ನ್ಯೂಯಾರ್ಕ್: ಪಾಕಿಸ್ತಾನ ಒಂದೆಡೆ ಕಾಶ್ಮೀರ ವಿಚಾರವನ್ನೇ ದೊಡ್ಡದಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದರೆ ಇತ್ತ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಉಗ್ರ ಪೋಷಕ ರಾಷ್ಟ್ರದೊಂದಿಗೆ ಮಾತುಕತೆ ಅಸಾಧ್ಯ ಎಂದು ಖಡಕ್ಕಾಗಿ ಹೇಳಿದ್ದಾರೆ.
ಕಾಶ್ಮೀರಕ್ಕಾಗಿ ವಿಶ್ವನಾಯಕರನ್ನು ಮೆಚ್ಚಿಸುವಲ್ಲಿ ಪಾಕ್ ಸೋತಿದೆ: ಇಮ್ರಾನ್ ಖಾನ್
ಪಾಕಿಸ್ತಾನದೊಂದಿಗೆ ಮಾತುಕತೆಗೆ ಯಾವುದೇ ಅಭ್ಯಂತರವಿಲ್ಲ, ಆದರೆ ಟೆರರಿಸ್ತಾನದೊಂದಿಗೆ ಭಾರತ ಯಾವುದೇ ಕಾರಣಕ್ಕೂ ಶಾಂತಿ ಮಾತುಕತೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಉಗ್ರರ ಸಂಪೂರ್ಣ ನಿರ್ಮೂಲನೆ ಮಾಡಿದ ಬಳಿಕವಷ್ಟೇ ಕಾಶ್ಮೀರ ಸಮಸ್ಯೆಗೆ ಶಾಂತಿ ಮಾತುಕತೆ ಸಾಧ್ಯ ಎಂದು ಪರೋಕ್ಷವಾಗಿ ಭಾರತದ ವಿದೇಶಾಂಗ ಸಚಿವರು ಹೇಳಿದ್ದಾರೆ.
-
Big picture interaction @AsiaSociety. Thank @MrKRudd for the great conversation. pic.twitter.com/52Srayqbri
— Dr. S. Jaishankar (@DrSJaishankar) September 24, 2019 " class="align-text-top noRightClick twitterSection" data="
">Big picture interaction @AsiaSociety. Thank @MrKRudd for the great conversation. pic.twitter.com/52Srayqbri
— Dr. S. Jaishankar (@DrSJaishankar) September 24, 2019Big picture interaction @AsiaSociety. Thank @MrKRudd for the great conversation. pic.twitter.com/52Srayqbri
— Dr. S. Jaishankar (@DrSJaishankar) September 24, 2019
ಕಾಶ್ಮೀರ ವಿಚಾರದಲ್ಲಿ ಅನಗತ್ಯ ಮೂಗು ತೂರಿಸುವ ಬದಲು ತನ್ನ ದೇಶಕ್ಕೆ ಒಳಿತಾಗುವ ಕೆಲವನ್ನಾದರೂ ಮಾಡಲಿ. ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯವಿದೆ ಎಂದಿರುವ ಜೈಶಂಕರ್, ಕಾಶ್ಮೀರ ಸಮಸ್ಯೆಯೊಂದೇ ಬಿಕ್ಕಟ್ಟು ಸೃಷ್ಟಿಸಿದೆ ಎಂದು ನ್ಯೂಯಾರ್ಕ್ನಲ್ಲಿ ನಡೆದ ಏಷ್ಯಾ ಸೊಸೈಟಿ ಸಂವಾದ ಕಾರ್ಯಕ್ರಮದಲ್ಲಿ ಜೈಶಂಕರ್ ಹೇಳಿದ್ದಾರೆ.