ವಾಷಿಂಗ್ಟನ್: ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ನಿಷೇಧಿತ ಹಕ್ಕಾನಿ ಉಗ್ರ ಸಂಘಟನೆಯ ಜಾಲ ತನ್ನ ಕಾರ್ಯ ಚಟುವಟಿಕೆಗಳನ್ನು ವೃದ್ಧಿಸಿಕೊಂಡಿದೆ. ಇದರ ಜೊತೆಗೆ, ಪಾಕಿಸ್ತಾನ ಮೂಲದ ಇತರ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ನಿರಂತರವಾಗಿ, ನಿರ್ಭಯವಾಗಿ ಕಾರ್ಯನಿರ್ವಹಿಸುತ್ತಲೇ ಇರುವುದು ಜಗತ್ತಿನ ಭದ್ರತೆಗೆ ಸವಾಲು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಪ್ರಸ್ತಾಪಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಅಫ್ಘಾನಿಸ್ತಾನದಲ್ಲಿನ ಘಟನೆಗಳು ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಕ್ರಮಗಳ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.
ನಿಷೇಧಿತ ಹಕ್ಕಾನಿ ಉಗ್ರರ ಕೃತ್ಯಗಳಿಂದ ಆತಂಕವಿದೆ. ಅಫ್ಘಾನಿಸ್ತಾನ, ಭಾರತದ ವಿರುದ್ಧ ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಇ-ಮೊಹಮ್ಮದ್‌ನಂತಹ ಗುಂಪುಗಳು ನಿರ್ಭಯ ಮತ್ತು ಪರೋಕ್ಷ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದರು.
ಇದನ್ನೂ ಓದಿ: ಆಫ್ಘನ್ನರ ವಲಸೆ ನಿಯಂತ್ರಿಸಲು ಧಾರ್ಮಿಕ ನಾಯಕರಿಗೆ ತಾಲಿಬಾನ್ ಮೊರೆ: ಏರ್ಪೋರ್ಟ್ಗೆ ಬಂದವರಿಗೆ ಥಳಿತ