ETV Bharat / international

ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್​ನತ್ತ ಕಾರು ನುಗ್ಗಿಸಿದ ವ್ಯಕ್ತಿ ಹತ್ಯೆ: ಘಟನೆಯಲ್ಲಿ ಪೊಲೀಸ್​ ಸಾವು - ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್​ನತ್ತ ಕಾರು ನುಗ್ಗಿಸಿದ ವ್ಯಕ್ತಿ

ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್ ಬಳಿ ವ್ಯಕ್ತಿಯೋರ್ವ ಬ್ಯಾರಿಕೇಡ್​ ಮುರಿದುಕೊಂಡು ಕಾರು ನುಗ್ಗಿಸಿದ ಪರಿಣಾಮ ಓರ್ವ ಪೊಲೀಸ್​ ಅಧಿಕಾರಿ ಸಾವನ್ನಪ್ಪಿದ ಘಟನೆ ನಡೆದಿದೆ.

one-police-officer-killed-after-car-rams-us-capitol-complex-suspect-shot-dead
ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್​ನತ್ತ ಕಾರು ನುಗ್ಗಿಸಿದ ವ್ಯಕ್ತಿ ಹತ್ಯೆ
author img

By

Published : Apr 3, 2021, 4:26 AM IST

ವಾಷಿಂಗ್ಟನ್​: ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್ ಬಳಿ ವ್ಯಕ್ತಿಯೋರ್ವ ಬ್ಯಾರಿಕೇಡ್​ ಮುರಿದುಕೊಂಡು ಕಾರು ನುಗ್ಗಿಸಿದ ಪರಿಣಾಮ ಓರ್ವ ಪೊಲೀಸ್​ ಅಧಿಕಾರಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ. ಬಳಿಕ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿ ಹತ್ಯೆಯಾಗಿದ್ದಾನೆ.

ಶುಕ್ರವಾರ ಕಾರು ಚಾಲಕನು ಇಬ್ಬರು ಪೊಲೀಸ್​ ಅಧಿಕಾರಿಗಳನ್ನು ಗುರಿಯಾಗಿಸಿ ಬ್ಯಾರಿಕೇಡ್​ ಮುರಿದುಕೊಂಡು ಯುಎಸ್​​ ಕಾಪಿಟಲ್​ ಕಾಂಪ್ಲೆಕ್ಸ್​ನತ್ತ ವೇಗವಾಗಿ ಚಲಾಯಿಸಿದ್ದಾನೆ. ಈ ವೇಳೆ ಅಧಿಕಾರಿಗಳ ಮಾತು ಕೇಳದ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿದ್ದು, ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೊಂದು ಭಯೋತ್ಪಾದಕ ಎಂದು ಅನ್ನಿಸುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೆತ್ತಗಾದ್ರಾ ಪಾಕ್ ಪಿಎಂ ಇಮ್ರಾನ್​.. ಭಾರತದ ಜತೆ ಮತ್ತೆ ಸಖ್ಯೆ ಬೆಳೆಸಲು ಉನ್ನತಮಟ್ಟದ ಸಭೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.