ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವ ಟ್ರಂಪ್​​ಗೆ ಕೊರೊನಾ ಮುಳ್ಳುತಂತಿಯಂತೆ ಅಡ್ಡವಾಗಿದೆ.

author img

By

Published : Jun 8, 2020, 9:37 PM IST

Pandemic, racial unrest force Trump campaign to recalibrate
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​​

ವಾಷಿಂಗ್ಟನ್​​: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಐದು ತಿಂಗಳಿದ್ದರೂ ಮತದಾರರು ಡೊನಾಲ್ಡ್​ ಟ್ರಂಪ್​​​ ಅವರ ಹಣೆಬರಹವನ್ನು ಈಗಾಗಲೇ ನಿರ್ಧರಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಟ್ರಂಪ್ ​ಕಲ್ಪಿಸಿಕೊಂಡಿರುವುದಕ್ಕಿಂತ ವಿಭಿನ್ನ ರಾಜಕೀಯ ವಾಸ್ತವತೆಯಲ್ಲಿ ಅವರಿಗೆ ಸೋಲು ಖಚಿತ ಎನ್ನಲಾಗುತ್ತಿದೆ.

ಟ್ರಂಪ್​​ ಹಣೆಬರಹ ಬದಲಾಗಲು ಇರುವ ಕಾರಣಗಳು ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿವೆ. ಅತಿ ಹೆಚ್ಚು ಕೊರೊನಾ ವೈರಸ್​​​ ಪ್ರಕರಣ ಸಂಖ್ಯೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ ಅಮೆರಿಕ. ವೈರಸ್​​ ಕಾಣಿಸಿಕೊಂಡಾಗಿನಿಂದ ಈವರೆಗೂ ಅದನ್ನು ನಿಯಂತ್ರಿಸಲು ಪೂರ್ಣ ಪ್ರಮಾಣದಲ್ಲಿ ವಿಫಲವಾಗಿದ್ದಾರೆ ಎಂಬ ಮಾತುಗಳು ಟ್ರಂಪ್​ ವಿರುದ್ಧ ಕೇಳಿ ಬರುತ್ತಿರುವ ಮಾತು ಹೊಸದೇನಲ್ಲ. ಆದರೆ, ಈಗ ಆ ಮಾತುಗಳು ದೇಶವ್ಯಾಪಿ ಹಬ್ಬಿವೆ.

ಕೊರೊನಾ ವಿಷಯದಲ್ಲಿ ಎರಡು ಆಲೋಚನೆಗಳನ್ನು ಹೊಂದಿದ್ದ ಮತದಾರರು, ಮೇ 25ರಂದು ಜಾರ್ಜ್​​ ಫ್ಲಾಯ್ಡ್​ ಅವರ ಹತ್ಯೆಯ ನಂತರ ಒಂದೇ ಆಲೋಚನೆಗೆ ಬಂದರು. ಅದೇ ಟ್ರಂಪ್​​ ಅವರನ್ನು ಸೋಲಿಸುವುದು. ಸಾಲದೆಂಬಂತೆ ಜಾರ್ಜ್​ ಫ್ಲಾಯ್ಡ್​ ಹತ್ಯೆ ಖಂಡಿಸಿ ಅನೇಕ ರಾಷ್ಟ್ರಗಳು ಅಮೆರಿಕ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಈ ಘಟನೆ ನಂತರ ಟ್ರಂಪ್ ಕಠಿಣ ರಾಜಕೀಯ ಭವಿಷ್ಯವನ್ನು ಎದುರಿಸುತ್ತಿರುವುದು ಅಕ್ಷರಶಃ ಸತ್ಯ. ಅಮೆರಿಕಾದ್ಯಂತ ಬೃಹತ್ ಜನಾಂಗೀಯ ವಿರೋಧಿ ಪ್ರತಿಭಟನೆಗಳು ಮತ್ತು ಕೊರೊನಾ ವೈರಸ್​​ ನಿಯಂತ್ರಿಸುವಲ್ಲಿ ಟ್ರಂಪ್​ ವಿಫಲವಾಗಿದ್ದು, ಮರುಚುನಾವಣೆ ನಡೆಸುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ.

ಕೊರೊನಾ ಸೋಂಕಿತರ ಸಂಖ್ಯೆಯೂ ದಿನೆದಿನೇ ರಾಕೆಟ್​​​ ವೇಗದಲ್ಲಿ ಮುನ್ನುಗ್ಗುತ್ತಿವೆ. ಆರ್ಥಿಕ ಸುಂಕಗಳು ಮತ್ತು ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ನವೆಂಬರ್‌ನಲ್ಲಿ ಗೆಲುವಿನ ನಗೆ ಬೀರಲೇಬೇಕೆಂದು ಟ್ರಂಪ್​ ನಾನಾ ಪ್ರಯತ್ನ ನಡೆಸುತ್ತಿದ್ದಾರೆ. ಇತ್ತ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವ ಟ್ರಂಪ್​​ಗೆ ಕೊರೊನಾ ಮುಳ್ಳುತಂತಿಯಂತೆ ಅಡ್ಡವಾಗಿದೆ. ಆಂತರಿಕ ಪ್ರಚಾರ ಸಮೀಕ್ಷೆಗಳಲ್ಲಿ, ಸಾರ್ವಜನಿಕ ಮತದಾನ ಮತ್ತು ರಾಜ್ಯಗಳಲ್ಲಿ ಟ್ರಂಪ್​​ಗೆ ಬೆಂಬಲ ಕುಸಿದಿದೆ ಎಂಬ ಫಲಿತಾಂಶವೇ ಬರುತ್ತಿದೆ.

ಟ್ರಂಪ್​​ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಲು ಮುಂದಾಗಿದ್ದಾರೆ. ಆದರೆ, ಟ್ರಂಪ್​​​ನ ಆಡಳಿತದಿಂದ ಬೇಸತ್ತಿರುವ ಸ್ವಪಕ್ಷದವರೇ ಪಕ್ಷ ಬಲಗೊಳಿಸಲು ಮುಂದೆ ಬರುತ್ತಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಪಕ್ಷಕ್ಕೆ ಬರುತ್ತಿದ್ದ ಫಂಡ್​ ಕೂಡ ಕೊರೊನಾ ವೈರಸ್​​ನಿಂದ ಸ್ಥಗಿತಗೊಂಡಿದೆ. ಹೀಗಾಗಿ, ಟ್ರಂಪ್​​ ಕಷ್ಟದ ಹಾದಿಗೆ ಸಿಲುಕಿದ್ದಾರೆ.

ಬೇಸಿಗೆಯಲ್ಲಿ ರ್ಯಾಲಿಗಳನ್ನು ನಿಗದಿಪಡಿಸಲು ಅಭಿಯಾನವು ಸಿದ್ಧವಾಗಬೇಕೆಂದು ಟ್ರಂಪ್ ಒತ್ತಾಯಿಸಿದ್ದರು. ಸಹಾಯಕರು ಇದು ಅಪಾಯಕಾರಿ ಎಂದು ಎಚ್ಚರಿಸಿದ್ದರು. ಪ್ರಚಾರ ಕಾರ್ಯಕ್ರಮವೊಂದರಲ್ಲಿ ವೈರಸ್ ಹರಡಿದರೆ ನಮ್ಮ ವಿರುದ್ಧ ನಕಾರಾತ್ಮಕ ಸುದ್ದಿ ಹಬ್ಬುತ್ತದೆ ಎಂದು ಸಲಹೆಗಾರರು ಹೇಳಿದ್ದರು. ಹೀಗಾಗಿ ಸಹಿ ಸಂಗ್ರಹ ಅಭಿಯಾನವನ್ನೂ ನಿಲ್ಲಿಸಿದ್ದರು. ಇತ್ತ ಪ್ರತಿಪಕ್ಷ ಕೊರೊನಾ ವೈರಸ್​ ನಿಯಂತ್ರಿಸಲು ವಿಫಲವಾದ ಮತ್ತು ಜನಾಂಗೀಯ ತಾರತಮ್ಯವನ್ನೇ ತನ್ನ ಅಸ್ತ್ರವಾಗಿಸಿಕೊಂಡು ಟ್ರಂಪ್​ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.