ನ್ಯೂಯಾರ್ಕ್: ಪ್ರಪಂಚದಾಂದ್ಯಂತ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ನ್ಯೂಯಾರ್ಕ್ನಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರಬಾರದು ಎಂದು ಗವರ್ನರ್ ಆ್ಯಂಡ್ರೂ ಕ್ಯುಮೊ ಆದೇಶಿಸಿದ್ದಾರೆ.
ವಿಶ್ವದಾದ್ಯದಂತ 3000ಕ್ಕು ಹೆಚ್ಚು ಜೀವಗಳನ್ನು ಬಲಿ ತಗೆದುಕೊಂಡಿರುವ ಕೊರೊನಾ ವೈರಸ್ ಹೆಚ್ಚು ಜನರಿಗೆ ಹರಡದಂತೆ ತಡೆಯುವ ಉದ್ದೇಶದಿಂದ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಯಾವುದೇ ಕಾರ್ಯಕ್ರಮದಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿ ಆಜ್ಞೆ ಹೊರಡಿಸಿದ್ದಾರೆ.
ರೆಸ್ಟೋರೆಂಟ್, ಬಾರ್ಗಳು ಹಾಗೂ ಯಾವುದೇ ಸಭೆ ಸಮಾರಂಭಗಳಲ್ಲಿ 500ಕ್ಕು ಹೆಚ್ಚು ಜನರು ಸೇರಬಾರದು. ಈ ನಿರ್ಧಾರ ನಾಟಕೀಯ ಅನಿಸಿದರೂ ಅನಿವಾರ್ಯವಾಗಿದೆ. ಆದರೆ ಶಾಲಾ ಕಾಲೇಜುಗಳಿಗೆ, ಆಸ್ಪತ್ರೆ ಹಾಗೂ ದೊಡ್ಡ ಸಂಚಾರಗಳಿಗೆ(ಮೆಟ್ರೊ, ವಿಮಾನ) ಈ ಆದೇಶ ಅನ್ವಯವಾಗುವುದಿಲ್ಲ. ಆದರೆ ಅಲ್ಲಿ ವೈರಸ್ ಕುರಿತು ಜಾಗೃತಿಯಿಂದರಬೇಕು ಎಂದು ಕ್ಯಮೊ ತಿಳಿಸಿದ್ದಾರೆ.
ಈಗಾಗಲೆ 1000 ಕ್ಕೂ ಹೆಚ್ಚಿನ ಜನರಲ್ಲಿ ಕೊರೊನಾ ವೈರಸ್ಗೆ ತುತ್ತಾಗಿರುವುದು ಖಚಿತವಾಗಿದೆ. ಈ ಕಾರಣದಿಂದ ಅನಿವಾರ್ಯವಾಗಿ ಅಲ್ಲಿನ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.