ವಾಷಿಂಗ್ಟನ್: ಇಡೀ ಜಗತ್ತಿಗೆ ತಲ್ಲಣ ಸೃಷ್ಟಿಸುತ್ತಿರುವ ಕೋವಿಡ್‌ನ ಹೊಸ ತಳಿ ಒಮಿಕ್ರಾನ್ ಡೆಲ್ಟಾಗಿಂತ ಅತಿ ವೇಗವಾಗಿ ಹರಡಬಲ್ಲದು ಹಾಗೂ ಲಸಿಕೆಯ ಪರಿಣಾಕಾರಿಯನ್ನು ತಗ್ಗಿಸುತ್ತದೆ ಎಂದು ಲಭ್ಯವಿರುವ ವರದಿಗಳನ್ನು ಆಧರಿಸಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ರೂಪಾಂತರಿ ಡೆಲ್ಟಾ ಪ್ರಪಂಚದಲ್ಲೇ ಹೆಚ್ಚಿನ ಕೋವಿಡ್ ಪ್ರಕರಣಗಳಿಗೆ ಕಾರಣವಾಗಿದೆ. ಆದರೆ ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿರುವ ಒಮಿಕ್ರಾನ್ ವೇಗವಾಗಿದೆ. ಡಿಸೆಂಬರ್ 9ರವರೆಗೆ ಈ ವೈರಸ್ 63 ದೇಶಗಳಿಗೆ ಹರಡಿದೆ. ಡೆಲ್ಟಾ ಕಡಿಮೆ ಇದ್ದ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿ ಒಮಿಕ್ರಾನ್ ಹರಡುತ್ತಿದೆ.
ಒಮಿಕ್ರಾನ್‌ನ ಹರಡುವಿಕೆಯ ದರವು ಪ್ರತಿರಕ್ಷಣಾ ಪ್ರತಿಕ್ರಿಯೆಗಳಿಗೆ ಕಡಿಮೆ ಒಲವು, ಹೆಚ್ಚಿನ ಹರಡುವಿಕೆ ಅಥವಾ ಎರಡರ ಸಂಯೋಜನೆಯಾಗಿದೆಯೇ ಎಂದು ಹೇಳಲು ಸಾಧ್ಯವಿಲ್ಲ ಎಂದು ದಂತ್ತಾಂಶದ ಮಾಹಿತಿ ಆಧರಿಸಿ ಹೇಳಿದೆ. ಆರಂಭಿಕ ಪುರಾವೆಗಳ ಪ್ರಕಾರ, ಒಮಿಕ್ರಾನ್ ಸೋಂಕು ಲಸಿಕೆ ಪರಿಣಾಮಕಾರಿಯನ್ನು ಕಡಿಮೆ ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ವಿಭಾಗ ಹೇಳಿದೆ.
ಸಮುದಾಯಗಳಿಗೆ ಹರಡುವಿಕೆಯ ಡೆಲ್ಟಾ ರೂಪಾಂತರವನ್ನು ಒಮಿಕ್ರಾನ್ ಮೀರಿಸುವ ಸಾಧ್ಯತೆಯಿದೆ. ಈ ಹೊಸ ವೈರಸ್ ಇಲ್ಲಿಯವರೆಗೆ ಸೌಮ್ಯ ಅನಾರೋಗ್ಯ ಅಥವಾ ಲಕ್ಷಣರಹಿತ ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ. ಆದರೆ ಮುಂದಿನ ದಿನಗಳಲ್ಲಿ ಸೋಂಕು ತೀವ್ರವಾಗಬಹುದು ಎಂದು ಡಬ್ಲ್ಯೂಹೆಚ್‌ಒ ಎಚ್ಚರಿಕೆ ನೀಡಿದೆ.
ಇದೇ ವರ್ಷದ ನವೆಂಬರ್ 24 ರಂದು ಒಮಿಕ್ರಾನ್ ವೈರಸ್ ಬಗ್ಗೆ ದಕ್ಷಿಣ ಆಫ್ರಿಕಾ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ನೀಡಿತ್ತು. ಒಮಿಕ್ರಾನ್‌ಗೆ ಫೈಜರ್ ಹೆಚ್ಚು ಪರಿಣಾಮಕಾರಿ ಎಂದು ಹೇಳಿಕೊಂಡಿತ್ತು. ಆದರೆ ಇದೀಗ ಡಬ್ಲ್ಯೂಹೆಚ್‌ಒನ ಈ ಹೇಳಿಕೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಒಮಿಕ್ರಾನ್ ವಿರುದ್ಧ ಹೋರಾಡಲು ಮೂರನೇ ಬೂಸ್ಟರ್ ಲಸಿಕೆ ಪಡೆಯುವಂತೆ ತಮ್ಮ ಜನರಿಗೆ ಕರೆ ನೀಡಿವೆ.
ಇದನ್ನೂ ಓದಿ: ಒಮಿಕ್ರೋನ್ ತಡೆಗೆ ಡೆಲ್ಟಾ ಮಾದರಿಯಲ್ಲೇ ಗಡಿಗಳಲ್ಲಿ ಕಟ್ಟೆಚ್ಚರವಹಿಸಿ - ವಿಶ್ವ ಆರೋಗ್ಯ ಸಂಸ್ಥೆ