ಡೆನ್ವರ್: ಇಡೀ ವಿಶ್ವಾದ್ಯಂತ ಇದೀಗ ಭಾರಿ ಆತಂಕ ಸೃಷ್ಟಿಸಿರುವ ರೂಪಾಂತರಗೊಂಡಿರುವ ವೈರಸ್ ವಿಶ್ವದ ದೊಡ್ಡಣ್ಣ ಅಮೆರಿಕೆಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಅಮೆರಿಕದ ಕೊಲೊರಾಡೋದಲ್ಲಿ ಮೊದಲ ಬಾರಿ ವ್ಯಕ್ತಿಯೊಬ್ಬರಲ್ಲಿ ರೂಪಾಂತರಗೊಂಡಿರುವ ಕೊರೊನಾ ವೈರಸ್ ಪತ್ತೆಯಾಗಿದೆ. ಆದರೆ ಸೋಂಕಿತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿರುವುದು ಅಲ್ಲಿನ ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.
ಈತನಿಗೆ ವೈರಸ್ ತಗುಲಿದ್ದಾದರೂ ಹೇಗೆ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಡೆನ್ವರ್ ಮೆಟ್ರೋ ಪ್ರದೇಶ ಸಮೀಪದ ಗ್ರಾಮೀಣ ಭಾಗದಿಂದ ಈ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯಕ್ಕೆ ಅಮೆರಿಕದಲ್ಲಿ ಈ ರೂಪಾಂತರಗೊಂಡಿರುವ ವೈರಸ್ ಅತಿ ಅಪರೂಪವಾಗಿದೆ.
ಇದನ್ನೂ ಓದಿ: ಬ್ರಿಟನ್ನಿಂದ ಬಂದವರು ಸುಳ್ಳು ಮಾಹಿತಿ ನೀಡಿದ್ರೆ ಕ್ರಮ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಎಚ್ಚರಿಕೆ
ಆದರೆ ಮೊದಲ ಪ್ರಕರಣದ ಟ್ರಾವೆಲ್ ಹಿಸ್ಟರಿಯ ಕೊರತೆಯಿಂದ ಸೋಂಕು ಮತ್ತಷ್ಟು ಹರಡುವ ಭೀತಿ ಎದುರಾಗಿದೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಬ್ರಿಟನ್‌ಗೆ ಪ್ರಯಾಣ ಬೆಳೆಸಿದ್ದವರ ಸಂಪರ್ಕದಿಂದ ಸೋಂಕು ಪತ್ತೆಯಾಗಿರಬಹುದು ಎಂದು ವಿಜ್ಞಾನಿ ಟ್ರೆವರ್ ಬೆಡ್ಫೋರ್ಡ್ ಶಂಕೆ ವ್ಯಕ್ತಪಡಿಸಿದ್ದಾರೆ.
ಸದ್ಯ ಸೋಂಕಿತ ವ್ಯಕ್ತಿಯನ್ನು ಈಗಾಗಲೇ ಎಲ್ಬರ್ಟ್ ಕೌಂಟಿಯ ಆಗ್ನೇಯ ಭಾಗದ ಡೆನ್ವೆರ್‌ನಲ್ಲಿ ಐಸೋಲೇಷನ್‌ನಲ್ಲಿ ಇಡಲಾಗಿದೆ ಎಂದು ಅಲ್ಲಿನ ರಾಜ್ಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಲಂಡನ್ನಿಂದ ಬಂದ ಒಂದೇ ಕುಟುಂಬ ನಾಲ್ವರಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆ
ಎಲ್ಬರ್ಟ್ ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು, ಈಸ್ಟ್-ವೆಸ್ಟ್ ಹೈವೇ ಇಲ್ಲಿನ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಇದೇ ಭಾಗದಲ್ಲಿ ಶಂಕಿತ ಎರಡನೇ ಪ್ರಕರಣವೂ ದಾಖಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ವಿಭಾಗದ ನಿರ್ದೇಶಕ ಡ್ವೇನ್ ಸ್ಮಿತ್ ತಿಳಿಸಿದ್ದಾರೆ. ಇಬ್ಬರೂ ಎಲ್ಬರ್ಟ್ ಕೌಂಟಿ ಕಮ್ಯುನಿಟಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಭಾಗದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.