ETV Bharat / international

ಅಮೆರಿಕದಲ್ಲಿ ಕೋವಿಡ್ ಅವಾಂತರ: ಒಂದು ಲಕ್ಷಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು - ಅಮೆರಿಕದಲ್ಲಿ ಕೋವಿಡ್ ಪರಿಸ್ಥಿತಿ

ಅಮೆರಿಕದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ 18,500ಕ್ಕೂ ಹೆಚ್ಚು ಕೋವಿಡ್-19 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Over 100,000 US citizens hospitalized with COVID-19
ಅಮೆರಿಕದಲ್ಲಿ ಕೋವಿಡ್ ಅವಾಂತರ: ಒಂದು ಲಕ್ಷಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು
author img

By

Published : Jan 4, 2022, 10:36 AM IST

ವಾಷಿಂಗ್ಟನ್( ಅಮೆರಿಕ): ಕೋವಿಡ್ ಜಗತ್ತಿನಾದ್ಯಂತ ಮತ್ತೊಮ್ಮೆ ಆತಂಕ ಸೃಷ್ಟಿಸುವ ಮಟ್ಟಕ್ಕೆ ತಲುಪಿದೆ. ಅಮೆರಿಕದಲ್ಲಿ ಕೇವಲ ನಾಲ್ಕು ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ಕೋವಿಡ್ ಪ್ರಕರಣಗಳು ತಲುಪಿದ್ದು, ಪ್ರಸ್ತುತ 1 ಲಕ್ಷಕ್ಕೂ ಹೆಚ್ಚು ನಾಗರಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಜನವರಿ 14, 2021ರಂದು ಕೋವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 1 ಲಕ್ಷದ 42 ಸಾವಿರಕ್ಕಿಂತಲೂ ಹೆಚ್ಚಿತ್ತು. ಈ ಸಂಖ್ಯೆ ದಾಖಲೆ ಸೃಷ್ಟಿ ಮಾಡಿತ್ತು.

ಇದಾದ ನಂತರ ಒಂದು ಲಕ್ಷದ ತಲುಪಿದ್ದು, ಸೆಪ್ಟೆಂಬರ್ 11 2021ರಂದು ಮಾತ್ರ. ಅಲ್ಲಿಂದ ಇಲ್ಲಿವರೆಗೆ ಕೋವಿಡ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇತ್ತು. ಈಗ ಮತ್ತೊಮ್ಮೆ ಒಂದು ಲಕ್ಷ ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಹೌದು, ಈಗ ಅಮೆರಿಕದಲ್ಲಿ ಆಸ್ಪತ್ರೆಗೆ ಸೇರಿಕೊಂಡಿರುವರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಸಿಎನ್​ಎನ್​ ವರದಿ ಮಾಡಿದೆ.

ಏಳು ರೋಗಿಗಳಲ್ಲಿ ಓರ್ವನಿಗೆ ಕೋವಿಡ್: ಈಗ ಸದ್ಯಕ್ಕೆ ಅಮೆರಿಕದ ಆಸ್ಪತ್ರೆಗಳಲ್ಲಿ ಮುಕ್ಕಾಲು ಭಾಗದಷ್ಟು ಹಾಸಿಗೆಗಳು ಭರ್ತಿಯಾಗಿವೆ. ಆಸ್ಪತ್ರೆಯಲ್ಲಿರುವ ಏಳು ಮಂದಿ ರೋಗಿಗಳಲ್ಲಿ ಓರ್ವ ಕೋವಿಡ್ ರೋಗಿ ಇರುತ್ತಾನೆ ಎಂದು ಅಂಕಿ ಅಂಶಗಳು ಬಹಿರಂಗಪಡಿಸುತ್ತಿವೆ.

ತೀವ್ರ ನಿಗಾ ಘಟಕದಲ್ಲಿ 18,500ಕ್ಕೂ ಹೆಚ್ಚು ಕೋವಿಡ್-19 ರೋಗಿಗಳಿದ್ದಾರೆ. ಸುಮಾರು ಶೇಕಡಾ 78 ತೀವ್ರ ನಿಗಾ ಘಟಕದ ಹಾಸಿಗೆಗಳು ಭರ್ತಿಯಾಗಿವೆ. ಅವುಗಳಲ್ಲಿ ಶೇಕಡಾ 25ರಷ್ಟು ಹಾಸಿಗೆಗಳು ಕೋವಿಡ್ ರೋಗಿಗಳಿಂದ ಭರ್ತಿಯಾಗಿವೆ.

ಪ್ರಸ್ತುತ ನ್ಯೂಜೆರ್ಸಿ, ಓಹಿಯೋ ಮತ್ತು ಡೆಲವೇರ್‌ನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಪ್ರತಿ 1 ಲಕ್ಷ ಜನರಿಗೆ 50ಕ್ಕೂ ಹೆಚ್ಚು ಮಂದಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರೆ, ಅಲಾಸ್ಕಾ ಮತ್ತು ವ್ಯೋಮಿಂಗ್‌ನಲ್ಲಿ ಒಂದು ಲಕ್ಷ ಮಂದಿಗೆ 10ಕ್ಕಿಂತ ಕಡಿಮೆ ಮಂದಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಮೆರಿಕದ ಸೆಂಟರ್​ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್‌ ನೀಡಿದ ಮಾಹಿತಿಯಂತೆ ಡಿಸೆಂಬರ್​ನ ಕೊನೆ ವಾರದಲ್ಲಿ ಪ್ರತಿ ದಿನ 500ಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತಿದೆ. ಈಗ ಸದ್ಯಕ್ಕೆ 2 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್​ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಗೆ ಅಮೆರಿಕದಲ್ಲಿ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಚೀನಾದಲ್ಲಿ ಭೂಕುಸಿತ- 5 ಮಂದಿ ಸಾವು, 9 ಮಂದಿ ಕಣ್ಮರೆ.. 720 ಸಿಬ್ಬಂದಿಯಿಂದ ಶೋಧಕಾರ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.