ನ್ಯೂಯಾರ್ಕ್: ಕೊರೊನಾದಿಂದ ಕಂಗೆಟ್ಟ ನ್ಯೂಯಾರ್ಕ್ ನಿಧಾನವಾಗಿ ರಿ ಓಪನ್ ಆಗ್ತಿದೆ. ಅತಿಹೆಚ್ಚು ಕೊರೊನಾ ಪೀಡಿತವಾಗಿದ್ದ ವಿಶ್ವದ ದೊಡ್ಡ ಮಹಾನಗರಿಯಲ್ಲೀಗ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ನ್ಯೂಯಾರ್ಕ್ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಕೊರೊನಾ ಅಟ್ಟಹಾಸ ಕಡಿಮೆ ಆಗುತ್ತಿದೆ. ಪರಿಣಾಮ ಅಲ್ಲಿನ ಆಡಳಿತ ಲಾಕ್ಡೌನ್ ವಾಪಸ್ ಪಡೆಯುತ್ತಿದೆ.
ಓದಿ : ಭಾರತ, ಚೀನಾ ಸಂಕಷ್ಟದಲ್ಲಿದ್ದು, ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇವೆ: ಟ್ರಂಪ್
ಕಡಿಮೆ ಎಂದರೂ ನಿನ್ನೆ ನ್ಯೂಯಾರ್ಕ್ನಲ್ಲಿ 664 ಹೊಸ ಪಾಸಿಟಿವ್ ಕೇಸ್ಗಳು ವರದಿಯಾಗಿವೆ. 1142 ಜನ ಹಾಸ್ಪಿಟಲೈಸೇಷನ್ ಆಗಿದ್ದಾರೆ. ಭಾನುವಾರ ನ್ಯೂಯಾರ್ಕ್ನಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ.
ಆದರೂ ಅಲ್ಲಿನ ಸರ್ಕಾರ ಆರ್ಥಿಕತೆಯ ಹಿತದೃಷ್ಟಿಯಿಂದ ಮತ್ತು ಸಹಜ ಜೀವನಕ್ಕೆ ಮರಳುವ ದೃಷ್ಟಿಯಿಂದ ಲಾಕ್ಡೌನ್ ಸಡಿಲಿಕೆ ಮಾಡುತ್ತಿದ್ದಾರೆ.